inspirational

ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

8

ವಿಶ್ವದ ನಂಬರ್ 1 ಶ್ರೀಮಂತ ಎಂಬ ಅಗ್ಗಳಿಕೆ ಈಗ 72 ವರ್ಷದ ಬರ್ನಾರ್ಡ್ ಅರ್ನಾಲ್ಟ್ ಪಾಲಾಗಿದೆ. LVMH ಅಧ್ಯಕ್ಷ, ಸಿಇಒ ಅರ್ನಾಲ್ಟ್ ಬಗ್ಗೆ ಮಾಹಿತಿ ಇಲ್ಲಿದೆ.

  • Published On – 25 May 2021
Bernard Arnault: ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

ಬರ್ನಾರ್ಡ್ ಅರ್ನಾಲ್ಟ್

ಈಗ ವಿಶ್ವದ ನಂಬರ್ 1 ಶ್ರೀಮಂತ ಸ್ಥಾನದಲ್ಲಿದೆ. ಫೋರ್ಬ್ಸ್ ಅಂಕಿ- ಅಂಶದ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ 18,620 ಕೋಟಿ ಅಮೆರಿಕನ್ ಡಾಲರ್. ಇಷ್ಟು ಹಣ ಇದ್ದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಗುತ್ತದೆ ಎಂಬ ಕುತೂಹಲ ನಿಮಗೆ ಆಗಬಹುದು. 13.10 ಲಕ್ಷ ಕೋಟಿ ರೂಪಾಯಿ ಆಸ್ತಿ ಆಗುತ್ತದೆ. 72 ವರ್ಷದ, ಎಲ್​ವಿಎಂಎಚ್​ನ ಅಧ್ಯಕ್ಷ ಮತ್ತು ಸಿಇಒ ಅರ್ನಾಲ್ಟ್ ಆಸ್ತಿಯು ಕಳೆದ ಒಂದೂವರೆ ವರ್ಷದಲ್ಲಿ 11,000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಬ್ಲೂಮ್​ಬರ್ಗ್ ಬಿಲಯನೇರ್ ಸೂಚ್ಯಂಕದ ಪ್ರಕಾರ, ಈ ತಿಂಗಳ ಶುರುವಿನಲ್ಲಿ ಎಲಾನ್ ಮಸ್ಕ್ ಅನ್ನು ಮೀರಿಸಿದ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಎರಡನೇ ಸ್ಥಾನಕ್ಕೆ ಏರಿದರು.

ಲೂಯಿಸ್ ವ್ಯೂಟ್ಟನ್ ಮೊಯೆಟ್ ಹೆನೆಸ್ಸೆ (LVMH) ಎಂಬುದು ವಿಶ್ವದ ಮುಂಚೂಣಿ ಫ್ಯಾಷನ್ ವಿಲಾಸಿ ವಸ್ತುಗಳ ಕಂಪೆನಿ. 2021ರ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 32ರಷ್ಟ ಏರಿಕೆ ದಾಖಲಿಸಿ, ಆದಾಯವು 1400 ಕೋಟಿ ಯುರೋ ಮುಟ್ಟಿದೆ. ಈ ವರ್ಷದ ಜನವರಿಯಲ್ಲಿ ಎಲ್​ವಿಎಂಎಚ್​ನಿಂದ ಅಮೆರಿಕದ ಅತಿ ದೊಡ್ಡ ಆಭರಣ ತಯಾರಕ ಕಂಪೆನಿಯಾದ ಟಿಫಾನಿ ಅಂಡ್ ಕಂಪೆನಿಯನ್ನು 1.58 ಕೋಟಿ ಅಮೆರಿಕನ್ ಡಾಲರ್​ಗೆ ಖರೀದಿಸಿ, ಫ್ಯಾಷನ್ ಉದ್ಯಮದಲ್ಲಿನ ಅತಿ ದೊಡ್ಡ ವ್ಯವಹಾರ ಎಂಬ ದಾಖಲೆ ಬರೆಯಿತು. ಈ ವ್ಯವಹಾರದಿಂದಾಗಿ ಎಲ್​ವಿಎಂಎಚ್​ನ ಸಣ್ಣ ಉದ್ಯಮವನ್ನು ಉತ್ತೇಜಿಸಲು ಸಹಾಯ ಆಗುತ್ತದೆ ಎಂಬ ನಂಬಿಕೆ ಇದೆ. ಈಗಾಗಲೇ ಬುಲ್ಗಾರಿ ಮತ್ತು ಟ್ಯಾಗ್ ಹ್ಯುಯೆರ್​ನಂಥ ಆಭರಣ ಹಾಗೂ ವಾಚ್ ವಿಭಾಗಗಳಿಗೆ ಕಂಪೆನಿ ಹೆಸರಾಗಿದೆ.

ಬರ್ನಾರ್ಡ್ ಅರ್ನಾಲ್ಟ್ ಸಾಮ್ರಾಜ್ಯವು 70 ಬ್ರ್ಯಾಂಡ್​ಗಳನ್ನು ಹೊಂದಿದೆ. ಈಚಿನ ತಿಂಗಳಲ್ಲಿ ಹೆಸರಾಂತ ಕಂಪೆನಿಗಳಲ್ಲಿ 53.8 ಕೋಟಿ ಅಮೆರಿಕ ಡಾಲರ್ ಮೌಲ್ಯದ ಷೇರುಗಳನ್ನು ಅರ್ನಾಲ್ಟ್ ಖರೀದಿ ಮಾಡಿದ್ದಾರೆ. ದುಬಾರಿ ವಸ್ತುಗಳ ಮಾರ್ಕೆಟ್ ಅನ್ನು ಅರ್ನಾಲ್ಟ್ ಪ್ರವೇಶಿಸಿದ್ದು 1984ರಲ್ಲಿ. ಮೊದಲಿಗೆ ಕೈಗೆತ್ತಿಕೊಂಡು ದಿವಾಳಿಯಾಗಿದ್ದ ಟೆಕ್ಸ್​ಟೈಲ್ ಸಮೂಹ. ಅದರ ಮಾಲೀಕತ್ವ ಇದ್ದದ್ದು ಕ್ರಿಶ್ಚಿಯನ್ ಡಿಯಾರ್ ಬಳಿ. 1989ರಲ್ಲಿ ಅರ್ನಾಲ್ಟ್ ಎಲ್​ವಿಎಂಎಚ್​ನ ಪ್ರಮುಖ ಷೇರುದಾರರಾದರು.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ