ಸುದ್ದಿ

ಮನೆಯಲ್ಲಿ ಶನಿದೇವನ ಸ್ಥಾಪನೆ ಯಾವ ಕಾರಣಕ್ಕೆ ಮಾಡಬಾರದು ಗೊತ್ತ..!

550

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ, ಮಂತ್ರ ಪಠಣ ಮಾಡುತ್ತಾರೆ.

ಪ್ರತಿಯೊಬ್ಬರ ದೇವರ ಮನೆಯಲ್ಲೂ ಅನೇಕ ದೇವರುಗಳ ಫೋಟೋಗಳನ್ನು ಇಡಲಾಗುತ್ತದೆ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವಂತಿಲ್ಲ. ಶನಿ ದೇವರ ಫೋಟೋವನ್ನು ಕೂಡ ಮನೆಗೆ ತರಬಾರದು.

ಹಿಂದೂ ಧರ್ಮದ ಪ್ರಕಾರ ಶನಿದೇವರ ಫೋಟೋ, ವಿಗ್ರಹವನ್ನು ಮನೆಯಲ್ಲಿ ಇಡಬಾರದು. ಮನೆಯಿಂದ ಹೊರಗೆ ದೇವಸ್ಥಾನದಲ್ಲಿ ಮಾತ್ರ ಶನಿದೇವನ ಮೂರ್ತಿ ಇರಬೇಕು. ಶನಿ ದೇವನಿಗೆ ಶಾಪವಿದೆ ಎನ್ನಲಾಗುತ್ತದೆ. ಶನಿದೇವ ಯಾರ ದೃಷ್ಟಿಗೆ ಬೀಳ್ತಾನೋ ಅವರು ನಾಶವಾಗ್ತಾರೆ ಎಂಬ ನಂಬಿಕೆಯಿದೆ.

ಶನಿ ದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಜನರು ಮನೆಯಲ್ಲಿ ಶನಿ ದೇವನ ಆರಾಧನೆ ಮಾಡುವುದಿಲ್ಲ. ಶನಿದೇವಸ್ಥಾನಕ್ಕೆ ಹೋದಲ್ಲಿ ಶನಿ ದೇವರ ಪಾದ ನೋಡಿ. ಎಂದೂ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. ಮನೆಯಲ್ಲಿ ಶನಿದೇವನ ಆರಾಧನೆ ಮಾಡಬಯಸುವವರು ಮನಸ್ಸಿನಲ್ಲಿಯೇ ಶನಿದೇವರನ್ನು ಪ್ರಾರ್ಥಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಇದು ಸಾಮಾನ್ಯದ ಸಾವಿನ ಕಥೆಯಲ್ಲ!ಗಂಡನಿಗೋಸ್ಕರ ಹೆಂಡತಿ!ಶಾಕ್ ಆಗ್ತೀರಾ…ಈ ಲೇಖನ ಓದಿ…

    ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.

  • ಸುದ್ದಿ

    ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ತೆರೆದ ಗಾಯಕಿ….!

    ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್‌ ಹೌಸ್ ಕಿಕ್ ಹೊಡೆದು ಬಾಟಲ್‌ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್‌ರಂತಹ ನಟರು ಹಾಗೂ ಹಲವು ಫೈಟರ್‌ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ…

  • ಆರೋಗ್ಯ

    ಅವಧಿ ಮುಗಿದ ಔಷಧಿ ಬಳಸುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ,,ಜನರ ಜೀವದಜೊತೆ ಚೆಲ್ಲಾಟ..!

    ಅವಧಿ ಮುಗಿದು ತಿಂಗಳು ಕಳೆದ ಗ್ಲೂಕೋಸ್ ಬಾಟೆಲ್ ಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ರೋಗಿಗಳ ಜೀವದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೊರೆಮೂಡಲಪಾಳ್ಯ ಗ್ರಾಮದ ವೆಂಕಟಮ್ಮ ಎಂಬ ವಯೋವೃದ್ದೆ, ವಿಪರೀತ ಸುಸ್ತು ಕಂಡ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆಯಲ್ಲಿಅವಧಿ ಮೀರಿದ ಗ್ಲೂಕೋಸ್ ಬಾಟೆಲ್ ಗಳನ್ನು ಇಲ್ಲಿನ ನಸ್೯ಗಳು ನೀಡಿದ್ದಾರೆ. ಇನ್ನೂ ಈ ಸಮಸ್ಯೆಯನ್ನು ಪ್ರಶ್ನಿಸಿದರೇ ಅವಧಿ ಮುಗಿದು ಮೂರು ತಿಂಗಳುವರೆಗೂ…

  • ಸುದ್ದಿ

    IMA ವಿರುದ್ಧ 11 ಸಾವಿರಕ್ಕು ಹೆಚ್ಚು ದಾಕಲಾದ ಕಂಪ್ಲೆಂಟ್…..!

    ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ. ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ…

  • ಸ್ಪೂರ್ತಿ

    ಮಸೀದಿಯಲ್ಲಿ ತಯಾರದ ಶಿವ ಭಂಡಾರಾದ ಅಡುಗೆ ……!

    ಇತ್ತೀಚಿಗೆ ಅಯೋಧ್ಯೆಯ ಸೀತಾರಾಮ ದೇವಸ್ಥಾನ, ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಬಾಂಧವ್ಯದ ಬೆಸುಗೆಯನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮೀರಥ್‌ನ ಜಾಮಾ ಮಸೀದಿಯಲ್ಲಿ ಶಿವ ಭಂಡಾರಾದ ಊಟದ ತಯಾರಿ ನಡೆಸಲು ಮುಂದಾಗುವ ಮೂಲಕ ಸಾಮರಸ್ಯವನ್ನು ಸಾರಿದೆ. ನಗರದಲ್ಲಿರುವ ಸೋಮನಾಥ ಶಿವ ದೇವಸ್ಥಾನದ 150ನೇ ಪ್ರತಿಷ್ಠಾಪನೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಶಿವ ಭಂಡಾರವನ್ನು ಏರ್ಪಡಿಸಿದ್ದು, ಈ ವೇಳೆ ಜಾಮಿಯಾ ಮಸೀದಿಯ ಮುಖ್ಯ ಖಾಝಿ ಜೇನ್-ಉಸ್-ಸಜಿದಿನ್ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ತರಕಾರಿ…

  • ಸುದ್ದಿ

    ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

    ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…