ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.
ಆದರೀಗ ಉತ್ತರ ಪ್ರದೇಶದಲ್ಲಿ ಬಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬಾರಾಂಬರಿ ಜಿಲ್ಲೆಯಲ್ಲಿ ಮದುವೆಯೊಂದು ನಡೆದಿದ್ದು, ಇಲ್ಲಿದ್ದ ವರ 80ರ ಹರೆಯದವರು ಹಾಗೂ ವಧುವಿಗೆ 70 ವರ್ಷ.
ಆದರೆ ಈ ಮದುವೆ ಇಷ್ಟೊಂದು ಚರ್ಚೆಗೀಡಾಗಲು ಕಾರಣವಾಗಿದ್ದೇನೆಂದರೆ ವಧು- ವರರಿಬ್ಬರೂ ಪ್ರೇಮಿಗಳಾಗಿದ್ದು, ಕಳೆದ 50 ವರ್ಷಗಳಿಂದ ಜೊತೆಗಿದ್ದರು ಅಂದರೆ ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದರು.
ವರದಿಯನ್ವಯ ಬಾನುಪುರದಲ್ಲಿ ವಾಸವಿರುವ ಸುಕುಮಾರ್ ಹಾಗೂ ರಜ್’ಪತಾ ದೇವಿ ಇಬ್ಬರ ನಡುವೆ ಯುವ ಪ್ರಾಯದಲ್ಲೇ ಪ್ರೇಮಾಂಕುರವಾಗಿತ್ತು. ಆದರೆ ಆ ಸಮಯದಲ್ಲಿ ಸುಕುಮಾರ್ ತುಂಬಾ ಬಡವನಾಗಿದ್ದು, ರಜ್’ಪತಾಳೊಂದಿಗೆ ಮದುವೆಯಾಗುವಷ್ಟು ಹಣವೂ ಆತನ ಬಳಿ ಇರಲಿಲ್ಲ. ಹೀಗಾಗಿ ಇಬ್ಬರೂ ಮದುವೆಯಾಗದೆ ಜೊತೆಗಿರಲು ನಿರ್ಧರಿಸಿದ್ದಾರೆ. ಬಳಿಕ ದಿನಗೂಲಿ ಕೆಲಸ ಮಾಡಿ ಬಹಳ ಕಷ್ಟದಿಂದ ಜೀವನ ಸಾಗಿಸಿದ್ದಾರೆ. ಈ ವೇಳೆ ಇವರ ಕುಟುಂಬ ವೃದ್ಧಿಸಿದ್ದು, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಮಕ್ಕಳು ಕುಟುಂಬದ ಭಾಗವಾಗಿದ್ದಾರೆ.
ಬಿಡುವಿಲ್ಲದ ಜೀವನದಲ್ಲಿ ಇಬ್ಬರಿಗೂ ತಾವಿನ್ನೂ ಮದುವೆಯಾಗಿಲ್ಲ ಎಂಬ ವಿಚಾರವೇ ಮರೆತು ಹೋಗಿದೆ. ಇಂದು ಇವರ ಮಕ್ಕಳಿಗೂ ಮಕ್ಕಳಾಗಿವೆ, ಅಂದರೆ ಸುಕುಮಾರ್ ಹಾಗೂ ರಾಜ್’ಪತಾ ದೇವಿ ಇಬ್ಬರೂ ಅಜ್ಜ- ಅಜ್ಜಿ ಆಗಿದ್ದಾರೆ.
ತಮ್ಮ ಜೀವನದ ಬಗ್ಗೆ ಮಾತನಾಡಿರುವ ಸುಕುಮಾರ್ ‘ತನ್ನ ಹಾಗೂ ರಾಜ್’ಪತಾ ನಡುವಿನ ಸಂಬಂಧ ಅದೆಷ್ಟು ಗಟ್ಟಿಯಾಗಿದೆ ಎಂದರೆ ಯಾವತ್ತೂ ನಮ್ಮ ಜೀವನದ ಹಾಗೂ ಸಮಾಜದಲ್ಲೆದುರಾದ ಸಮಸ್ಯೆಗಳು ನೆನಪಿಲ್ಲ’ ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಇಬ್ಬರೂ ತಮ್ಮ ಪರಿವಾರದೊಂದಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಜ್’ಪತಾ ‘ಈಗ ನಮ್ಮ ಕುಟುಂಬ ಪೂರ್ಣವಾಗಿದೆ, ಜೀವನದ ಅಂತಿಮ ಹಂತದಲ್ಲಿದ್ದೇವೆ ಹೀಗಿರುವಾಗ ನಾವ್ಯಾಕೆ ಮದುವೆಯಾಗಿ ನಮ್ಮ ಪ್ರೀತಿಯನ್ನು ಸಮಾಜದೆದುರು ತೆರೆದಿಡಬಾರದು ಎಂದು ತಮ್ಮ ಮನದ ಮಾತನ್ನು’ ತಿಳಿಸಿದ್ದಾರೆ.
ಇದನ್ನು ಆಲಿಸಿದ ಮಕ್ಕಳು ತಾಯಿಯ ಇಚ್ಛೆಯನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದಾರೆ. ಮಕ್ಕಳೆಲ್ಲಾ ಸೇರಿ ತಂದೆ ಸುಕುಮಾರ್’ನನ್ನು ಜೀವನದ ಈ ಹಂತದಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಸಿ, ಅದ್ಧೂರಿಯಾಗಿ ತಂದೆ ತಾಯಿಗೆ ಮದುವೆ ಮಾಡಿಸಿದ್ದಾರೆ. ಈ ಮದುವೆಯಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರೂ ಪಾಲ್ಗೊಂಡಿದ್ದರು.
ಇನ್ನು ಇವರಿಬ್ಬರ ಕುರಿತಾಗಿ ಮಾತನಾಡಿದ ಗ್ರಾಮಸ್ಥರು ‘ಇಬ್ಬರೂ ನಿಜವಾದ ಪ್ರೇಮಿಗಳು. ಇವರು ಜೀವನ ನಡೆಸಿದ ರೀತಿ ನೋಡಿದರೆ ಇವರಿಬ್ಬರಿಗೆ ಮದುವೆಯಾಗಿಲ್ಲ ಎಂಬುವುದು ಗೊತ್ತೇ ಆಗುತ್ತಿರಲಿಲ್ಲ. ನಿಜಕ್ಕೂ ಇವರ ಪ್ರೀತಿ ಎಲ್ಲಾ ಪ್ರೇಮಿಗಳಿಗೆ ಆದರ್ಶವಾಗಿದೆ’ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕ್ರೀಡಾ ಮತ್ತು ಕ್ರೀಡಾಕೂಟದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಅಧಿಕೃತವಾಗಿ ಕರೆಯಲ್ಪಡುವ ರಾಜೀವ್ ಗಾಂಧಿ ಖೇಲ್ ರತ್ನ, ಇದು ಭಾರತದ ಗಣರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. 1984 ರಿಂದ 1989 ರವರೆಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ. ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ. ಸ್ವೀಕರಿಸುವವರನ್ನು (ಗಳು) ಸಚಿವಾಲಯವು ರಚಿಸಿದ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ…
ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.
ಗ್ಯಾಸ್ ಬುಕ್ ಮಾಡಿ 20 ದಿನವಾದರೂ ಗ್ಯಾಸ್ ಸಿಲಿಂಡರ್ಗಳು ಜನರಿಗೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಬೆಂಗಳೂರು: ಮಂಗಳೂರಿನ ಭಾರತ್ ಗ್ಯಾಸ್ ಪ್ಲಾಂಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಪಿ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ಜನ ಸಾಮಾನ್ಯರು ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಉದ್ಬವವಾಗಿದೆ. ಮಂಗಳೂರು ಭಾರತ್ ಗ್ಯಾಸ್ ಪ್ಲಾಂಟ್ನಿಂದ ನೆಲಮಂಗಲ ಸಮೀಪದ ಸೋಲೂರು ಪ್ಲಾಂಟ್‌ಗೆ ಲಿಕ್ವಿಡ್ ಗ್ಯಾಸ್ ಸರಬರಾಜಾಗುತ್ತದೆ. ಆದರೆ, ಪ್ಲಾಂಟ್‌ನಲ್ಲಿ ತಾಂತ್ರಿಕ ಸಮಸ್ಯೆ…
ಹಿಂದೂ ಸಂಪ್ರದಾಯದಲ್ಲಿ ಹಲವಾರು ಆಚರಣೆಗಳಿವೆ. ಹಲವು ಸಂಪ್ರದಾಯಗಳು ಇವೆ. ಇವುಗಳೆಲ್ಲವೂ ಹಲವಾರು ಕಾಲದಿಂದಲೂ ಬೆಳೆದುಕೊಂಡು ಬಂದಿವೆ. ಹಿಂದೂ ಧರ್ಮದವರು ಮಾಡುವ ಪ್ರತಿಯೊಂದು ಆಚರಣೆಗಳಿಗೂ ಸಹ ಅದರದ್ದೇ ಆದ ಒಂದು ಹಿನ್ನೆಲೆ ಇದೆ, ಹಾಗೆಯೆ ಇವುಗಳಲ್ಲಿ ಒಂದಾದ ಗಂಡಸರು ಕಟ್ಟುವ ಉಡುದಾರವು ಸಹ ಒಂದಾಗಿದೆ. ಈ ಉಡುದಾರಕಟ್ಟುವುದರ ಹಿಂದೆ ಹಲವು ಕಾರಣಗಳಿವೆ ಬನ್ನಿ ಆ ಕಾರಣಗಳೇನು ಎಂದು ತಿಳಿಯೋಣ… ಉಡದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಯಾಕೆಂದರೆ ಹಿಂದೂಗಳಲ್ಲಿ ಪ್ರತಿ ಪುರುಷರನೂ ಇದನ್ನು ಧರಿಸಬೇಕು. ಚಿಕ್ಕಮಕ್ಕಳಿಗೆ ಉಡದಾರ…
“ವಾಟ್ಸಪ್” (ಸಾಮಾಜಿಕ ಜಾಲತಾಣ)ವನ್ನು ಉಪಯೋಗಿಸದವರು ಯಾರಿದ್ದಾರೆ. ಈಗಂತೂ ಎಲ್ಲಾ ವಯೋಮಾನದವರು