ಸಿನಿಮಾ

ಸ್ಯಾಂಡಲ್ ವುಡ್ ನಟ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ…

342

ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು  ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು, ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಧ್ರುವ  ಸಾವನ್ನಪ್ಪಿದ್ದಾರೆ. ವಿಕಲಚೇತನ ಪತ್ರಿಭೆಯಾಗಿದ್ದ ಧ್ರುವ, ಸಿಸಿಎಲ್‌ ಮತ್ತು ನಟನೆ ಮೂಲಕ ಗುರುತಿಸಿಕೊಂಡಿದ್ದರು. ನಟ ಧ್ರುವ, ಕಿಚ್ಚ ಸುದೀಪ್ ಅವರ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಉತ್ತಮ ಆಟಗಾರರಾಗಿದ್ದರು.

35 ವರ್ಷದ  ಧ್ರುವ ಶರ್ಮಾ ಪತ್ನಿ ಮತ್ತು 7 ವರ್ಷದ ಮಗಳು, 4 ವರ್ಷದ ಮಗನನ್ನು ಅಗಲಿದ್ದಾರೆ. ಧ್ರುವ ಅವರ ತಂದೆ ಸುರೇಶ್ ಶರ್ಮಾ ಕೂಡ ನಟ, ನಿರ್ಮಾಪರ,  ಫೈನಾನ್ಶಿಯರ್ ಹಾಗೂ ನಿರ್ದೇಶಕರಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಮೋಘ ಅಭಿನಯ ಹಾಗೂ ಕ್ರಿಕೆಟ್‌ ನಿಂದ ಎಲ್ಲರ ಗಮನ ಸೆಳೆದಿದ್ದರು. 2007ರಲ್ಲಿ ತಮ್ಮ 25ನೇ ವರ್ಷ ವಯಸ್ಸಿನಲ್ಲಿ ಸ್ನೇಹಾಂಜಲಿ ಎಂಬ ಚಲನಚಿತ್ರದಲ್ಲಿ ನಾಯಕರಾಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಧ್ರುವ್ ಅವರ ಹಠಾತ್ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ….!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು. ಒಮ್ಮೊಮ್ಮೆ ಮನುಷ್ಯರಿಗಿಂದ ಪ್ರಾಣಿಗಳೇ ಉತ್ತಮ ಎನ್ನಿಸುತ್ತದೆ. ಮನುಷ್ಯರು ಬಡವ ಶ್ರೀಮಂತ ಎಂಬ ಬೇಡತೊರುತ್ತಾರೆ ಆದರೆ ಪಾನಿಗಳು ಹಾಗಲ್ಲ, ಅವುಗಳಿಗೆ ಬದುಕುವುದಷ್ಟೇ ಗೊತ್ತು.

  • ಜ್ಯೋತಿಷ್ಯ

    ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • ಸುದ್ದಿ

    ಈ ವರ್ಷವೂ ಗೂಗಲ್ ಸರ್ಚ್​ನಲ್ಲಿ ನಂ 1 ಸ್ಥಾನ ಉಳಿಸಿಕೊಂಡ ಸೆಲಿಬ್ರೆಟಿ…ಯಾರು ಗೊತ್ತೇ ?

    ಪ್ರತಿವರ್ಷದ ಹಾಗೆಯೇ ಈ ವರ್ಷವು ಕೂಡ ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ? ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದೆ ಏನಪ್ಪಾ ಅದು ಅಂತೀರಾ? ಹೌದು ಈ ವರ್ಷದ ಅರ್ಧದಷ್ಟು ಭಾಗ ಈಗಾಗಲೇ ಮುಗಿದಿದೆ. ಇನ್ನೂ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್​ ಆದವರು ಯಾರು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಈ ಭಾರಿ ಅತಿ ಹೆಚ್ಚು ಸರ್ಚ್​ಗೊಳಗಾದವರು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮೋದಿ ಎಂದಾಗಿದ್ದಲ್ಲಿ ತಪ್ಪು. ಇಷ್ಟಕ್ಕೂ…

  • ಗ್ಯಾಜೆಟ್

    “4G ಜಿಯೋ” ಸಿಮ್ಅನ್ನು “3G ಮೊಬೈಲ್” ನಲ್ಲಿ ಉಪಯೋಗಿಸುವುದು ಹೇಗೆಂದು ತಿಳಿಯಬೇಕೇ??? ಹಾಗಾದರೆ ಈ ಲೇಖನವನ್ನು ಓದಿ

    ಈಗ 3ಜಿ ಫೋನ್ ಇರುವವರು ಈ ಕೆಳಗೆ ನೀಡಿದ ಟ್ರಿಕ್ಸ್ ಬಳಿಸಿ ಜಿಯೋ ಸಿಮ್ ನಿಮ್ಮ ಫೋನ್’ನಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬಹುದು.

  • ಸುದ್ದಿ

    ಟ್ರೋಲ್‍ ವಾಸಣ್ಣ ಪ್ರಸಿದ್ದಿಯ ಮಲ್ಪೆ ವಾಸುಗೆ ಖಡಕ್ ವರ್ನಿಗ್ ಕೊಟ್ಟ ಪೊಲೀಸರು!ಅಸಲಿಗೆ ಯಾರಿದು ವಾಸಣ್ಣ ಗೊತ್ತಾ?

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಹೆಸರು ಟ್ರೋಲ್‍ ವಾಸಣ್ಣ. ಮೂಲತಃ ಮಲ್ಪೆಯವರಾದ ವಾಸು ಅವರಿಗೆ ಇದೀಗ ಸೈಬರ್ ಪೊಲೀಸರು ಖಡಕ್‍ ಎಚ್ಚರಿಕೆ ನೀಡಿದ್ದಾರೆ. ವಾಸು ಅವರು ರಾಜಕೀಯ ಪ್ರೇರಿತ ಮಾತುಗಳು, ರಾಜಕೀಯ ನಾಯಕರನ್ನು, ಪಕ್ಷಗಳನ್ನು ಅಪಹಾಸ್ಯ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿವೆ. ಹೀಗಾಗಿ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಾಸು ಅವರನ್ನು ಕರೆಸಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ವಾಸು ಅವರಿಂದ ಕೆಲ ಕಿಡಿಗೇಡಿಗಳು…

  • ಉಪಯುಕ್ತ ಮಾಹಿತಿ

    ನೀವೂ ಪ್ರತೀ ದಿವಸ ತಪ್ಪದೆ ಸ್ನಾನ ಮಾಡುತ್ತೀರಾ.!

    ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗುವಂತಹ ಸಂಗತಿ ಹೇಳಿದೆ. ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಯಸ್, ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ…