ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇವರ ಮೇಲೆ ವಿಶ್ವಾಸವಿತ್ತು.
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ……….
ಕಾನೂನಿನ ಮೇಲೆ ಭರವಸೆ ಇತ್ತು.ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂದು.
ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು………

ದೇವರು ಕಾನೂನು ವಿಫಲರಾದರೂ, ಮನುಷ್ಯನ ನೈತಿಕತೆ – ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ. ನಮ್ಮ ನಡುವೆ ಶಿಕ್ಷಕರು ವೈದ್ಯರು ನ್ಯಾಯಾಧೀಶರು ವಿಜ್ಞಾನಿಗಳು ತಂತ್ರಜ್ಞರು ಸ್ವಾಮಿಗಳು ಸಮಾಜ ಸೇವಕರು ಪೋಲೀಸರು ರಾಜಕಾರಣಿಗಳು ಇದ್ದಾರೆ. ಅವರಾದರೂ ಸಮಾಜದಲ್ಲಿ ನಮ್ಮ ನಡುವಿನ ಕ್ರೂರಿಗಳು – ಕರುಣಾಮಯಿಗಳ ವ್ಯತ್ಯಾಸ ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ನಂಬಿಕೆ ಇತ್ತು.
ಕೊನೆಗೆ ಅವರೂ ಕೈಬಿಟ್ಟರು……….
ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ಬಗ್ಗಿಸಿಕೊಂಡ ಸಮಾಜ ನಮ್ಮದು…

ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು. ಒಳ್ಳೆಯವರನ್ನು ಕೆಟ್ಟವರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಅಳತೆ ಮಾಡಿದರೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವುದಾದರೂ ಹೇಗೆ……
ಆತ್ಮವಂಚಕರ ಏಳು ಸುತ್ತಿನ ಕೋಟೆಯೊಳಗೆ ಸಿಲುಕಿರುವ ಮಕ್ಕಳು ಯುವಕರನ್ನು ಕಾಪಾಡುವುದು ಹೇಗೆ……
ಅವನೊಬ್ಬ ದೊಡ್ಡ ಸಾಹಿತಿ,
ಅಕ್ಷರದಲ್ಲಿಯೇ ಆದರ್ಶ ಹೇಳುತ್ತಾನೆ. ಮಾಡುವುದು ಮಾತ್ರ ಹೊಲಸು ಕೆಲಸಗಳು………
ಅವನೊಬ್ಬ ರಾಜಕಾರಣಿ,
ಮಾತಿನಲ್ಲೇ ಅರಮನೆ ಕಟ್ಟುತ್ತಾನೆ, ವಾಸ್ತವವಾಗಿ ಬಾಯಿ ಬಿಟ್ಟರೆ ಬಣ್ಣ ಗೇಡು…..

ಅವನೊಬ್ಬ ಧರ್ಮಾಧಿಕಾರಿ,
ನ್ಯಾಯ ನೀತಿಯ ಬಗ್ಗೆ ಪುಂಖಾನುಪುಂಖವಾಗಿ ಬೋಧಿಸುತ್ತಾನೆ. ಆದರೆ ನಿಜ ಬದುಕಿನಲ್ಲಿ ಮಹಾ ದುಷ್ಟ……
ಪ್ರೀತಿಯನ್ನೇ ಗುರುತಿಸಲಾಗದ,
ದ್ವೇಷವನ್ನೇ ಒಪ್ಪಿಕೊಳ್ಳುವ ಹಂತಕ್ಕೆ ನಮ್ಮ ಅಕ್ಷರಸ್ಥ ಬುದ್ದಿವಂತರು ತಲುಪಿದ್ದಾರೆ.
ಹೀಗೆ ಸಾಗುತ್ತಲೇ ಇದೆ ಬದುಕು……
ಮಾತು ಅಕ್ಷರ ಜ್ಞಾನ ಪ್ರೀತಿ ವಿಶ್ವಾಸ ಕರುಣೆ ಮಾನವೀಯತೆ ನಿಮ್ಮ ವ್ಯಕ್ತಿತ್ವದ ಭಾಗವಾಗುವವರೆಗೂ ಭಾರತೀಯ ಸಮಾಜ ಪ್ರತಿದಿನ ಅಪಾಯದ ಅಂಚಿಗೆ ಸರಿಯುತ್ತಿರುತ್ತದೆ.
ನನ್ನಂತವರ ಬರಹಕ್ಕೆ ವಿಷಯವಾಗುತ್ತಲೇ ಇರುತ್ತದೆ.
ಮುಖವಾಡ ಕಳಚುವವರೆಗೂ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.
ಪ್ರತಿಯೊಬ್ಬರ ನಡವಳಿಕೆಯನ್ನು ಅವ್ರ ರಾಶಿ ಆಧಾರದ ಮೇಲೆ ಹೇಳಬಹುದು. ವ್ಯಕ್ತಿ ವರ್ತನೆಗೂ ರಾಶಿಗೂ ಸಂಬಂಧವಿದೆ. ಯಾವ ವ್ಯಕ್ತಿ ಕೋಪಿಷ್ಟ? ಯಾವ ವ್ಯಕ್ತಿ ಅದೃಷ್ಟವಂತ ಎಂಬುದನ್ನು ರಾಶಿ ನೋಡಿಯೇ ಪಂಡಿತರು ಹೇಳ್ತಾರೆ. ರಾಶಿ ಹಾಗೂ ಪ್ರಣಯಕ್ಕೂ ಸಂಬಂಧವಿದೆ. ಯಾವ ಹುಡುಗಿಯರು ಮದುವೆಯಾದ್ಮೇಲೆ ಸಂಗಾತಿಯನ್ನು ಅತಿ ಹೆಚ್ಚು ತೃಪ್ತಿಪಡಿಸ್ತಾರೆ? ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾರೆ ಎಂಬುದನ್ನು ರಾಶಿ ಮೂಲಕವೇ ಹೇಳಬಹುದು. ಮಕರ ರಾಶಿಯ ಹುಡುಗಿಯರು ಪ್ರೀತಿ ವಿಚಾರದಲ್ಲಿ ಎಂದೂ ಮೋಸ ಮಾಡುವುದಿಲ್ಲವಂತೆ. ಪತಿಯನ್ನು ನಿಷ್ಠೆಯಿಂದ ಪ್ರೀತಿ ಮಾಡುತ್ತಾರಂತೆ. ಮದುವೆಯಾದ್ಮೇಲೆ…
ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲೇ ಮೊದಲ ವಿದ್ಯುತ್ ಪಡೆದ ನಗರ
ಭಾರತದಲ್ಲೇ ಅತಿ ಹೆಚ್ಚು ಚರ್ಚ್ಗಳನ್ನ ಒಂದಿರೊ ನಗರ
ರೈಲ್ವೆಯನ್ನು ಹೊಂದಿದ ಕರ್ನಾಟಕದ ಮೊದಲ ನಗರ
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…
ಸಾದಿಸುವವನಿಗೆ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಈ ನಂದಿನಿಯವರೇ ಸಾಕ್ಷಿ. ಇವರು ಓದಿದ್ದು ಕೇವಲ ಪಿಯುಸಿ. ಬಡತನದ ಕಾರಣದಿಂದ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಆಗಲಿಲ್ಲ. ಆದ್ರೆ ಬರಿ ಪಿಯುಸಿ ಓದಿ ತಿಂಗಳಿಗೆ ಲಕ್ಷ ಸಂಪಾದನೆ. ಹೆಸರು ನಂದಿನಿ, ಬೆಂಗಳೂರು ಗ್ರಾಮಾಂತರ ಪ್ರದೇಶದವರು. ತಂದೆ ದೇವಸ್ಥಾನದ ಪೂಜಾರಿ, ತಾನು ಡಾಕ್ಟರ್ ಆಗಬೇಕು ಎಂಬ ಸುಂದರ ಕನಸನ್ನು ಹೊತ್ತಿದ್ದರು, ಆದ್ರೆ ಬಡತನ ಆ ಕನಸನ್ನ ಕನಸಾಗಿಗೆ ಉಳಿಸಿತು. ಪಿ ಯು ಸಿ ಆದಮೇಲೆ ನಂದಿನಿಗೆ ಮದುವೆ ಮಾಡಿದರು. ನಂದಿನಿಯ…