ಸುದ್ದಿ

ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್, ಉಪಾಸನಾ ಕೊನಿಡೆಲಾ ಇನ್ನು ಅನೇಕ ಸ್ಟಾರ್​ಗಳು,..ಇದಕ್ಕೆ ಕಾರಣ.?ಇಲ್ಲಿದೆ ನೋಡಿ….

44

ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ  ‘ನಮ್ಮೊಳಗೆ ಬದಲಾವಣೆ’ (ಚೇಂಜ್ ವಿಥಿನ್) ಹೆಸರಿನಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ದರು. ಬಾಲಿವುಡ್ ನಟರೊಂದಿಗಿನ ಮೋದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು. ಮತ್ತು  ಎಲ್ಲರ  ಟ್ವೀಟ್​ಗಳಿಗೂ ಉತ್ತರಿಸಿರುವ ಮೋದಿಕೂಡ ಚಿತ್ರರಂಗದ ದಿಗ್ಗಜರೊಂದಿಗೆ ಶನಿವಾರದ ಸಂಜೆಯನ್ನು ಕಳೆದಿರುವುದುಖುಷಿ ನೀಡಿದೆ ಎಂದು ಉತ್ತರಿಸಿದ್ದಾರೆ.

ಆದರೆ, ಬಾಲಿವುಡ್ ಚಿತ್ರರಂಗವನ್ನು ಮಾತ್ರ ಭಾರತೀಯ ಚಿತ್ರರಂಗವೆಂದು ಪರಿಗಣಿಸುತ್ತಿರುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಭಾರತೀಯ ಚಿತ್ರರಂಗವೆಂದರೆ ಖಾನ್​ಗಳು ಮಾತ್ರವಲ್ಲ ಎಂದು ಜಗ್ಗೇಶ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರು ಇಂದು ಬಹುತೇಕ ಪರಭಾಷೆ ಸ್ಟಾರ್​ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ! ಪ್ರಧಾನಿ ನರೇಂದ್ರ ಮೋದಿ ಅವರೇ, ಉತ್ತರ ಭಾರತದ ನಟ-ನಟಿಯರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ. ಶಾರೂಖ್, ಅಮೀರ್ ಖಾನ್ ಮಾತ್ರ ಕಲಾರಂಗಕ್ಕೆ ಒಡೆಯರಲ್ಲ! ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮತ್ತು ಉಪಾಸನಾ  ಕೊನಿಡೆಲಾ  ಅವರು ಸಹ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರೀತಿಯ ನರೇಂದ್ರ ಮೋದಿಜೀ ನಾವು ದಕ್ಷಿಣ ಭಾರತದವರು. ನಿಮ್ಮನ್ನು ನಾವು ಪ್ರಧಾನಿಯನ್ನಾಗಿ ಪಡೆದಿದ್ದಕ್ಕಾಗಿ ಹೆಮ್ಮೆ ಪಡುತ್ತೇವೆ. ಪ್ರಮುಖ ಮತ್ತು ಸಾಂಸ್ಕೃತಿಕ ವ್ಯಕ್ತಿಗಳು ಬರೀ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವೇ. ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ನನ್ನ ಭಾವನೆಗಳನ್ನು ಮಾತ್ರ ನೋವಿನಿಂದ ವ್ಯಕಪಡಿಸುತ್ತಿದ್ದೇನೆ. ಹೀಗಾಗಿ ನೀವು ನನ್ನ ಅಭಿಪ್ರಾಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಕೂಡ ಮಾಡಿರುವ ನಟ ಜಗ್ಗೇಶ್, ‘ಇಂದು ಕರ್ನಾಟಕದಲ್ಲಿ ಹೆಚ್ಚು ಮನರಂಜನಾ ತೆರಿಗೆ ಸಂಗ್ರಹವಾಗುತ್ತಿರುವುದು ಕನ್ನಡದ ಚಿತ್ರರಂಗದಿಂದ, ನಟರಿಂದ ಎಂಬುದನ್ನು ನೆನಪಿಡಿ! ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ಈ ವಿಷಯ ಮನವರಿಕೆ ಮಾಡುವ ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ? ಎಂದು ತುಂಬಾ ದುಃಖವಾಯಿತು. ಖಾನ್​ಗಳು ಮಾತ್ರ ಚಿತ್ರರಂಗವಲ್ಲ’ ಎಂದು ಖಾರವಾಗಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.  ಕೇಂದ್ರ ಸರ್ಕಾರ ದಕ್ಷಿಣ ಭಾರತವನ್ನು ಮತ್ತು ಇಲ್ಲಿನ ಸ್ಯಾಂಡಲ್​ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಚಿತ್ರರಂಗವನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಇನ್ನೂ ಅನೇಕ ಸ್ಟಾರ್​ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ಖುಷ್ಬು ಕೂಡ ಮೋದಿ ಅವರ ನಡೆಯ ಬಗ್ಗೆ ಟ್ವಿಟ್ಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕುಮಾರಸ್ವಾಮಿಯವರು ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ರಾ..?ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇಕೆ..?

    ಲೋಕಸಭಾ ಚುನಾವಣೆಯವರೆಗೆ ತಣ್ಣಗಿದ್ದ ಆಪರೇಷನ್ ಕಮಲ ವಿಚಾರ ಮತದಾನ ಮುಗಿದ ಬಳಿಕ ತರೆಮರೆಯಲ್ಲಿ ಆರಂಭವಾಗಿದೆ ಎನ್ನಲಾಗಿದ್ದು, ಈಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದ್ದು ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾನುವಾರ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ಮೊದಲ ಜೆಡಿಎಸ್ ಶಾಸಕಾಂಗ ಸಭೆ ಇದಾಗಿದೆ….

  • ಮನರಂಜನೆ

    ಪ್ರಿಯಾಂಕ, ಕುರಿ ಪ್ರತಾಪ್ ಗೆ ಈಗೆ ಮಾಡಿದಕ್ಕೆ. ಪ್ರತಾಪ್ ಪತ್ನಿ ಪ್ರಿಯಾಂಕಾಗೆ ಹೇಳಿದ್ದೇನು ಗೊತ್ತಾ.

    ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ…

  • ಉಪಯುಕ್ತ ಮಾಹಿತಿ

    ಈರುಳ್ಳಿಯಲ್ಲಿದೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ರಾಮಬಾಣ…! ತಿಳಿಯಲು ಈ ಲೇಖನ ಓದಿ….

    ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು.

  • inspirational

    ದಿನ ಭವಿಷ್ಯ ಸೋಮವಾರ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆಯನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(12 ನವೆಂಬರ್, 2018) ಅನಿಯಂತ್ರಿತ ಕೋಪಸಾಮಾನ್ಯವಾಗಿ ಎಲ್ಲರನ್ನೂ, ಹಾಗೂ ವಿಶೇಷವಾಗಿ ಕೋಪಗೊಂಡವರನ್ನು ಹೆಚ್ಚು ಘಾಸಿಗೊಳಿಸುತ್ತದೆ….

  • ಉಪಯುಕ್ತ ಮಾಹಿತಿ

    ವರ ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಮಾತ್ರ ಹಾಕುತ್ತಾನೆ ಏಕೆ ಗೊತ್ತಾ.? ತಿಳಿಯಲು ಇದನ್ನು ಓದಿ..?

    ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.

  • ಸಿನಿಮಾ

    ಚಿತ್ರೀಕರಣದ ಸೆಟ್ ನಲ್ಲೇ ಕುರಿ ಬಲಿ ನೀಡಿದ್ರಾ ರಾಧಿಕಾ ಕುಮಾರಸ್ವಾಮಿ!ಕಾರಣ ಏನು ಗೊತ್ತಾ?

    ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು  ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ…