ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ.

ಹಾಗಂತ,ಇದು ಏಕಾಏಕಿ ಜಾರಿಯಾಗಲಿರುವ ನಿಯಮವಲ್ಲ.ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಬೇಕು ಎಂಬ ಕಾರಣಕ್ಕೆ ಆಕ್ಷೇಪಗಳನ್ನುಆಹ್ವಾನಿಸಲಾಗಿದೆ. ಕರಡಿನಲ್ಲಿರುವ ಇನ್ನೊಂದು ಗೊಂದಲ ಅಂಶವೆಂದರೆ, ಈಗ ತಿಂಗಳ ವೇತನ ನೀಡುವಾಗ ಈಗ 8 ಗಂಟೆಯ ಕೆಲಸದ ಅವಧಿಯನ್ನು ಗಮನಿಸಿ,26 ಕಾರ್ಯ ದಿನಗಳೆಂದು ಪರಿಗಣಿಸಲಾಗುತ್ತಿತ್ತು. ಮುಂದೆ ಅದು ಬದಲಾಗುವುದೇಎಂಬ ಸ್ಪಷ್ಟತೆ ಇಲ್ಲ.

ಕೇಂದ್ರದ ಪ್ರಸ್ತಾವನೆಗೆ ಸಿಐಟಿಯು, ಬಿಎಎಂಎಸ್ ಸೇರಿದಂತೆ ಬಹುತೇಕ ಎಲ್ಲ ಕಾರ್ಮಿಕ ಸಂಘಟನೆಗಳು ಆಕ್ಷೇಪ ಎತ್ತಿವೆ. ಕೆಲವು ಕಾರ್ಖಾನೆಗಳು ಆಗಲೇದಿನಕ್ಕೆ ಒಂಬತ್ತು ಗಂಟೆ ಕೆಲಸ ಮಾಡಿಸುತ್ತಿವೆ. ಈ ನಿಯಮಾವಳಿ ಅದಕ್ಕೊಂದು ಅಧಿಕೃತ ಮುದ್ರೆ ಒತ್ತಲಿದೆ. ಈ ನಿಯಮಾವಳಿಯು ಜನರ ಕಲ್ಯಾಣದ ಬಗ್ಗೆ ಮೌನವಾಗಿರುವುದರಿಂದ ನಮ್ಮ ವಿರೋಧವಿದೆ ಎಂದು ಸಿಐಟಿಯು ಉಪಾಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದ್ದಾರೆ. ‘ಸ್ವಾತಂತ್ರ್ಯ ಪಡೆದು 70 ವರ್ಷ ಕಳೆದರೂ ಕನಿಷ್ಠವೇತನ ಜಾರಿಯಾಗಿಲ್ಲ. ಈ ನಿಯಮಾವಳಿಗಳಲ್ಲಿ ಬದುಕಿನ ಗುಣಮಟ್ಟದ ಉಲ್ಲೇಖವೇ ಇಲ್ಲ’ ಎಂದು ಬಿ ಎಂ ಎಸ್ ಅಧ್ಯಕ್ಷ ಸಿ.ಕೆ. ಸಾಜಿನಾರಾಯಣನ್ ಹೇಳಿದ್ದಾರೆ.

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯೊಂದು ದಿನಕ್ಕೆ 375 ರೂ.ವನ್ನು ರಾಷ್ಟ್ರೀಯ ಕನಿಷ್ಠ ವೇತನವಾಗಿ ಪರಿಗಣಿಸಬೇಕು ಎಂದು ಸೂಚಿಸಿತ್ತು. ಅಂದರೆ,ತಿಂಗಳಿಗೆ ಕನಿಷ್ಠ ವೇತನ 9,750 ರೂ.ಹಾಗೂ ನಗರ ವಾಸಿಗಳಿಗೆ 1,430 ರೂ. ವಸತಿ ಭತ್ಯೆ ನೀಡಲುಸಲಹೆ ನೀಡಿತ್ತು. ಆದರೆ, ಹೊಸ ಕಾರ್ಮಿಕವೇತನ ನಿಯಮಾವಳಿ ಕರಡಿನಲ್ಲಿ ಈ ಅಂಶಗಳನ್ನು ಪರಿಗಣಿಸಲಾಗಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಬ್ಜಿ ಎಂಬ ಮಹಾಮಾರಿ ಗೇಮ್ ಎಷ್ಟೊಂದು ಡೇಂಜರಸ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ರೂ ಸಹ ಇಂದಿನ ಯುವ ಪೀಳಿಗೆ ಈ ಗೇಮ್ಗೆ ಬಲಿಯಾಗುತ್ತಿದ್ದಾರೆ. ಸಾಕಷ್ಟು ಪ್ರಾಣ ಹಾನಿಗಳು ಸಹ ಆಗಿವೆ. ಅದೇ ರೀತಿ ಪಬ್ಜಿ ಗೇಮ್ ದಾಸನಾಗಿದ್ದ ಹದಿಹರೆಯದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಚರಂಡಿ ನೀರಲ್ಲಿ ಬಿದ್ದು ಒದ್ದಾಡಿದ್ದಾನೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಜಯಪುರದ ಮಧ್ಯಭಾಗದಲ್ಲಿರುವ ಗಗನ್ ಮಹಲ್ ಎಂಬ ಬೃಹತ್ ಕಂದಕದಲ್ಲಿನ ಗಲೀಜು ಗಟಾರ್ ನೀರಿನಲ್ಲಿ ಬಿದ್ದು ಹೊರಳಾಡಿದ್ದಾನೆ. ಇದನ್ನು ವಿಡಿಯೋ ಮಾಡಿಕೊಂಡ ಸ್ಥಳೀಯರು…
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
The most inspiring person for every citizen who never saw success till half of his age and later he is universally regarded as one of the greatest man ever to occupy the presidency in the US history. The former president of USA, Abraham Lincoln.
ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್ನಲ್ಲಿ(ಯುಪಿಎಸ್ಇ)ಯಲ್ಲಿ ಕೆಲಸ ಮಾಡುತ್ತಿದ್ದರು….
ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…
ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ. ನಗದು ರೂಪದ ಕಾಳಧನ ನಿಗ್ರಹಕ್ಕೆಂದು ನೋಟುರದ್ದತಿಯ ಸರ್ಜಿಕಲ್ ದಾಳಿ ನಡೆಸಿದ ಕೇಂದ್ರ ಸರಕಾರ ಸದ್ಯವೇ ಚಿನ್ನದ ರೂಪದಲ್ಲಿ ಸಂಗ್ರಹವಾಗಿರುವ ಕಾಳಧನವನ್ನು ಬಯಲಿಗೆಳೆಯಲು ಹೊಸ ಯೋಜನೆ ಆರಂಭಿಸಲಿದೆ. ಹೌದು. ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನುನಿಗದಿ ಪಡಿಸಿದ ತೆರಿಗೆ ಪಾವತಿಸಿ…