ಉಪಯುಕ್ತ ಮಾಹಿತಿ

ಲೈಫಲ್ಲಿ ಹೇಗೆ ಗೆಲ್ಲಬೇಕು ಅನ್ನೋರು..! ಮಿಸ್ ಮಾಡದೇ ಈ ಲೇಖನ ಓದಿ…

1391

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ.

ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..!

ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು ಉಳಿಸ್ಕೊಳೋ ಐಡಿಯಾ ಇರುತ್ತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಫಲಾ ಫಲಗಳ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 21 ಜನವರಿ, 2019 ಪೂರ್ವಜರ ಆಸ್ತಿಯ ಉತ್ತರಾಧಿಕಾರಿತ್ವದಸುದ್ದಿ ಇಡೀ ಕುಟುಂಬವನ್ನು ಸಂತುಷ್ಟಗೊಳಿಸಬಹುದು. ನೀವು ಇನ್ನು ಮುಂದೆ…

  • ಆರೋಗ್ಯ

    ರೋಗಗಳಿಗೆ ಎಳನೀರು ರಾಮಬಾಣ. ಈ ಅರೋಗ್ಯ ಮಾಹಿತಿ ನೋಡಿ!

    ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚದಾಗ ಜನರು ತಂಪುಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಎಳನೀರಿನ ಸೇವನೆ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದಿರುವ ವಿಷಯ.  ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ,ಫಿಟ್ನೆಸ್ ಗೂ ಇದು ಉಪಯೋಗಕರವಾಗಿದೆ. ಗರ್ಭಿಣಿ ಮಹಿಳೆ ಇದನ್ನು ನಿಯಮಿತವಾಗಿ ಸೇವಿಸಿದರೆ ಸುಂದರ ಹಾಗೂ ಸ್ವಾಸ್ಥ್ಯ ಮಗು ಹುಟ್ಟಲಿದೆ. ಈ…

  • ಉಪಯುಕ್ತ ಮಾಹಿತಿ

    ಅಪ್ಪಳಿಸಲಿದೆ ಗಜ ಚಂದ ಮಾರುತ..!ಎಲ್ಲೆಲ್ಲಿ ಮಳೆಯಾಗುತ್ತೆ ಗೊತ್ತಾ..?

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತದ ಪರಿಣಾಮ ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದ ಚಂಡಮಾರುತ ಎದ್ದಿದ್ದು ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಸ್ತುತ ತಮಿಳುನಾಡು ಕರಾವಳಿಯತ್ತ ಧಾವಿಸುತ್ತಿರುವ ಗಜ ಚಂಡಮಾರುತ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯಲ್ಲೂ ಭಾರಿ ಮಳೆ ಆತಂಕ ಸೃಷ್ಟಿ ಮಾಡಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ…

  • ರಾಜಕೀಯ

    ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಬಹುತೇಕ ಖಚಿತ!

    ಕೋಲಾರ:-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೋಲಾರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಹಾಗೂ ಗುಂಪುಗಾರಿಕೆ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಕೆ.ಹೆಚ್.ಮುನಿಯಪ್ಪನವರು ಬೆಂಬಲಿಗರ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ನವರು ಸಿದ್ದರಾಮಯ್ಯ ನವರಿಗೆ ಕೋಲಾರಕ್ಕೆ ಸ್ವಾಗತ ಕೋರಿದೆ. ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಯಾವ…

  • ಸುದ್ದಿ

    ಒಂದೇ ಒಂದು ಪದವನ್ನು ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯವನ್ನು ಗೆದ್ದ ಅನುಷ್ಕಾ ಶರ್ಮಾ…ಅಷ್ಟಕ್ಕೂ ಅನುಷ್ಕಾ ಬಳಕೆ ಮಾಡಿದ ಪದ ಏನು ಗೊತ್ತಾ..?

    ಭಾರತಕ್ರಿಕೆಟ್ ತಂಡದನಾಯಕವಿರಾಟ್ ಕೊಹ್ಲಿ ಪತ್ನಿಹಾಗೂಬಾಲಿವುಡ್ ನಟಿಅನುಷ್ಕಾ ಶರ್ಮಾಕನ್ನಡದಲ್ಲಿ ಪದವೊಂದನ್ನು ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್  ಕೊಹ್ಲಿ ಜತೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಕನ್ನಡದಲ್ಲಿ ಒಂದೇ ಒಂದು ಪದವನ್ನು ಮಾತನಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.  ಅನುಷ್ಕಾ ಮಾಡಿರುವ ತಾಜಾ ಟ್ವೀಟ್‌ನಲ್ಲಿ ಧನಾತ್ಮಕತೆಯ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ. ಇಂಟರ್‌ನೆಟ್‌ನಲ್ಲಿ ಧನಾತ್ಮಕತೆಯನ್ನು ಪಸರಿಸುವ ಟ್ವೀಟ್‌ಗಳನ್ನು ಓದುತ್ತಾ ಸಾಗುತ್ತಾರೆ. ಕೊನೆಗೆ ದಟ್ಸ್ ಇಟ್ ಬದಲು ಕನ್ನಡದಲ್ಲೇ ‘ಅಷ್ಟೇ’ ಎಂದು ಹೇಳುವ…