ರಾಜಕೀಯ

ರಾಹುಲ್ ಗಾಂಧಿಯವರಿಗೆ ಯಾವಾಗ ಮದುವೆ ಎಂದು ಕೇಳಿದ್ದು ಯಾರು ಗೊತ್ತಾ…? ತಿಳಿಯಲು ಈ ಲೇಖನ ಓದಿ…

414

ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

ದೆಹಲಿಯಲ್ಲಿ ಗುರುವಾರದಂದು ನಡೆದ 112ನೇ ವಾರ್ಷಿಕ ಅಧಿವೇಶನ ಹಾಗೂ ಪಿಹೆಚ್‍ಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ ಬಾಕ್ಸರ್ ವಿಜೇಂದರ್ ಸಿಂಗ್ ಎರಡು ಪ್ರಶ್ನೆಗಳನ್ನು ಕೇಳಿದ್ರು. ಮೊದಲನೆಯ ಪ್ರಶ್ನೆ ರಾಹುಲ್ ಗಾಂಧಿ ಯಾವಾಗ ಮದುವೆಯಾಗುತ್ತೀರಿ ಎಂದಾದರೆ ಇನ್ನೊಂದು ಪ್ರಶ್ನೆ ನೀವು ಪ್ರಧಾನಿಯಾದ್ರೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡ್ತೀರಿ ಅಂತ ಕೇಳಿದ್ರು.

ಮೊದಲು ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಹಿಂದೇಟು ಹಾಕಿದ ರಾಹುಲ್, ಇದು ಹಳೇ ಪ್ರಶ್ನೆ. ಎಂದು ಉತ್ತರಿಸಲು ಹಿಂಜರಿದರು ಆಗಾಗ ಬರುತ್ತಲೇ ಇರುತ್ತೆ ಅಂದ್ರು. ಆದ್ರೆ ವಿಜೇಂದರ್ ಸಿಂಗ್ ಉತ್ತರಕ್ಕಾಗಿ ಒತ್ತಾಯಿಸಿದ್ರು. ಅಲ್ಲದೇ ನಾನು ಮತ್ತು ನನ್ನ ಪತ್ನಿ ನಿಮ್ಮ ಮದುವೆಯ ಬಗ್ಗೆ ಸದಾ ಮಾತನಾಡುತ್ತಿರುತ್ತೇವೆ ಅಂತೆಲ್ಲಾ ಹೇಳಿದ್ರು. ಈ ವೇಳೆ ರಾಹುಲ್ ಗೆ ಉತ್ತರಿಸದೆ ಬೇರೆ ದಾರಿಯೇ ಇರಲಿಲ್ಲ.

ಕೊನೆಗೆ `ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ಮದುವೆ ಯಾವಾಗ ಆಗಬೇಕೆಂದಿದಿಯೋ ಅಂದೇ ಆಗುತ್ತೆ’ ಅಂತ ಉತ್ತರಿಸಿದ್ರು.

ಕ್ರೀಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ತಾನು ಜಪಾನಿ ಮಾರ್ಷಲ್ ಆಟ್ರ್ಸ್ ಐಕಿಡೋನಲ್ಲಿ ಬ್ಲಾಕ್ ಬೆಲ್ಟ್ ಎಂದು ಹೇಳಿದ್ರು. ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿಲ್ಲ. ಸಾಮಾನ್ಯವಾಗಿ ದಿನಕ್ಕೆ ಒಂದು ಗಂಟೆ ಕ್ರೀಡೆಯಲ್ಲಿ ಪಾಲ್ಗೊಳ್ತೀನಿ. ಇತ್ತೀಚೆಗೆ ಕೆಲವು ತಿಂಗಳಿನಿಂದ ಸಾಧ್ಯವಾಗಿಲ್ಲ ಅಂದ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನಾಗುತ್ತೆ?

    ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ. ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು…

  • ಕ್ರೀಡೆ, ಸಾಧನೆ, ಸುದ್ದಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಮೃತಪಟ್ಟ 78 ವರ್ಷದ ವೃದ್ಧ.

    78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ…

  • ಸುದ್ದಿ

    ಪ್ರವಾಹ ಸಂಕಷ್ಟಕ್ಕೆ ಸಿಲುಕಿದ ಬಿಹಾರ: 31 ಮಂದಿ ಸಾವು, 40 ಲಕ್ಷ ಜನರ ಸ್ಥಳಾಂತರ….

    ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ. ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್‌ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು…

  • ಸುದ್ದಿ

    ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೊಂದು ಸಂತಸದ ಸುದ್ದಿ…!

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಐ ಲವ್ ಯು’ ಭರ್ಜರಿ ಯಶಸ್ಸು ಕಂಡಿದೆ. ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಹಿಂದೆ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಬ್ರಹ್ಮ, ನಂತರ ‘ಐ ಲವ್ ಯು’ ಯಶಸ್ಸು ಕಂಡಿದ್ದು, ಮುಂದಿನ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ, ಈ ಹೊಸ ಚಿತ್ರ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸಲಿದ್ದಾರೆ. ಹೈಬಜೆಟ್ ನಲ್ಲಿ…

  • ಸುದ್ದಿ

    ಪೇಪರ್ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಹೇಗಿದ್ದಾನೆ ಗೊತ್ತ…?

    ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…