ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಜನರತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್ ಹಾಕ್ತಾ ಇರಬೇಕು… ಆದರೆ ವಾಸ್ತವವೇಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು. ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್.ಐ.ಸಿ ಯ ಮನಿ ಬ್ಯಾಕ್ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ ರೂಪದಲ್ಲಿ ಶ್ರೀಗಂಧ ಮರಳಿ ದುಡ್ಡು ಕೊಡುತ್ತಾ ಇರುತ್ತದೆ.
ಕೃಷಿ ಕ್ಷೇತ್ರದ ಸಾಧಕಿ ಕವಿತಾ ಮಿಶ್ರಾರವರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರುವ ಇವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ. 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲ… ಜೊತೆಗೆ ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ, ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.. ಸೇರಿದಂತೆ ನಾನಾ ಬಗೆಯ ಗಿಡಗಳನ್ನು ಬೆಳೆದಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಯಲ್ಲಿರುವ ತಮ್ಮ ಜ್ಞಾನವನ್ನು ತಮ್ಮದೇ ವಿಶಿಷ್ಟಶೈಲಿಯಲ್ಲಿ ರೈತರಿಗೆ ಹಂಚುವ ಮೂಲಕ ನೂರಾರು ರೈತರು ಕೃಷಿಯತ್ತ, ಅದರಲ್ಲೂ ಶ್ರೀಗಂಧ ಕೃಷಿಯತ್ತ ವಾಲುವಂತೆ ಮಾಡಿದ್ದಾರೆ. ಜೊತೆಗೆ ಉತ್ತಮ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ತಯಾರಿಸಿ ರೈತರಿಗೆ ಒದಗಿಸುವ ಕವಿತಾ ಮಿಶ್ರಾರವರನ್ನು ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.
ಈಗ ಈ ಶ್ರೀಗಂಧದ ಬೀಜದ ವಿಷಯಕ್ಕೆ ಬಂದರೆ, ಕವಿತಾ ಮಿಶ್ರಾ ಅವರು ಈಗಾಗಲೆ ಶ್ರೀಗಂಧದಿಂದ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಗೆ ಸುಮಾರು 250 ಶ್ರೀಗಂಧದ ಮರಗಳನ್ನು ನೆಡಬಹುದು. ಅದರ ಜೊತೆ ಶ್ರೀಗಂಧಕ್ಕಿಂತ ಕಡಿಮೆ ಎತ್ತರ ಬೆಳೆಯುವ ಯಾವುದಾದರೂ ಇತರೆ ಗಿಡಗಳನ್ನು ಹಾಕಬಹುದು. ಎಲ್ಲ ರೀತಿಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉಪ ಆದಾಯ ಪಡೆಯಬಹುದು. ಶ್ರೀಗಂಧವನ್ನು 15 ವರ್ಷ ಮೇಲ್ಪಟ್ಟು ಕಟಾವು ಮಾಡಬಹುದು, ಅಲ್ಲಿಯವರೆಗೆ ಇತರ ಮಿಶ್ರ ಬೆಳೆ ಹಾಗೂ ಶ್ರೀಗಂಧದ ಬೀಜದಿಂದ ಹಣ ಗಳಿಸಬಹುದು. ಹೆಚ್ಚು ನೀರು, ಗೊಬ್ಬರ , ಕಾಳಜಿ ಬೇಡದ ಶ್ರೀಗಂಧ ನಾಟಿ ಮಾಡಿದ ಮೂರು ವರ್ಷದಿಂದ ಬೀಜ ಕೊಡಲು ಆರಂಭಿಸುತ್ತದೆ. ಮೊದಲ ಕೆಲವು ವರ್ಷ ಕಡಿಮೆ ಬೀಜಗಳು ದೊರಕುತ್ತವೆ, ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಒಂದು ಗಿಡದಿಂದ ಒಂದೆರಡು ಕೆ.ಜಿ ಯಿಂದ ಹಿಡಿದುಎಂಟ್ಹತ್ತು ಕೆ.ಜಿಯವರೆಗೆ ಬೀಜಗಳು ದೊರೆಯುತ್ತವೆ. ಬೆಲೆಯ ಬಗ್ಗೆ ಹೇಳಬೇಕೆಂದರೆ, ಒಂದು ಕೆ.ಜಿ ಬೀಜಕ್ಕೆ 500 ರಿಂದ ಹಿಡಿದು 1200 ರವರೆಗೆ ಇದೆ. ಔಷಧಿ ತಯಾರಿಸುವ ಕಂಪನಿಗಳು ಸದ್ಯ ಕೆಜಿಗೆ 1000ರು. ನಂತೆ ಕೊಳ್ಳುತ್ತಿದ್ದಾರೆ. ಒಂದು ಎಕರೆಗೆ 250 ಗಿಡ, ಒಂದು ಗಿಡದಿಂದ ಕೇವಲ ಒಂದೇ ಕೆ.ಜಿ ಬೀಜದಂತೆ ಲೆಕ್ಕ ಮಾಡಿದರೂ, ಬೀಜದಿಂದಲೇ ಎರಡು ಲಕ್ಷ ಆದಾಯ ಗಳಿಸಬಹುದು.
ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕೂತ್ಗೊಂಡು ತೋಟ ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋಚಿಪ್ ಅಳವಡಿಸಲಾಗುವುದು, ಕಳ್ಳ ಮರದ ಹತ್ತಿರ 2 ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್ ಕೂಗುತ್ತದೆ. ಅಷ್ಟೇ ಅಲ್ಲ ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಹೊಂದಿ ಅಲ್ಲೂ ಸೈರನ್ ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್ ಕಳ್ಳ ಕದ್ದೊಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೇ ಮಾರಬಹುದು.
ಮಾಹಿತಿಯ ಆಗರ ಕವಿತಾ ಮಿಶ್ರಾ : ತೋಟದಲ್ಲೇ ಮನೆ ಮಾಡಿಕೊಂಡು ಹತ್ತಾರು ಮರಗಿಡಗಳ ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕೂಡ ಮಾಡುತ್ತಿರುವ ಕವಿತಾರವರು ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಅದನ್ನು ರೈತರಿಗೆ ವರ್ಗಾಯಿಸಿ ಅವರ ಮನ ಬದಲಿಸಬಲ್ಲರು. ತಮ್ಮಲ್ಲೇ ಶ್ರೀಗಂಧದ ಸಸಿ ತಯಾರು ಮಾಡುವ ಇವರು ಅವುಗಳನ್ನು ಕೇವಲ 35 ರೂ.ನಂತೆ ಮಾರಾಟ ಮಾಡುತ್ತಾರೆ. ಜೊತೆಗೆ ಅಪಾರ ತಾಂತ್ರಿಕ ಮಾಹಿತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಜೆ 7 ರಿಂದ 9 ಗಂಟೆಯವರೆಗೆ ಅವರನ್ನು ಮೊಬೈಲ್ ಸಂಖ್ಯೆ 9448777045 ಸಂಪರ್ಕಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಈಗಾಗಲೇ ಬಾರಿ ಸುದ್ದಿ ಮಾಡುತ್ತಿದೆ. ಇದರಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕುಮಾರ್ ಹಾಗೂ ಕಿಚ್ಹ ಸುದೀಪ್ ವಿಭಿನ್ನ ಹೇರ್ ಸ್ಟೈಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಅದಕ್ಕೆ ಕಾರಣ.
ದೇಶದ ಪ್ರಖ್ಯಾತ ಉದ್ಯಮಿಳಗ ಸಾಲಿನಲ್ಲಿ ಮೇರು ಸಾಲಿನಲ್ಲಿ ಕಾಣಸಿಕೊಳ್ಳುವ ಹೆಸರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾ ಮುಖೇಶ್ ಅಂಬಾನಿ ಅಂದ ಹಾಗೇ ದೇಅಂಬಾನಿ ಅವರು ತಮ್ಮ ಕಾರ್ ಚಾಲಕನಿಗೆ ಪ್ರತಿ ತಿಂಗಳು ಎಷ್ಟು ಸಂಬಳ ನೀಡ್ತಾರೆ ಎಂಬ ಬಗ್ಗೆ ತಿಳಿದಿದೆಯಾ?
ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ
ಹಿಂದಿನ ಕಾಲದ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಈಗಿನ ಕಾಲದ ಜೀವನ ಪದ್ಧತಿ, ಆಹಾರ ಪದ್ಧತಿ ಇಂದಾಗಿ, ಹದಿಹರೆಯದವರಲ್ಲಿ ಕೂಡ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚಾಗಿ ಕಾಡುತ್ತಿದೆ.
ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ. ಹಾಗಂತ,ಇದು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಫೆಬ್ರವರಿ, 2019) ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ದಿನದಲ್ಲಿ…