ಉಪಯುಕ್ತ ಮಾಹಿತಿ

ಸರ್ಕಾರದಿಂದ ಮಹಿಳೆಯರಿಗೆ 3 ಲಕ್ಷ ಹಣದ ಭಾಗ್ಯ.!ಪಡೆದುಕೊಳ್ಳೋದು ಹೇಗೆ ಗೊತ್ತಾ.?ತಿಳಿಯಲು ಮುಂದೆ ಓದಿ ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

9930

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತವೆ. ಸರ್ಕಾರಗಳು ಜಾರಿಗೊಳಿಸುವ ಎಷ್ಟೋ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಿರುವುದಿಲ್ಲ.

ಇಂತಹ ಯೋಜನೆಗಳಲ್ಲಿ ಒಂದಾಗಿದೆ ‘ಉದ್ಯೋಗಿನಿ’ ಯೋಜನೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತಿದೆ.

ಏನಿದು ‘ಉದ್ಯೋಗಿನಿ’ ಯೋಜನೆ..

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಸಹಾಯಧನ ಯೋಜನೆ ಜಾರಿಗೆ ತಂದಿದ್ದು, ಬ್ಯಾಂಕ್​ಗಳು ನೀಡುವ ಸಾಲಕ್ಕೆ ನಿಗಮದಿಂದ ಸಹಾಯಧನ ನೀಡಲಾಗುತ್ತದೆ.

3 ಲಕ್ಷ ರೂ. ಸಾಲ..

ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ‘ಉದ್ಯೋಗಿನಿ’ ಯೋಜನೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ರಾಜ್ಯ ಸರ್ಕಾರ 3 ಲಕ್ಷದವರೆಗೆ ಸಾಲ ಕೊಡಲಿದೆ.ಇದರ ಜೊತೆಗೆ ಫಲಾನುಭವಿಗಳು 90,000 ರೂ.ವರೆಗೆ ಸಬ್ಸಿಡಿ ಸಹ ಪಡೆಯಬಹುದು.

ಯಾರೆಲ್ಲಾ ಅರ್ಹರು..(ಯೋಜನೆ ಬದಲಾವಣೆ ನಂತರ)

*ವಾರ್ಷಿಕ 1.5 ಲಕ್ಷ ರೂ ಒಳಗೆ ಆದಾಯ ಹೊಂದಿರಬೇಕು.

*18 ರಿಂದ 55  ವರ್ಷದೊಳಗಿನ ಎಲ್ಲಾ ಮಹಿಳೆಯರು ಅರ್ಹರು.

*ವಿಧವೆಯರು, ಅಂಗವಿಕಲರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆದ್ಯತೆ.

 

ಏನೆಲ್ಲಾ ಉದ್ಯೋಗ ಪ್ರಾರಂಭಿಸಬಹುದು…

ಈ ಯೋಜನೆಯಡಿಯಲ್ಲಿ ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಟೈಲರಿಂಗ್, ಉಪ್ಪಿನಕಾಯಿ ಮಾರಾಟ, ಎಸ್ ಟಿಡಿ ಬೂತ್, ಜಾಬ್ ಟೈಪಿಂಗ್, ಬ್ಯೂಟಿ ಪಾರ್ಲರ್, ಗಿಫ್ಟ್ ಶಾಪ್, ಅಗರಬತ್ತಿ ಮಾರಾಟ, ಸಿಹಿ ಅಂಗಡಿ, ಕಾಫಿ ಹಾಗೂ ಟೀ ಮಾರಾಟ ಮಹಿಳೆ, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ ಇನ್ನೂ ಹಲವು ಅಧಿಕ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

 

ಇದಕ್ಕಾಗಿ ಸರ್ಕಾರ ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಇದರಲ್ಲಿ 90,000 ರೂ. ಗಳನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಭರಿಸಲಿದೆ.ನಿಮ್ಮ ನಿಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿ ನೀವು ಅರ್ಜಿಯನ್ನು ಪಡೆಯಬಹುದು.

ಉದ್ಯೋಗಿನಿ ಯೋಜನೆಯ ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್  ಕ್ಲಿಕ್  ಮಾಡಿ…

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ