ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಸ್ವಿಡ್ಜರ್ಲೆಂಡ್ ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಹಾರ್ಟ್ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದೆ. 2003ರಿಂದ್ಲೇ ಈ ಬಗ್ಗೆ ಸಂಶೋಧನೆ ಆರಂಭವಾಗಿತ್ತು.

ನಿದ್ದೆಯ ಅವಧಿ ಮತ್ತು ಸಮಯ ಎಲ್ಲವನ್ನೂ ಮಾನಿಟರ್ ಮಾಡಲಾಗಿದೆ. ಒಂದಿಡೀ ವಾರದಲ್ಲಿ 3-7 ಬಾರಿ ಹಗಲು ಹೊತ್ತು ನಿದ್ದೆ ಮಾಡಿರುವವರ ಪೈಕಿ ಬಹುತೇಕರು ವೃದ್ಧರು, ಪುರುಷರು, ಧೂಮಪಾನಿಗಳು ಹಾಗೂ ಅತಿಯಾದ ತೂಕ ಹೊಂದಿರುವವರೇ ಆಗಿದ್ದರು.

ಶೇ.58 ಮಂದಿ ಹಗಲು ನಿದ್ದೆ ಮಾಡುತ್ತಿರಲಿಲ್ಲ. 667 ಜನರು ವಾರದಲ್ಲಿ ಒಂದೆರಡು ಬಾರಿ ಹಗಲು ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರು. 411 ಮಂದಿ 3 ರಿಂದ 5 ಬಾರಿ ಹಗಲಲ್ಲಿ ನಿದ್ದೆ ಹೋಗುತ್ತಿದ್ದರು. ಇವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಹಗಲು ನಿದ್ದೆ ಹೃದಯದ ಆರೋಗ್ಯಕ್ಕೆ ಪೂರಕ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ನೀವೇನಾದ್ರೂ ಆಯಸ್ಸು ಹೆಚ್ಚಿಸಿಕೊಳ್ಳಬೇಕೆಂದುಕೊಂಡಿದ್ದರೆ ವಾರದಲ್ಲಿ ಒಂದೆರಡು ಬಾರಿ ಹಗಲಲ್ಲಿ ನಿದ್ದೆ ಮಾಡಿ. ಇದರಿಂದ ನಿಮ್ಮ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚೆನ್ನಾಗಿಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ.ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ ಬೇಕಾ ದ ಶಿಕ್ಷಕರು, ಸಾವಿರಾರು ರುಪಾಯಿ ಶುಲ್ಕ ಪಡೆಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರನ್ನಾಗಿ ದುಡಿಸಿ ಕೊಂಡಿರುವ ಘಟನೆ ತಾಲೂಕಿನ ಚೇಳೂರು ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಸಾವಿರಾರು ರುಪಾಯಿ ಶುಲ್ಕ ಪಾವತಿಸಿ ಖಾಸಗಿ…
ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ…
ರೈಲ್ವೆ ಸಚಿವಾಲಯದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ವೆಬ್‌ಸೈಟ್ https://icf.indianrailways.gov.in/ ನಲ್ಲಿ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್, ಪೇಂಟರ್, ವೆಲ್ಡರ್, ಎಂಎಲ್ಟಿ ರೇಡಿಯಾಲಜಿ, ಎಂಎಲ್ಟಿ ಪ್ಯಾಥಾಲಜಿ ಮತ್ತು ಪಾಸಾ ಮುಂತಾದ ವಿವಿಧ ವಹಿವಾಟುಗಳ ವಿರುದ್ಧ ಒಟ್ಟು 1000 ಖಾಲಿ ಹುದ್ದೆಗಳು ಲಭ್ಯವಿದೆ. ಅರ್ಹ ಅಭ್ಯರ್ಥಿಗಳು icf.indianrailways.gov.in ನಲ್ಲಿ ಐಸಿಎಫ್‌ನ ಅಧಿಕೃತ ಸೈಟ್ ಮೂಲಕ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್ ಆಕ್ಟ್- 1961 ರ ಅಡಿಯಲ್ಲಿ ತರಬೇತಿ…
ಮೈಗ್ರೇನ್ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.