inspirational

ವಿದೇಶಗಳಲ್ಲಿರುವ ಭಾರತೀಯರ ಮಾನಸಿಕ ಸಮಸ್ಯೆಗಳು

15

– ಮಯೂನ್ ಎನ್

ಉದ್ಯೋಗವನ್ನೂ, ಒಳ್ಳೆಯ ಭವಿಷ್ಯವನ್ನೂ ಅರಸುತ್ತಾ, ತಾಯ್ನಾಡನ್ನು ಬಿಟ್ಟು, ಹೊರದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಭೆಗೆ ಮನ್ನಣೆ, ಕೈತುಂಬಾ ಸಂಬಳ, ಉತ್ತಮ ಮಟ್ಟದ ಜೀವನ ವಿಧಾನಗಳಿರುವ ವಿದೇಶಗಳಲ್ಲಿರುವ ಭಾರತೀಯರು ಸಂತೋಷ, ತೃಪ್ತಿಯಿಂದ ಇರುವರು ಎಂದು ಹೇಳಲಾದೀತೇ? `ನಾವು ಕನಸು ಮನಸಿನಲ್ಲಿ ಊಹಿಸಲಾಗದಷ್ಟು ವೈಭೋಗವನ್ನು ಇಲ್ಲಿ ಕಂಡಿದ್ದೇವೆ. ಹಣವಿದೆ. ಸುಖಕೊಡುವ ವಸ್ತುಗಳಿವೆ. ವಿಸ್ಮಯ ಪಡುವ ವೈಜ್ಞಾನಿಕ ಸಲಕರಣೆಗಳಿವೆ. ಆದರೇನು ಮನಸ್ಸಿಗೆ ನೆಮ್ಮದಿ ಇಲ್ಲ. ಏನೋ ಅತೃಪ್ತಿ ನಮ್ಮನ್ನೂ ಕಾಡುತ್ತದೆ’ ಎಂದು ವಿದೇಶಗಳಲ್ಲಿರುವ ಭಾರತೀಯರು ಹೇಳುತ್ತಾರೆ. ಅನೇಕ ರೀತಿಯ ಮಾನಸಿಕ ಒತ್ತಡಗಳು ಅವರನ್ನೂ ಕಾಡುತ್ತವೆ. ಉದಾಹರಣೆಗೆ-

(೧) ಸಾಂಸ್ಕೃತಿಕ ಗೊಂದಲ (culture Shock): ಪ್ರಾರಂಭದಲ್ಲಿ ಪಾಶ್ಚಿಮಾತ್ಯ ಜೀವನಶೈಲಿ, ಸುಖನೀಡುವ ವಿವಿಧ ಸಲಕರಣೆಗಳು, ವ್ಯವಸ್ಥಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡಿ, ನಮ್ಮ ಭಾರತದ ಅವ್ಯವಸ್ಥೆಗೆ ಹೋಲಿಸಿದರೆ, ಈ ನಾಡು ಸ್ವರ್ಗ ಎಂದು ಭಾವಿಸಿ ಖುಷಿ ಪಡುವ ಭಾರತೀಯರು, ಕ್ರಮೇಣ ತಮ್ಮ ಸಂಸ್ಕೃತಿಗೂ ಈ ಸಂಸ್ಕೃತಿಗೂ ಇರುವ ಅನೇಕ ವ್ಯತ್ಯಾಸಗಳನ್ನು ಅರಗಿಸಿಕೊಳ್ಳಲಾರರು. ವಿಪರೀತ ಸ್ಫರ್ಧೆ, ಅಮಾನವೀಯ ಸಂಬಂಧಗಳು, ಎಲ್ಲವನ್ನೂ ಹಣದಿಂದಲೇ ಅಳೆಯುವ ಪ್ರವೃತ್ತಿ, ಭಾವನಾತ್ಮಕ ಸಂಬಂಧಗಳ ಅಭಾವ ಕ್ರಮೇಣ ದೊಡ್ಡ ಕೊರತೆಯನ್ನುಂಟುಮಾಡುತ್ತದೆ. ತಮ್ಮ ಮಕ್ಕಳು ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಅಥವಾ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕೇ ಎಂದು ನಿರ್ಧರಿಸಲಾರರು. ಯಾವುದೇ ದೇಶದ ಸ್ಥಳೀಯರು, ವಿದೇಶೀಯರನ್ನು ತಮ್ಮವರು ಎಂದು ಪೂರ್ಣವಾಗಿ ಒಪ್ಪಿಕೊಳ್ಳರು. ಸ್ವಲ್ಪ ಮಟ್ಟಿನ ಅಪನಂಬಿಕೆ, ಅವಿಶ್ವಾಸ, ಮತ್ಸರವನ್ನೂ ತೋರಿಸಿಯೇ ತೋರಿಸುತ್ತಾರೆ. ಮುಕ್ತ ಮನಸ್ಸಿನಿಂದ ಬೆರೆಯುವುದಿಲ್ಲ. ಹೀಗಾಗಿ ಅನೇಕ ಭಾರತೀಯರು ಸ್ಥಳೀಯರಿಗೆ ಪರಕೀಯರಾಗಿಯೇ ಉಳಿಯುತ್ತಾರೆ. ಇಲ್ಲವೇ ಹೆಚ್ಚು ಹೆಚ್ಚಾಗಿ ಭಾರತೀಯರೊಂದಿಗೇ ಒಡನಾಡಲು ಇಷ್ಟಪಟ್ಟು, ಸ್ಥಳೀಯರಿಂದ ಮತ್ತಷ್ಟು ದೂರವಾಗುತ್ತಾರೆ. ತಮ್ಮ ಸಂಸ್ಕೃತಿಯನ್ನೂ, ವಿದೇಶದ ಸಂಸ್ಕೃತಿಯನ್ನೂ ತುಲನೆ ಮಾಡುತ್ತಾ, ಯಾವುದು ಸರಿ ಎಂದು ನಿರ್ಧರಿಸಲಾಗದೇ ಗೊಂದಲಕ್ಕೀಡಾಗುತ್ತಾರೆ.

(೨) ಒಂಟಿತನದ ಭಾವನೆ: ಕೆಲಸಕ್ಕೆ ಹೋಗದವರಲ್ಲಿ, ಒಂಟಿತನದ ಭಾವನೆ ಹೆಚ್ಚು. ಮನೆಯಲ್ಲಿ ಮನೆಗೆಲಸ ಮುಗಿಸಿ, ಬಿಡುವಿನ ವೇಳೆಯನ್ನು ಹೇಗೆ ಕಳೆಯುವುದೆನ್ನುವುದು ವಿದೇಶದಲ್ಲಿರುವ ಭಾರತೀಯ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ. ಟಿವಿ ನೋಡುವುದು, ವೀಡಿಯೋ ಗೇಮ್ಸ್ ಆಡುವುದು, ಓದುವುದು, ಶಾಪಿಂಗ್ ಹೋಗುವುದು ಬೇಸರವಾಗತೊಡಗುತ್ತದೆ. ಹಾಗೆಯೇ ಸ್ನೇಹಿತರೊಂದಿಗೆ, ಪರಿಚಯದವರೊಂದಿಗೆ ಎಷ್ಟು ಹೊತ್ತು ಫೋನ್‌ನಲ್ಲಿ ಮಾತನಾಡಲು ಸಾಧ್ಯ

(೩) ತಮ್ಮ ಮತ್ತು ಮಕ್ಕಳ ಭವಿಷ್ಯ: ದುಡಿಯುವ ಅವಧಿಯಲ್ಲಿ ನಾವೇನೋ ಇಲ್ಲಿದ್ದೇವೆ, ದುಡಿಯುತ್ತೇವೆ, ಸುಖಪಡುತ್ತೇವೆ, ಹಣ ಸಂಪತ್ತನ್ನೂ ಗಳಿಸುತ್ತೇವೆ. ಆದರೆ ದೇಶ ನಮ್ಮ ದೇಶವಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಇಲ್ಲೇ ಇದ್ದು, ಈ ದೇಶದ ನಾಗರೀಕರಾಗಬೇಕೆ, ಸ್ಥಳೀಯರ ಜೊತೆಗೆ ಮದುವೆ ಸಂಬಂಧ ಬೆಳೆಸಬೇಕೇ, ವಾಪಾಸ್ ಭಾರತಕ್ಕೆ ಹೋಗಿಬಿಡೋಣವೇ. ಅಲ್ಲಿ ಹೋಗಿ ಏನು ಮಾಡುವುದು. ಅಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳಲು ಸಾಧ್ಯವೇ. ನಾವು ತ್ರಿಶಂಕು ಸ್ಥಿತಿಗೆ ಒಳಗಾದೆವಲ್ಲ. ಇಲ್ಲಿಯೂ ಸಲ್ಲುವುದಿಲ್ಲ ಅಲ್ಲಿಯೂ (ಭಾರತದಲ್ಲಿ) ಸಲ್ಲುವುದಿಲ್ಲ. ತಮ್ಮ ಭವಿಷ್ಯವೇನು -ಈ ಅನಾಥ ಪ್ರಜ್ಞೆ ಹಲವರನ್ನು ಕಾಡತೊಡಗುತ್ತದೆ.

(೪) ಅಗತ್ಯಗಳಿಗೆ ಗುಲಾಮನಾಗುವುದು: ಗ್ರಾಹಕ ಸಂಸ್ಕೃತಿಯಲ್ಲಿ ಅಗತ್ಯಗಳಿಗೆ ಕೊನೆಯೇ ಇಲ್ಲ. ಇಷ್ಟಿದ್ದರೆ ಮತ್ತಷ್ಟು ಬೇಕು, ಮತ್ತಷ್ಟು ಸಿಕ್ಕಿದರೆ, ಇನ್ನಷ್ಟು ಬೇಕು. ಬೇಕುಗಳ ಪೂರೈಕೆ ಆಗದಿದ್ದರೆ, ಎಲ್ಲವನ್ನೂ ಕಳೆದುಕೊಂಡಂತಹ ಅನುಭವ, ತೃಪ್ತಿಯೇ ಇಲ್ಲ. ದೇಹಕ್ಕೆ ನಾವು ಸುಖ ಕೊಟ್ಟಷ್ಟು, ಅದು ಮತ್ತಷ್ಟು ಬೇಕು ಎನ್ನುತ್ತದೆ. ದೇಹ ಸೋಮಾರಿಯಾಗುತ್ತದೆ. ಬೊಜ್ಜು ಬೆಳೆಯುತ್ತದೆ. ಮನಸ್ಸು ಸದಾ ವಿಷಯ ಸುಖಗಳನ್ನಷ್ಟೇ ಬಯಸುತ್ತದೆ. ಹೀಗಾಗಿ ಮನಸ್ಥೈರ್ಯ ಕುಗ್ಗುತ್ತದೆ. ಆತ್ಮ ವಿಶ್ವಾಸ ತಗ್ಗುತ್ತದೆ. ಅಗತ್ಯಗಳ ಪೂರೈಕೆಗಾಗಿ ಚಡಪಡಿಸುತ್ತಾ, ಸದಾ ಒತ್ತಡದಲ್ಲಿದ್ದು, ಮೈ ಮನಸ್ಸುಗಳು ದುರ್ಬಲವಾಗತೊಡಗುತ್ತವೆ. ಪರಿಣಾಮ, ಮನೋದೈಹಿಕ ಬೇನೆಗಳು, ಖಿನ್ನತೆ, ಆತಂಕದಂತಹ ಮನೋಬೇನೆಗಳು, ಮದ್ಯಪಾನ ಮಾದಕ ವಸ್ತುಗಳ ದುರ್ಬಳಕೆ, ಅಪರಾಧ, ಆತ್ಮಹತ್ಯಾ ಪ್ರವೃತ್ತಿಗಳು ವಿದೇಶದಲ್ಲಿರುವ ಭಾರತೀಯರನ್ನು ಹೆಚ್ಚಾಗಿ ಕಾಡುತ್ತವೆ. ಚಿಕ್ಕವಯಸ್ಸಿನಲ್ಲೇ ಹೃಧಯಾಘಾತ, ಪಾರ್ಶ್ವವಾಯು, ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗುತ್ತಿದೆ.

ಪರಿಹಾರ

ವಿದೇಶಗಳಲ್ಲಿರುವ ಭಾರತೀಯರು ತಮ್ಮ ಧೋರಣೆ, ಜೀವನಶೈಲಿಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡರೆ, ಒತ್ತಡದ ದುಷ್ಪರಿಣಾಮಗಳನ್ನೂ ತಗ್ಗಿಸಬಹುದು. ತಮ್ಮ ಮೈಮನಸ್ಸುಗಳ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು.

(೧) ಆಸೆ-ಅಗತ್ಯಗಳನ್ನು ತಗ್ಗಿಸಿ, ಸರಳ ಜೀವನ ಶೈಲಿಯನ್ನು ರೂಢಿಸಿಕೊಳ್ಳವುದು. ಹಣ-ವಸ್ತುಗಳ ಸಂಪಾದನೆಯೇ ಜೀವನದ ಗುರಿಯಾಗಬಾರದು.
(೨) ಹಿತ ಮಿತ ಆಹಾರ ಸೇವನೆ: ಆದಷ್ಟು ನೈಸರ್ಗಿಕ ಆಹಾರವನ್ನು ಸೇವಿಸುವುದು. ಸಿಹಿ, ಕೊಬ್ಬು, ಸಿದ್ಧ ಪಡಿಸಿದ ಆಹಾರಗಳನ್ನೂ ಸೇವಿಸಬಾರದು.
(೩) ದಿನ ನಿತ್ಯ ವ್ಯಾಯಾಮ
(೪) ಸೃಜನಶೀಲ ಚಟುವಟಿಕೆಗಳು: ಸಾಹಿತ್ಯ, ಕಲೆ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವುದು.
(೫) ಕಷ್ಟ ಸುಖ -ನೋವು ನಲಿವುಗಳನ್ನೂ ಆತ್ಮೀಯರಲ್ಲಿ ಹೇಳಿಕೊಳ್ಳುವುದು.
(೬) ಪ್ರಕೃತಿಯೊಂದಿಗೆ ಆದಷ್ಟು ಸಮೀಪದಲ್ಲಿರುವುದು. ಗಿಡ ಮರ ನದಿ ಬೆಟ್ಟಗಳಿರುವ ಸ್ಥಳಗಳಿಗೆ ಆಗಾಗ ಭೇಟಿಕೊಡುವುದು.
(೭) ಯೋಗ, ಧ್ಯಾನ, ಧಾರ್ಮಿಕ ಚಟುವಟಿಕೆಗಳು, ಧಾರ್ಮಿಕ ಗ್ರಂಥಗಳ ಪಠಣ, ಆಧ್ಯಾತ್ಮಿಕ ಚಿಂತನೆ.
(೮) ದಾನ, ಧರ್ಮ ಪರೋಪಕಾರದಂತಹ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗುವುದು.

ವಿಳಾಸ: ಮಯೂನ್ ಎನ್

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣನವರ ನಡುವೆ ಬ್ರೇಕ್ ಅಪ್‌ ಹಾಗೇ ಹೋಯ್ತಾ..!

    ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು. ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ…

  • ಸುದ್ದಿ

    ‘ಸೋಷಿಯಲ್ ಮೀಡಿಯಾ’ ಬಳಸುವ ಮುನ್ನಾ ಬಾರಿ ಎಚ್ಚರದಿಂದಿರಿ..!ಯಾಕೆ ಗೊತ್ತಾ?

    ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ ನಮ್ಮ ಭಾರತ. ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾ ಹಂಚಿಕೊಳ್ಳುವ ಬೇಡಿಕೆಗೆ ಸಂಬಂಧಿಸಿದಂತೆ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ…

  • ಸುದ್ದಿ

    ಸರ್ಕಾರಿ ಶಾಲೆ ಒಂದರಲ್ಲಿ ಬಿಸಿ ಊಟದಲ್ಲಿ ಹಾವು ಪತ್ತೆ…ಎಲ್ಲಿ ಗೊತ್ತೇ?

    ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳ ಬಿಸಿ ಊಟದಲ್ಲಿ ಹಾವು ಬಿದ್ದಿರುವ ಘಟನೆ ನಡೆದಿದೆ. ಈ ಶಾಲೆಗೆ ಊಟ ಸರಬರಾಜು ಮಾಡುತ್ತಿದ್ದದ್ದು ಒಂದು ಸರ್ಕಾರೇತರ ಖಾಸಗಿ ಸಂಸ್ಥೆ ಯಾಗಿದ್ದು , ಇದು ಶಾಲೆಗೆ ಕಳುಹಿಸಿಕೊಟ್ಟ ಆಹಾರದಲ್ಲಿ ಹಾವು ಇರುವುದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಸುದ್ಧಿ ವರದಿಯಾಗಿದ್ದು ಈ ಕುರಿತು ವಿಚಾರಣೆ ನಡೆಸಿ ಆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಗಾರ್ಗವನ್…

  • ಸಿನಿಮಾ

    ಐಟಿ ದಾಳಿ ವೇಳೆ ಪುನೀತ್ ರಾಜಕುಮಾರ್ ಮನೆ ಮುಂದೆ ಸಚಿವ ಡಿಕೆ.ಶಿವಕುಮಾರ್ ಬಂದಿದ್ದೇಕೆ ಗೊತ್ತಾ..?

    ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು, ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 24 ಗಂಟೆಗಳಿಂದ ಅಧಿಕಾರಿಗಳು ಆಸ್ತಿ ಪಾಸ್ತಿ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಬೆಂಗಳೂರಿನ ಸುಮಾರು 25 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು…

  • ಸುದ್ದಿ

    ಎನ್ ಡಿಎ 2.0 ತನ್ನ ಮೊದಲ ಐದು ವರ್ಷಗಳ ಆರ್ಥಿಕ ಕಾರ್ಯತಂತ್ರ ಯೋಜನೆ ಜಾರಿಗೆ ತರಲಿ: ಕಿರಣ್ ಮಜುಂದಾರ್ ಶಾ ಹೆಳಿಕೆ…..

    ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ…