ಸಂಬಂಧ

ಮೋದಿ ವಿಚಾರದಲ್ಲಿ ಶುರುವಾದ ವಾದದಿಂದ,ಇವರ ಮದುವೆಯೇ ರದ್ದಾಯಿತು..!

285

ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.

ಈ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ವ್ಯಾಪಾರ ಮಾಡಿಕೊಂಡಿದ್ದ ಯುವಕನಿಗೆ ಸರ್ಕಾರಿ ಉದ್ಯೋಗದಲ್ಲಿದ್ದ ಓರ್ವ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಇವರು ತಮ್ಮ ಮದುವೆಯ ವಿಚಾರವಾಗಿ ಚರ್ಚಿಸಲು, ಇಬ್ಬರು ಒಂದು  ದೇವಸ್ಥಾನದ ಬಳಿ ಭೇಟಿಯಾಗಿದ್ದಾರೆ. ಇಲ್ಲಿ ಓದಿ:-ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ..!

ಅಲ್ಲಿ ಮದುವೆಗೆ ಆಗುವ ಖರ್ಚು ಮತ್ತು ಸಂಭಂದಿಕರು ಮತ್ತಿತ್ತರ ವಿಷಯ ಮಾತನಾಡುತ್ತಾ ಇದ್ದವರು, ಕೊನೆಗೆ ತಮ್ಮ ಮಾತು ಕತೆಯ ಭಾಗವಾಗಿ ಈಗಿನ ದೇಶದ ಆರ್ಥಿಕ ಪರಿಸ್ತಿತಿಗಳು, ಹಾಗೂ ಈಗ ನಡೆಯುತ್ತಿರುವ ಪ್ರಸ್ತುತ ವಿಷಯಗಳ ಬಗ್ಗೆಯು ಮಾತನಾಡಿದ್ದಾರೆ. ಇದು ಸಾಲದೆಮ್ಬಂತೆ ಪ್ರಧಾನಿ ಮೋದಿ ವಿಷಯವಾಗಿ ಚರ್ಚೆ ಮಾಡಿದ್ದಾರೆ.

 

ಈ ವಾದದ ಮಧ್ಯ ದೇಶದ ಆರ್ಥಿಕ ಸ್ಥಿತಿ ಹದಗೆಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಮದುವೆಯಾಗಬೇಕಿದ್ದ ಯುವಕ ವಾದಿಸಿದ್ದಾನೆ. ಇದಕ್ಕೆ ತಾನು ಕಡಿಮೆ ಏನಿಲ್ಲ ಯುವತಿ ನರೇಂದ್ರ ಮೋದಿ ಅವರನ್ನು ಬಿಟ್ಟುಕೊಡದೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವತ್ತಾ ಸಾಗಿದೆ ಎಂದು ಹೇಳಿದ್ದಾಳೆ. ಇದು ಹೀಗೆ ಮುಂದುವರೆದಿದ್ದು ಇಬ್ಬರು ನಡುವೆ ವಾಗ್ವಾದ ತಾರಕಕ್ಕೇರಿದ್ದು ಇಬ್ಬರು ಒಬ್ಬರನ್ನೊಬ್ಬರು ದೂಷಿಸಿಕೊಂಡು, ಮೋದಿ ವಿಷಯವಾಗಿ ಜಗಳವಾಡಿದ್ದಾರೆ.

ಮನೆಗೆ ಹೋದ ನಂತರ ಇದೇ ವಿಚಾರವಾಗಿ ಮನೆಯಲ್ಲಿ ಚರ್ಚೆಯಾಗಿ ತಾವು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಪೋಷಕರು ಎಷ್ಟೇ ಮನವೊಲಿಸಿದರು ಅದು ಸಾಧ್ಯವಾಗದೇ ಕೊನೆಗೆ ಮದುವೆಯನ್ನೇ ರದ್ದು ಮಾಡಿದ್ದಾರೆ ಎಂದು ವರದಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ