ಸಂಬಂಧ

ವರದಕ್ಷಿಣೆ ಬೇಡಿಕೆ ನೀಡಿದ ವರನ ಕುಟುಂಬದವರಿಗೆ ,ಮದುವೆಯಲ್ಲಿ ‘ವಧು’ ನೀಡಿದ ಶಾಕ್ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

198

ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.

ಕೋಟಾದ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಅನಿಲ್ ಸಕ್ಸೇನಾ ಅವರ ಮಗಳು ರಾಶಿ ಅವರ ಮದುವೆ, ಉತ್ತರ ಪ್ರದೇಶದ ಮೊರಾದಾಬಾದ್‌ನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಕ್ಷಮ್‌ ಮಧೋಕ್‌ ಅವರೊಂದಿಗೆ ನಡೆಯಬೇಕಿತ್ತು. ಮದುವೆಗೆ ಕೆಲವೇ ಗಂಟೆಗಳಿದ್ದಾಗ ವರನ ಕಡೆಯವರು ದಿಢೀರನೆ ಹೊಸ ಬೇಡಿಕೆ ಇಟ್ಟಿದ್ದರಿಂದ ರಾಶಿ ಕುಟುಂಬದವರು ಆಘಾತಕ್ಕೆ ಒಳಗಾದರು.

ನಿಶ್ಚಿತಾರ್ಥದಂದು ಕಾರು ಹಾಗೂ ತಲಾ 10 ಗ್ರಾಂನ 5 ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದೆವು. ಅಲ್ಲದೆ ಮದುವೆಯ ವ್ಯವಸ್ಥೆಗಾಗಿ ಅದಾಗಲೇ 30– 35 ಲಕ್ಷ ರೂಪಾಯಿ ವ್ಯಯಿಸಿದ್ದೆವು. ಅಷ್ಟಾದರೂ ಕೊನೇ ಕ್ಷಣದಲ್ಲಿ ಮತ್ತೆ ಹಣ ಮತ್ತು ಭಾರಿ ಮೊತ್ತದ ವಸ್ತುಗಳಿಗೆ ಬೇಡಿಕೆ ಇಟ್ಟಾಗ ನಾವು ಮಗಳಿಗೆ ವಿಷಯ ತಿಳಿಸಿದೆವು. ಆಕೆ ವರನೊಂದಿಗೆ ಫೋನ್‌ನಲ್ಲಿ ಮಾತನಾಡಿದಳು. ಆತ ಪಟ್ಟು ಸಡಿಲಿಸದಿದ್ದಾಗ, ಮದುವೆಯಾಗದಿರಲು ರಾಶಿ ನಿರ್ಧರಿಸಿದಳು’ ಎಂದು ಡಾ. ಅನಿಲ್‌ ಸಕ್ಸೇನಾ ತಿಳಿಸಿದ್ದಾರೆ.

ಬಳಿಕ ರಾಶಿ ಕುಟುಂಬದವರು ಸಕ್ಷಮ್‌, ಆತನ ಪೋಷಕರು, ಸಹೋದರಿ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟೆಲ್ಲಾ ಆದರೂ, ಊಟ ಮುಗಿದ ಬಳಿಕವೇ ಅತಿಥಿಗಳಿಗೆ ಮದುವೆ ಮುರಿದುಬಿದ್ದ ವಿಷಯವನ್ನು ತಿಳಿಸಿದ ರಾಶಿ ಕುಟುಂಬದವರ ಅತಿಥಿ ಸತ್ಕಾರ ಶ್ಲಾಘನೆಗೆ ಪಾತ್ರವಾಗಿದೆ.

‘ಇಂತಹ ಘಟನೆ ಮತ್ತಷ್ಟು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿ’ ಎಂದು ಅತಿಥಿಗಳು ವಧುವಿನ ನಿರ್ಧಾರವನ್ನು ಹೊಗಳಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷದವರಿಂದ ಕುದುರೆ ವ್ಯಾಪಾರ: ಸಿಎಂ ಕಮಲ್‍ನಾಥ್ ಹೇಳಿಕೆ….!

    ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್…

  • inspirational, ದೇವರು, ದೇವರು-ಧರ್ಮ

    ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

    ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  • ಸುದ್ದಿ

    ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕವಾಗಿ ಬ್ರೇಕ್….!ಕಾಂಗ್ರೆಸ್-ಜೆಡಿಎಸ್ ಸಭೆ ವಿಫಲ….

    ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ…

  • govt, Law, ಉಪಯುಕ್ತ ಮಾಹಿತಿ

    LPG ವಿತರಣಾ ಸಂಸ್ಥೆ LPG ಸಿಲಿಂಡರ್‌ಗಳನ್ನು 5 ಕಿ.ಮೀ ವರೆಗೆ ಉಚಿತವಾಗಿ ತಲುಪಿಸಬೇಕು!!!!

    LPG ವಿತರಣಾ ಸಂಸ್ಥೆ LPG ಸಿಲಿಂಡರ್‌ಗಳನ್ನು 5 ಕಿ.ಮೀ ವರೆಗೆ ಉಚಿತವಾಗಿ ತಲುಪಿಸಬೇಕು. Essential Commodities Act 2006  ಪ್ರಕಾರ, 5-10 ಕಿ.ಮೀ.ವರೆಗಿನ ವಿತರಣೆಗೆ 20 ರೂ. ಮತ್ತು 10-15 ಕಿ.ಮೀ.ಗೆ 25 ರೂ. 15 ಕಿ.ಮೀ ಮೀರಿದ ವಿತರಣಾ ಶುಲ್ಕ 30 ರೂ ಆಗಿರಬೇಕು. ವಿತರಣಾ ಶುಲ್ಕವನ್ನು ಸಹ ಬಿಲ್‌ನಲ್ಲಿ ದಾಖಲಿಸಬೇಕು. ಸಿಲಿಂಡರ್‌ನ ತೂಕವನ್ನು ಅಳೆಯಲು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸಹ ವಾಹನದಲ್ಲಿ ಇಡಬೇಕು. ಧೂಳಿನ ಕಾರಣದಿಂದಾಗಿ ಸಿಲಿಂಡರ್‌ನ ರಬ್ಬರ್ ತೊಳೆಯುವಿಕೆಯು ಹರಿದು ಹೋಗುವುದನ್ನು ತಪ್ಪಿಸಲು,…

  • ಸುದ್ದಿ

    ಆರ್ಥಿಕ ಕುಸಿತ ಎದುರಿಸುವುದು ಹೇಗೆ ಎಂದು ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್,.!

    ನವದೆಹಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್‌ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್‌ಗಳನ್ನು…

  • ಆರೋಗ್ಯ

    ಈರುಳ್ಳಿ ಸಿಪ್ಪೆಯ ನಂಬಲೂ ಸಾಧ್ಯವಿಲ್ಲದ ಉಪಯೋಗಗಳ ನಿಮ್ಗೆ ಗೂತ್ತಾ..?ತಿಳಿಯಲು ಈ ಲೇಖನ ಓದಿ….

    ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.