ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ. ಆದರೆ,ಮದುವೆಗೆ ಸಂಬಂಧಿಸಿದಂತೆ ಈ ಪ್ರಶ್ನೆ ಹಾಗೇ ಉಳಿದುಹೋಗಿದೆ.
ವರ ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಮಾತ್ರ ಹಾಕುತ್ತಾನೆ .ಏಕೆ ?
ಹಿಂದೂ ಸಂಪ್ರದಾಯದಲ್ಲಿ ಮೂರು ಎಂಬ ಅಂಕೆಗೆ ಒಂದು ವಿಶೇಷ ಪ್ರಾಧಾನ್ಯತೆಯಿದೆ. ತ್ರಿಲೋಕಗಳು, ತ್ರಿಮೂರ್ತಿಗಳು, ತ್ರಿಗುಣಗಳು…ಹೀಗೆ ಮೂರು ಎನ್ನುವುದನ್ನು ಮಂಗಳಕರವೆಂದು ಭಾವಿಸುತ್ತಾರೆ. ಆದುದರಿಂದ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ.
ಇನ್ನೂ ವಿವರವಾಗಿ ಹೇಳಬೇಕೆಂದರೆ…ಮಾನವರಿಗೆ ಸ್ಥೂಲ,ಸೂಕ್ಷ್ಮ,ಕಾರಣ ಎಂಬ ಮೂರು ಶರೀರಗಳು ಇರುತ್ತವಂತೆ. ಮದುವೆ ಸಮಯದಲ್ಲಿ ಹಾಕುವ ಒಂದೊಂದು ಗಂಟು ಒಂದೊಂದು ಶರೀರಕ್ಕೆ ಹಾಕುವುದಂತೆ…! ಮದುವೆಯೆಂದರೆ ಕೇವಲ ಬಾಹ್ಯ ಶರೀರಕ್ಕಲ್ಲದೆ…ಒಟ್ಟು ಮೂರು ಶರೀರಗಳಿಂದ ನಾವು ಒಂದಾಗುತ್ತಿದ್ದೇವೆ ಎಂಬುವುದೇ ಮೂರು ಗಂಟುಗಳನ್ನು ಹಾಕುವುದರ ಅರ್ಥವಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಸ್ವಿಡ್ಜರ್ಲೆಂಡ್ ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಹಾರ್ಟ್ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ…
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಶಿವಜಿನಗರದ ತಿಮ್ಮಯ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ದನದ ಕೊಟ್ಟಿಗೆಯಂತಿರುವ ಕಟ್ಟಡ, ಉಸಿರುಕಟ್ಟುವ ವಾತಾವರಣ, ನೊಣ-ಸೊಳ್ಳೆಗಳ ಕಾಟ, ಇನ್ನು ಮಳೆ ಬಂದಾಗಲೆಲ್ಲ ಕಿಟಕಿ- ಬಾಗಿಲು, ಹೆಂಚುಗಳ ಮೂಲಕ ಸೋರುವ ಮಳೆ ನೀರಿನ ಜತೆಗೆ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ. ಇದರ ಜತೆಗೆ ನೊಣ-ಸೊಳ್ಳೆಗಳ ಕಾಟ. ಇದು ಶಿವಾಜಿನಗರ ಸರ್ಕಾರಿ ಶಾಲೆ ಅನುಭವಿಸುತ್ತಿರುವ ಸಮಸ್ಯೆಯಾಗಿದೆ.. ಅಷ್ಟೇ ಅಲ್ಲದೆ ಶಾಲೆಯಲ್ಲಿ ಒಂದು ಸುಸಜ್ಜಿತ ಶೌಚಾಲಯವಿಲ್ಲ. ಮಕ್ಕಳಿಗೆ ಕುಡಿವ ನಿರಿನ ವ್ಯವಸ್ಥೆ ಕೂಡ ಇಲ್ಲ….
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ. ಊಟದ ವಿಷಯದಲ್ಲಿ ನಾವು ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಾವು ಸೇವಿಸುವ ಹಣ್ಣುಗಳ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗುತ್ತಾದೆ.ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್ಗಳು, ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. ಬಾಳೆಹಣ್ಣು ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ. ರಕ್ತಹೀನತೆಯಿಂದ…
ಮಂಡ್ಯ: ಗುತ್ತಲು ರಸ್ತೆಯಲ್ಲಿ 2018ರ ಅ.2ರ ಸಂಜೆ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗಿದ್ದಾರೆ. ಆ ದೆವ್ವಗಳ ಚಿತ್ರಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂಬ ಚಿತ್ರಸಹಿತ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಬಳಿ ಬಿಳಿ ಬಟ್ಟೆ ತೊಟ್ಟಿದ್ದ ಮಹಿಳೆಯಂತೆ ನಿಂತು ಡ್ರಾಪ್ ಕೇಳುವ ವಿಡಿಯೋ ವೈರಲ್ ಆಗಿ. ಅದು ದೆವ್ವವೇ ಇರಬೇಕು ಎಂಬ ಚರ್ಚೆಗಳು ನಡೆದಿದ್ದವು. ಅದರ ಬೆನ್ನಲ್ಲೇ ನಗರದ ಗುತ್ತಲು ರಸ್ತೆ ಬದಿಯಲ್ಲಿ ಮತ್ತು ಬೇಕರಿಯೊಂದರ ಪಕ್ಕ ದೆವ್ವಗಳು…
ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್ಮೆಂಟ್ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…
ರಾಜ್ಯದಲ್ಲಿ ಎಲ್ಲ ಸಾರ್ವಜನಿಕರು ಮತ್ತು ಅರ್ಹ ಮಕ್ಕಳು ಕರೋನ ಲಸಿಕೆ ಪಡೆಯುವ ಮೂಲಕ 2022 ಅನ್ನು ಕೋವಿಡ್ ಮುಕ್ತ ರಾಜ್ಯ ಮತ್ತು ಆರೋಗ್ಯಭರಿತ ವರ್ಷವನ್ನಾಗಿ ಮಾಡುವ ಸಂಕಲ್ಪಕ್ಕೆ ಜನರು ಸಹಕರಿಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರೋನ ಸೋಂಕು ನಾವು ಯಾರು ನೀರಿಕ್ಷೀಸಿದಂತೆ ಇರುವುದಿಲ್ಲ.ಮೊದಲು ಕಾಣಿಸಿಕೊಂಡಾಗ ಹೇಗೆ ಹರಡುತ್ತದೆ, ಉಲ್ಬಣಗೊಳ್ಳುತ್ತದೆ,ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ಗೊತ್ತಿರಲಿಲ್ಲ.ಇಂತಹ ವೇಳೆಯಲ್ಲಿಯೇ ಯಶಸ್ವಿಯಾಗಿ ನಿಯಂತ್ರಣ ಕಾರ್ಯ ನಿಭಾಯಿಸಿದ್ದೇವೆ.ಈ ಹಿಂದಿನ ಅನುಭವದಿಂದ ಸೋಂಕು ನಿಯಂತ್ರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಳೆದೊಂದು ವಾರದಿಂದ…