ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಜನರತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್ ಹಾಕ್ತಾ ಇರಬೇಕು… ಆದರೆ ವಾಸ್ತವವೇಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು. ಶ್ರೀಗಂಧ ತನ್ನ ಬೀಜಗಳ ಮೂಲಕ ನಿಮಗೆ ಹಣ ತಂದುಕೊಡುತ್ತದೆ. ಏನಿಲ್ಲವೆಂದರೂ ಒಂದು ಎಕರೆಯಲ್ಲಿ ಹಾಕಿದ ಶ್ರೀಗಂಧದಿಂದ ಪ್ರತಿವರ್ಷ ಬೀಜ ಮಾರಾಟದಿಂದಲೇ ಅಂದಾಜು ಎರಡು ಲಕ್ಷ ಆದಾಯ ಇದೆ. ಎಲ್.ಐ.ಸಿ ಯ ಮನಿ ಬ್ಯಾಕ್ ಪಾಲಿಸಿಯ ಹಾಗೆ ಪ್ರತಿ ವರ್ಷ ಬೀಜದ ರೂಪದಲ್ಲಿ ಶ್ರೀಗಂಧ ಮರಳಿ ದುಡ್ಡು ಕೊಡುತ್ತಾ ಇರುತ್ತದೆ.

ಕೃಷಿ ಕ್ಷೇತ್ರದ ಸಾಧಕಿ ಕವಿತಾ ಮಿಶ್ರಾರವರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರುವ ಇವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ. 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಸೀಬೆ, 150 ನೇರಳೆ, 150 ಬೆಟ್ಟದ ನಲ್ಲಿಕಾಯಿ, 150 ನುಗ್ಗೆ, 100 ಕರಿಬೇವು, 100 ಮಲ್ಲಿಗೆ, 100 ತೆಂಗು, 450 ಸೀತಾಫಲ… ಜೊತೆಗೆ ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ, ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.. ಸೇರಿದಂತೆ ನಾನಾ ಬಗೆಯ ಗಿಡಗಳನ್ನು ಬೆಳೆದಿದ್ದಾರೆ! ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಯಲ್ಲಿರುವ ತಮ್ಮ ಜ್ಞಾನವನ್ನು ತಮ್ಮದೇ ವಿಶಿಷ್ಟಶೈಲಿಯಲ್ಲಿ ರೈತರಿಗೆ ಹಂಚುವ ಮೂಲಕ ನೂರಾರು ರೈತರು ಕೃಷಿಯತ್ತ, ಅದರಲ್ಲೂ ಶ್ರೀಗಂಧ ಕೃಷಿಯತ್ತ ವಾಲುವಂತೆ ಮಾಡಿದ್ದಾರೆ. ಜೊತೆಗೆ ಉತ್ತಮ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ತಯಾರಿಸಿ ರೈತರಿಗೆ ಒದಗಿಸುವ ಕವಿತಾ ಮಿಶ್ರಾರವರನ್ನು ಹತ್ತಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.

ಈಗ ಈ ಶ್ರೀಗಂಧದ ಬೀಜದ ವಿಷಯಕ್ಕೆ ಬಂದರೆ, ಕವಿತಾ ಮಿಶ್ರಾ ಅವರು ಈಗಾಗಲೆ ಶ್ರೀಗಂಧದಿಂದ ಆದಾಯ ಪಡೆಯುತ್ತಿದ್ದಾರೆ. ಒಂದು ಎಕರೆಗೆ ಸುಮಾರು 250 ಶ್ರೀಗಂಧದ ಮರಗಳನ್ನು ನೆಡಬಹುದು. ಅದರ ಜೊತೆ ಶ್ರೀಗಂಧಕ್ಕಿಂತ ಕಡಿಮೆ ಎತ್ತರ ಬೆಳೆಯುವ ಯಾವುದಾದರೂ ಇತರೆ ಗಿಡಗಳನ್ನು ಹಾಕಬಹುದು. ಎಲ್ಲ ರೀತಿಯ ಹಣ್ಣಿನ ಗಿಡಗಳನ್ನು ಬೆಳೆದು ಅದರಿಂದ ಉಪ ಆದಾಯ ಪಡೆಯಬಹುದು. ಶ್ರೀಗಂಧವನ್ನು 15 ವರ್ಷ ಮೇಲ್ಪಟ್ಟು ಕಟಾವು ಮಾಡಬಹುದು, ಅಲ್ಲಿಯವರೆಗೆ ಇತರ ಮಿಶ್ರ ಬೆಳೆ ಹಾಗೂ ಶ್ರೀಗಂಧದ ಬೀಜದಿಂದ ಹಣ ಗಳಿಸಬಹುದು. ಹೆಚ್ಚು ನೀರು, ಗೊಬ್ಬರ , ಕಾಳಜಿ ಬೇಡದ ಶ್ರೀಗಂಧ ನಾಟಿ ಮಾಡಿದ ಮೂರು ವರ್ಷದಿಂದ ಬೀಜ ಕೊಡಲು ಆರಂಭಿಸುತ್ತದೆ. ಮೊದಲ ಕೆಲವು ವರ್ಷ ಕಡಿಮೆ ಬೀಜಗಳು ದೊರಕುತ್ತವೆ, ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಒಂದು ಗಿಡದಿಂದ ಒಂದೆರಡು ಕೆ.ಜಿ ಯಿಂದ ಹಿಡಿದುಎಂಟ್ಹತ್ತು ಕೆ.ಜಿಯವರೆಗೆ ಬೀಜಗಳು ದೊರೆಯುತ್ತವೆ. ಬೆಲೆಯ ಬಗ್ಗೆ ಹೇಳಬೇಕೆಂದರೆ, ಒಂದು ಕೆ.ಜಿ ಬೀಜಕ್ಕೆ 500 ರಿಂದ ಹಿಡಿದು 1200 ರವರೆಗೆ ಇದೆ. ಔಷಧಿ ತಯಾರಿಸುವ ಕಂಪನಿಗಳು ಸದ್ಯ ಕೆಜಿಗೆ 1000ರು. ನಂತೆ ಕೊಳ್ಳುತ್ತಿದ್ದಾರೆ. ಒಂದು ಎಕರೆಗೆ 250 ಗಿಡ, ಒಂದು ಗಿಡದಿಂದ ಕೇವಲ ಒಂದೇ ಕೆ.ಜಿ ಬೀಜದಂತೆ ಲೆಕ್ಕ ಮಾಡಿದರೂ, ಬೀಜದಿಂದಲೇ ಎರಡು ಲಕ್ಷ ಆದಾಯ ಗಳಿಸಬಹುದು.

ಶ್ರೀಗಂಧದ ಭದ್ರತೆಯ ವಿಷಯದಲ್ಲೂ ಮೊದಲಿನ ಹಾಗೆ ಆತಂಕಪಡಬೇಕಿಲ್ಲ, ಈಗ ತಂತ್ರಜ್ಞಾನ ಸಾಕಷ್ಟುಮುಂದುವರೆದಿದೆ. ಇ ಸೆಕ್ಯೂರಿಟಿ ಅಳವಡಿಸಿ ಮನೇಲಿ ಕೂತ್ಗೊಂಡು ತೋಟ ಕಾಯಬಹುದು. ಇ-ಪ್ರೊಟೆಕ್ಷನ್‌ನಲ್ಲಿ ಶ್ರೀಗಂಧದ ಮರಗಳಿಗೆ ಒಂದು ಮೈಕ್ರೋಚಿಪ್ ಅಳವಡಿಸಲಾಗುವುದು, ಕಳ್ಳ ಮರದ ಹತ್ತಿರ 2 ಅಡಿ ದೂರದಲ್ಲಿ ಸುಳಿದಾಡಿದರೂ ಸೈರನ್ ಕೂಗುತ್ತದೆ. ಅಷ್ಟೇ ಅಲ್ಲ ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಹೊಂದಿ ಅಲ್ಲೂ ಸೈರನ್ ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ ಅಕಸ್ಮಾತ್ ಕಳ್ಳ ಕದ್ದೊಯ್ದರೂ ಕದ್ದ ಮಾಲು ಎಲ್ಲಿದೆ ಎಂಬುದನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಹುದು. ಮಾರುಕಟ್ಟೆಬಗ್ಗೆಯೂ ಚಿಂತಿಸಬೇಕಿಲ್ಲ. ಹೊರಗೆ ಮಾರಾಟ ಮಾಡಲಾರದವರು ಕೆಎಸ್‌ಡಿಎಲ್‌ಗೇ ಮಾರಬಹುದು.
ಮಾಹಿತಿಯ ಆಗರ ಕವಿತಾ ಮಿಶ್ರಾ : ತೋಟದಲ್ಲೇ ಮನೆ ಮಾಡಿಕೊಂಡು ಹತ್ತಾರು ಮರಗಿಡಗಳ ಜೊತೆಗೆ ಹಸು, ಕುರಿ, ಕೋಳಿ ಸಾಕಾಣಿಕೆ ಕೂಡ ಮಾಡುತ್ತಿರುವ ಕವಿತಾರವರು ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಅದನ್ನು ರೈತರಿಗೆ ವರ್ಗಾಯಿಸಿ ಅವರ ಮನ ಬದಲಿಸಬಲ್ಲರು. ತಮ್ಮಲ್ಲೇ ಶ್ರೀಗಂಧದ ಸಸಿ ತಯಾರು ಮಾಡುವ ಇವರು ಅವುಗಳನ್ನು ಕೇವಲ 35 ರೂ.ನಂತೆ ಮಾರಾಟ ಮಾಡುತ್ತಾರೆ. ಜೊತೆಗೆ ಅಪಾರ ತಾಂತ್ರಿಕ ಮಾಹಿತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಸಂಜೆ 7 ರಿಂದ 9 ಗಂಟೆಯವರೆಗೆ ಅವರನ್ನು ಮೊಬೈಲ್ ಸಂಖ್ಯೆ 9448777045 ಸಂಪರ್ಕಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ನಟನನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿ ನಾನು ಪ್ರೀತಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ರಶ್ಮಿಕಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ತೆಲುಗು ನಟನನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ, ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನಾನು ನನ್ನ ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನಗೆ ಬೇರೆ ಬೇರೆ ರೀತಿಯ…
ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ನಿಮಗೆ ಟ್ಯಾಗ್ ಮಾಡಿಲ್ಲವಾದಲ್ಲಿ ಮಾತ್ರ ಈ ಸಂದೇಶ ನಿಮಗೆ ಬರಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಫೋಟೋವನ್ನು ಗುರುತಿಸಲು ಫೇಶಿಯಲ್ ರೆಕಗ್ನೈಸ್ ಟೆಕ್ನಾಲಜಿಯನ್ನು ಬಳಸಲಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(13 ಡಿಸೆಂಬರ್, 2018) ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ…
ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ. ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ…
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದರ ಶೂಲೆ ಸಂಬಂಧ ನಿರ್ಜಲೀಕರಣದಿಂದಾಗಿ ಸುಸ್ತಾಗುವಿರಿ. ಅದಕ್ಕೆ ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…
ಕೈಗಾರಿಕೆಗಳು ಮಾಲಿನ್ಯಕಾರಕಗಳನ್ನು ಗಂಗಾಕ್ಕೆ ಮುಚ್ಚುವ ಮೂಲಕ ಮತ್ತು ಘಾಟ್‌ಗಳನ್ನು ಮುಚ್ಚುವುದರಿಂದ, ಪ್ರಾಚೀನ ನದಿಯ ನೀರಿನ ಗುಣಮಟ್ಟವು ಮಾನವರಿಗೆ ಸ್ನಾನ ಮಾಡಲು ಮತ್ತು ಜಲಚರಗಳನ್ನು ಬೆಂಬಲಿಸಲು ಸಾಕಷ್ಟು ಸುಧಾರಿಸಿದೆ ಎಂದು ಸಿಪಿಸಿಬಿ ತಿಳಿಸಿದೆ. ನಮ್ಮ ಸುತ್ತಮುತ್ತಲಿನ ಪರಿಸರವು ಲಾಕ್ ಡೌನ್ ಸಮಯದಲ್ಲಿ ಪ್ರಾಣಿಗಳನ್ನು ಪುನಶ್ಚೇತನಗೊಳಿಸುವುದನ್ನು ನಾವು ನೋಡಿದ್ದೇವೆ ಮತ್ತು ಪ್ರಾಣಿಗಳು ಸಾಮಾನ್ಯವಾಗಿ ಅವು ಇರಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ವಾಯುಮಾಲಿನ್ಯದ ಮಟ್ಟವು ಇಳಿದಿರುವುದು ಮಾತ್ರವಲ್ಲ, ಕಲುಷಿತ ನದಿಗಳ ನೀರಿನ ಗುಣಮಟ್ಟವೂ ಭಾರತದಲ್ಲಿ ಸುಧಾರಿಸಿದೆ. ಗಂಗಾ ಘಟ್ಟಗಳನ್ನು ನಿರ್ಜನವಾಗಿಟ್ಟುಕೊಂಡು ಮಾನವರು ಕ್ಯಾರೆಂಟೈನ್‌ನಲ್ಲಿ…