ಜ್ಯೋತಿಷ್ಯ

ಮನಿ ಪ್ಲಾಂಟ್’ನ್ನು ಮನೆಯಲ್ಲಿ,ಎಲ್ಲಿ ಬೆಳೆಸಿದ್ರೆ ಶುಭ,ಅಶುಭಗಳು ಆಗುತ್ತವೆ ಗೊತ್ತಾ..?

1723

ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ  ಹೆಸರು ಮನಿಪ್ಲಾಂಟ್‌. ನೋಡಿ ಇದರ ಹೆಸರೇ ಹಣಕ್ಕೆ ಸಂಬಂಧಿಸಿದ ಹಾಗಿದೆ. ನೀವು ಇದನ್ನು ಕೆಲವು ಜನರ ಮನೆಯಲ್ಲಿ ಹಾಗೂ ಕಚೇರಿಗಳಲ್ಲಿ  ಹಾಕಿರುವುದನ್ನು ನೋಡಿರುತ್ತೀರಿ.

ಆದರೆ ಇದಕ್ಕೆ ಸಂಬಂಧಿಸಿದ ಹಲವು ನಂಬಿಕೆಗಳನ್ನು ಕೂಡಾ ನೀವು ಕೇಳಿರುತ್ತೀರಿ. ಜ್ಯೋತಿಷ್ಯವನ್ನು ನಂಬುವವರಿಗೆ ಮನಿಪ್ಲಾಂಟ್ ನೆಟ್ಟರೆ ಸುಖ ಶಾಂತಿ ಮಾತ್ರವಲ್ಲ ಬದಲಾಗಿ ಮನೆಗೆ ಶ್ರೀಮಂತಿಕೆ ಕೂಡಾ ಬಂದು ಸೇರುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಎಲ್ಲಿ ಹೇಗೆ ಇಡಬೇಕು..?

ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ತಾರೆ. ಕೆಲವರು ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಮತ್ತೆ ಕೆಲವರು ಮನೆ ಹೊರಗಿಡ್ತಾರೆ. ಆದ್ರೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟರೂ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸರಿಯಾದ ದಿಕ್ಕು ಹಾಗೂ ವಾಸ್ತುವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ಮನಿ ಪ್ಲಾಂಟ್ ಇಡಬೇಕು.

ವಾಸ್ತುವಿನಲ್ಲಿ ನಂಬಿಕೆ ಇರುವವರು ಮನಿಪ್ಲಾಂಟ್ ಇರಿಸುವಾಗ ಕೆಲವು ವಿಷಯಗಳನ್ನು ಗಮಿಸಬೇಕು…

ಮನಿಪ್ಲಾಂಟ್‌ ಗಿಡವನ್ನು ವಾಸ್ತುಪ್ರಕಾರ ಸರಿಯಾದ ಜಾಗ ಸರಿಯಾದ ದಿಕ್ಕಿನಲ್ಲಿ ಇರಿಸಬೇಕು. ಇಲ್ಲದಿದ್ದರೆ ಪ್ರಭಾವ ಉಲ್ಟಾ ಆಗಿಬಿಡಬಹುದಂತೆ.

ಯಾವ ದಿಕ್ಕಿನಲ್ಲಿ…

ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿಡಬೇಕು. ಈಶಾನ್ಯ ದಿಕ್ಕಿನಲ್ಲಿ ಮನಿಪ್ಲಾಂಟ್ ಇಟ್ಟರೆ ಶುಭ ಫಲಗಳನ್ನು ಪಡೆಯಬಹುದು. ಧನದ ವೃದ್ಧಿಯಾಗುತ್ತದೆ. ದಿಕ್ಕು ಬದಲಾದಲ್ಲಿ ಮನೆಯ ಸದಸ್ಯರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.ಮನಿಪ್ಲಾಂಟ್ ಉತ್ತರ ಪೂರ್ವದಿಕ್ಕಿನಲ್ಲಿಡಬೇಡಿ. ಇದು ಬಹಳ ನಕರಾತ್ಮಕವಾದ ದಿಕ್ಕು ಎನ್ನಲಾಗುತ್ತಿದೆ. ಈ ದಿಕ್ಕನ್ನು ದೇವಗುರು ಬೃಹಸ್ಪತಿ ಪ್ರತಿನಿಧಿಸುತ್ತಾನೆ,

ಮನೆಯಿಂದ ಹೊರಗೆ ಎಸೆಯಬಾರದು…

ಮನಿ ಪ್ಲಾಂಟ್ ಸರಿಯಾಗಿ ಬೆಳೆಯದಿದ್ದರೆ ಅದನ್ನು ಹೊರಗೆ ಎಸೆಯುತ್ತಾರೆ. ಆದ್ರೆ ಹೀಗೆ ಮಾಡುವುದು ಅಶುಭ. ಮನಿಪ್ಲಾಂಟ್ ಸರಿಯಾಗಿ ಬೆಳವಣಿಗೆಯಾಗದಿದ್ದಲ್ಲಿ ದೊಡ್ಡ ಪಾಟ್ ನಲ್ಲಿ ಇದನ್ನು ಬೆಳೆಸಬೇಕು. ಮನೆಯಿಂದ ಹೊರಗೆ ಎಸೆಯಬಾರದು.

ಮನೆಯಿಂದ ಹೊರಗೆ ಮನಿ ಪ್ಲಾಂಟ್ ಇಡುವುದಕ್ಕಿಂತ ಮನೆಯೊಳಗೆ ಇಡುವುದು ಶುಭ. ಮಡಿಕೆ ಅಥವಾ ಬಾಟಲಿಯಲ್ಲಿಯೂ ಮನಿ ಪ್ಲಾಂಟ್ ಬೆಳೆಸಬಹುದು.ಹಾಳಾದ ಮನಿ ಪ್ಲಾಂಟ್ ಎಲೆಗಳನ್ನು ಎಸೆಯಬೇಕು. ಮನಿ ಪ್ಲಾಂಟ್ ಎಲೆಗಳು ಮನೆಯೊಳಗೆ ಉದುರಿ ಬೀಳುವುದು ಅಶುಭ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

    ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…

  • ರಾಜಕೀಯ

    ಇವಿಎಂನಲ್ಲಿದ್ದ ವೋಟ್ ಗಳನ್ನು ಡಿಲೀಟ್ ಮಾಡಿದ ಅಧಿಕಾರಿಗಳು…!

    ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕೊನೆ ಹಂತದ ಮತದಾನ ನಡೆದಿದ್ದು, ಈ ಸಂದರ್ಭದಲ್ಲಿ ಇವಿಎಂನಲ್ಲಿದ್ದ ಡಮ್ಮಿ ಮತಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಹೀಗೆ ಕರ್ತವ್ಯಲೋಪವೆಸಗಿದ 20 ಚುನಾವಣೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡುವ ಸಾಧ್ಯತೆ ಇದೆ. ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೆ ಮೊದಲು ಇವಿಎಂಗಳ ಪರೀಕ್ಷೆಗಾಗಿ ಡಮ್ಮಿ ವೋಟಿಂಗ್ ಮಾಡಲಾಗುತ್ತದೆ. ಮತದಾನ ಆರಂಭವಾದಾಗ ಡಮ್ಮಿ ವೋಟ್ ಗಳನ್ನು…

  • ಸುಳ್ಳು ಸುದ್ದಿ

    ಹೋಟಲ್ನಲ್ಲಿ ಊಟ ಆರ್ಡರ್ ಮಾಡೋದಕ್ಕೆ ಮುಂಚೆ, ನಿಮ್ಮ ಹೊಟ್ಟೆಯ ಸುತ್ತಳತೆ ನೀಡಲೇಬೇಕು..!

    ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್‌ನವರೇ ತಿಳಿಸಬೇಕು ಹೇಳಿದೆ.

  • ಸುದ್ದಿ

    “ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

    ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ದಿನಭವಿಷ್ಯ (27 ಫೆಬ್ರವರಿ, 2019) ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು ಬಾಕಿಯಿರುವಸಾಲಗಳನ್ನು ಸಂಗ್ರಹಿಸಬಹುದು ಅಥವಾ…

  • karnataka

    ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

    ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.