ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ.ಆದರೆ ಪುರಾಣಕ್ಕೆ ಸಂಭಂದಿಸಿದಂತೆ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ.ಯಾಕಂದ್ರೆ ಪೌರಾಣಿಕ ಧಾರಾವಾಹಿಗಳನ್ನು ಮಾಡಲು ತುಂಬಾ ಹಣ ಬೇಕಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಅಲ್ಲೊಂದು ಇನ್ನೊಂದು ಧಾರಾವಾಹಿಗಳು ಮಾತ್ರ ನೋಡಲು ನಮಗೆ ಸಿಗುತ್ತವೆ.

ಅದರಲ್ಲಿ ಒಂದು ಶನಿ ಧಾರವಾಹಿ. ಇದು ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ಧಾರವಾಹಿ. ಇದು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 23ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಅಭೂತಪೂರ್ವ ಯಶಸ್ಸು ಕಾಣುತ್ತಿದೆ.

ಈ ಸೀರಿಯಲ್ ಆರಂಭ ಆದಾಗಿನಿಂದಲೂ ಪ್ರತಿಹಂತದಲ್ಲೂ ಕುತೂಹಲವನ್ನು ಹುಟ್ಟುಸಿಕೊಂಡು ಬರುತ್ತಿದ್ದು, ಈಗಾಗಲೇ ಕಿರುತೆರೆಯಲ್ಲಿ ಯಶಸ್ವಿಯಾಗಿ 100 ಎಪಿಸೋಡ್ ಮುಗಿಸಿದೆ. ಉತ್ತಮ ನಿರೂಪಣೆ, ಕಥೆ, ಪಾತ್ರಗಳು ಈ ಧಾರಾವಾಹಿಯ ಪ್ಲಸ್ ಪಾಯಿಂಟ್ ಆಗಿದ್ದು ಇತರ ಧಾರಾವಾಹಿಗಳಿಗಿಂತ ‘ಶನಿ’ ಮೊದಲ ಸ್ಥಾನದಲ್ಲಿದೆ.

ಶನಿ ಧಾರಾವಾಹಿಯ ಪ್ರಮುಖ ಹೈಲೆಟ್ ಕರ್ಮ ಫಲಧಾತ, ನ್ಯಾಯದ ಅಧಿದೇವತೆ ಭಗವಾನ್ ಶನಿದೇವನ ಪಾತ್ರ.ಈ ಪಾತ್ರವನ್ನು ಮಾಡಿರುವುದು ಸುನಿಲ್ ಎಂಬ ಒಬ್ಬ ಅನಾಥ ಹುಡುಗ ಎಂದರೆ ನೀವ್ ನಂಬೋದಿಲ್ಲ.

ತನ್ನ ತೀಕ್ಷಣ ಕಣ್ಣಿನ ನೋಟ,ಮುಖದ ಗಾಂಬಿರ್ಯ,ಅಮೋಘ ಡೈಲಾಗ್ ಡೆಲಿವರಿ ಜೊತೆಗೆ ಆ ಶನಿ ಮಾಹಾತ್ಮನೆ ತನ್ನ ಮೈ ಮೇಲೆ ಬಂದಿರುವಂತೆ ಅಮೋಘ ಅಭಿನಯ ನೀಡಿ ಕಿರುತೆರೆ ಲೋಕದ ಜನರ ಮನಸ್ಸನ್ನು ಗೆದ್ದಿದ್ದಾನೆ ಈ ಸುನೀಲ್.

ಸಮಾರ್ಗದಲ್ಲಿ ನಡೆ, ಇಲ್ಲದಿದ್ದರೆ ನಾನೇ ನಿಮ್ಗೆ ಸನ್ಮಾರ್ಗ ತೋರಬೇಕಾದಿತು..ಇದು ಶನಿ ಧಾರಾವಾಹಿಯ ಹೈಲೆಟ್ ಡೈಲಾಗ್.
ತನ್ನ ಅಮೋಘ ನಟನೆಯಿಂದಲೇ ಕರುನಾಡ ಜನರ ಮನಸ್ಸನ್ನು ಗೆದ್ದಿರುವ ಸುನೀಲ್ ಬೆಳೆಯುತ್ತಿರುವುದು ಚಾಮರಾಜನಗರದ ಅನಾಥಾಶ್ರಮದಲ್ಲಿ. ಹೌದು ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು ದೀನ ಬಂಧು ಮಕ್ಕಳ ಆಶ್ರಮದಲ್ಲಿ.ಈ ಆಶ್ರಮವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರ ಮಗ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ತನ್ನ ಹತ್ತನೆ ತರಗತಿವರಗಿನ ವಿಧ್ಯಾಭ್ಯಾಸವನ್ನು ಆಶ್ರಮದಿಂದಲೇ ಮುಗಿಸಿದ್ದಾನೆ.

ತುಂಬಾ ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನವನ್ನು ಕೂಡ ಕಲಿತಿದ್ದರು.ಶನಿ ಧಾರಾವಾಹಿಯ ಆಡಿಶನ್ ತಂಡದ ಕಣ್ಣಿಗೆ ಬಿದ್ದ ಇವರ ಅಮೋಘ ಅಭಿನಯಕ್ಕೆ ಮನಸೋತ ಶನಿ ಧಾರವಾಹಿ ತಂಡದವರು ಧಾರಾವಾಹಿಯ ಮುಖ್ಯ ಪಾತ್ರ ಭಗವಾನ್ ಶನಿದೇವನ ಪಾತ್ರಕ್ಕೆ ಆಯ್ಕೆ ಮಾಡಿದ್ರು.

ಶನಿ ಪಾತ್ರದಾರಿ ಸುನೀಲ್ ಹೇಳುವ ಪ್ರಖಾರ ಶನಿ ದೇವರ ಅಷ್ಟೇನೂ ಗೊತ್ತಿಲ್ವಂತೆ.ಪಾತ್ರ ಮಾಡುತ್ತಲೇ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.ತನ್ನ ಶೂಟಿಂಗ್ ನಡುವೆಯೂ ಪಿಯು ಓದುತ್ತಿರುವ ಪ್ರತಿಭಾವಂತ ಹುಡುಗ ಸುನೀಲ್’ಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಆ ಭಗವಾನ್ ಶನಿ ಮಹಾತ್ಮನ ಆಶೀರ್ವಾದ ಅವನಿಗೆ ಸಿಗಲಿ ಎಂದು ನಾವು ಕೇಳಿಕೊಳ್ಳೋಣ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.
ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…
ಹೆಣ್ಣಾಗಿದ್ದುಕೊಂಡ ಆ ಅಧಿಕಾರಿ ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತಹ ಪಾಪದ ಕರ್ಮ ಮಾಡಿದ್ದಾರೆ.ಹಾಗಂತ ಈಕೆಯೇನೂ ಅನಕ್ಷರಸ್ಥರಲ್ಲ. ಐಪಿಎಸ್ ಪಾಸ್ ಮಾಡಿಕೊಂಡು ಹಿರಿಯ ಪೊಲೀಸ್ ಅಧಿಕಾರಿಯಾಗಿರುವವರು. ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡು ಈ ಕೆಲಸ ಮಾಡಿದ್ದಾರೆ. ಈ ಘಟನೆ ಒಡಿಶಾದಲ್ಲಿ ನಡೆದಿದೆ. ಕಳೆದ ಜುಲೈ 3 ರಂದು ಕನಿಕಾ ಗ್ರಾಮದಲ್ಲಿ ವೇಗವಾಗಿ ಬಂದ ಎಸ್.ಯು.ವಿ. ವಾಹನ 19 ವರ್ಷದ ಯುವಕನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟಿದ್ದ. ಇದನ್ನು ಖಂಡಿಸಿ ಕನಿಕಾ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರಲ್ಲದೇ ಈ…
ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ.
ಭಾರತ್ ನೆಟ್ ಯೋಜನೆಯ ಎರಡನೇ ಹಾಗೂ ಅಂತಿಮ ಹಂತವನ್ನು ಇಂದು ದೂರಸಂಪರ್ಕ ಇಲಾಖೆ ಸಚಿವ ಮನೋಜ್ ಸಿನ್ಹಾ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಲಿದ್ದಾರೆ.