ಹಣ ಕಾಸು

ಹಣ ನಮ್ಮದೇ, ಆದ್ರೆ ನಮ್ಗೆ ಇಷ್ಟ ಬಂದ ಹಾಗೆ ಖರ್ಚು ಮಾಡುವ ಹಾಗಿಲ್ಲ! ಯಾಕೆ ಗೊತ್ತಾ???

490

ನೀವು 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುತ್ತಿದ್ದೀರಾ. ಹಾಗಾದರೆ ಇಲ್ಲಿ ನೋಡಿ.

ಒಂದು ವೇಳೆ ನೀವು 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುವುದು ಕಂಡುಬಂದರೆ, ಅಷ್ಟೆ ಪ್ರಮಾಣದ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ

 

ಅಲ್ಲದೇ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಆ ಕುರಿತು ‘blackmoneyinfo@incometax.gov.in’. ಗೆ ಮೇಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಜನತೆಯನ್ನು ಕೋರಿದೆ.

ಕಪ್ಪು ಹಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 1, 2017ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವುದನ್ನು ನಿಷೇಧಿಸಿದೆ.

ಕೇಂದ್ರ ಸರ್ಕಾರ ಆದೇಶದ ಪ್ರಕಾರ ಒಂದೇ ವಹಿವಾಟಿನಲ್ಲಿ ಅಥವಾ ಒಂದೇ ಸಂದರ್ಭ, ಈವೆಂಟ್ ಅಥವಾ ಓರ್ವ ವ್ಯಕ್ತಿಗೆ ಸಂಬಂಧಪಟ್ಟಂತೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವನ್ನು ಯಾರೂ ನಡೆಸುವಂತಿಲ್ಲ.

2 ಲಕ್ಷ ರುಪಾಯಿಗಿಂತ ಮೇಲೆ ನೀವು ವ್ಯವಹಾರ ಮಾಡುವುದಾದರೆ ಅದನ್ನು ಚೆಕ್, ಅಥವಾ ಆನ್ಲೈನ್ನಲ್ಲಿ ನಿಮ್ಮ ವ್ಯವಹಾರ ಮಾಡಿಕೊಳ್ಳಬಹುದು.

ಒಂದು ವೇಳೆ ನಿಯಮ ತಪ್ಪಿದಲ್ಲಿ ಆದಾಯ ತೆರಿಗೆ ನೀತಿಯ ಸೆಕ್ಷನ್ 269ST ಅನ್ವಯ ಅಪರಾಧಿಗಳಿಗೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ: ತಿಂಗಳಿಗೆ 55 ಹೂಡಿಕೆ ಮಾಡಿ ಮಾಸಿಕ ಪಿಂಚಣಿ 3000 ಪಡೆಯುವುದು ಹೇಗೆ…?

    ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ…

  • ಸುದ್ದಿ

    8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಸಕ ಸುನಿಲ್ ನಾಯ್ಕರಿಂದ ಉಚಿತ ಬೈಸಿಕಲ್ ವಿತರಣೆ

    ಭಟ್ಕಳ: ಪಾಲಕರಾದವರು ತಮ್ಮ ಮಕ್ಕಳಿಗೆ ಶಿಕ್ಷಣ ಒಂದರಲ್ಲಿಯೇ ಒತ್ತಡ ಹಾಕದೆ ಕ್ರೀಡೆ, ಸಾಂಸ್ಕೃತಿ ಹಾಗು ಎಲ್ಲಾ ರಂಗದಲ್ಲಿಯೂ ಕೂಡ ಹೆಚ್ಚು ಪ್ರೋತ್ಸಾಹ ನೀಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುವಂತೆ ಮಾಡಬೇಕು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಅವರು ಗುರುವಾರದಂದು ಸರಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ಸರಕಾರಿ ಪ್ರೌಢಶಾಲೆ ಸೋನಾರಕೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ…

  • ಸುದ್ದಿ

    ‘ಮೇಕಪ್ ಮಾಡದ ದೃಶ್ಯಗಳನ್ನೆ ಹೆಚ್ಚು ತೋರಿಸಿದ್ದಾರೆ’ ಎಂದ ಚೈತ್ರಾ ಹೇಳಿಕೆಗೆ ಸುದೀಪ್ ಗರಂ..!

    ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…

  • ಆರೋಗ್ಯ, ಉಪಯುಕ್ತ ಮಾಹಿತಿ

    ನಿಂಬೆ ರಸಕ್ಕೆಅರಿಶಿನ ಬೆರೆಸಿ ಕುಡಿಯುವುದರಿಂದ ಆಗುವ 9 ಅದ್ಬುತ ಲಾಭಗಳು..!

    ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಇವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ. 1.ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. 2.ಹೃದಯ ಸಂಬಂಧಿ ಖಾಯಿಲೆಗೆ ಇದು ಹೇಳಿ ಮಾಡಿಸಿದ…

  • ಸುದ್ದಿ

    ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

    ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…

  • ಸುದ್ದಿ

    ಬ್ರೆಕಿಂಗ್ ನ್ಯೂಸ್!ಇನ್ನು ಮುಂದೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಸಿಗಲಿದೆ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ…

    ಶಬರಿಮಲೈ  ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಯಥಾವತ್ ಆಗಿ ಪಾಲಿಸುತ್ತೇವೆ ಎಂದು ತಿಳಿಸಿದೆ. ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ…