News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ನೀತಿ ಕಥೆ

ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ…

46

ವಕೀಲ ನಾಗನಗೌಡ ಪಾಟೀಲರು ಪ್ರಾಮಾಣಿಕರೆಂದೇ ಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು.  ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ ಕಟ್ಟಿಸಿದರು.

ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು. ಹಾಗೂ ಹೀಗೂ ಹಣ ಸಂಪಾದಿಸಿ 25ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಭದ್ರತಾ ಠೇವಣಿ ಇಟ್ಟರು. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಈ ಹಣದಿಂದ ತಮ್ಮ ಕನಸು ನನಸು ಮಾಡುವ ಭರವಸೆ ಅವರಿಗಿತ್ತು.  ಇಬ್ಬರೂ ಮಕ್ಕಳು ಅಪ್ಪನ ಇಚ್ಛೆಯಂತೆ ಬೆಳೆದರು. ಮಗಳು ಎಂಜಿನಿಯರಿಂಗ್ ಕಾಲೇಜು ಸೇರಿದರೆ, ಮಗ ಎಂಬಿಬಿಎಸ್ ಸೇರಿದ. ಪಾಟೀಲರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮೆಲ್ಲಾ ಆಸೆ ಈಡೇರಿದಂತೆ ಕಂಡಿತು ಅವರಿಗೆ.

ಅದೊಂದು ದಿನ ನಾನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದೆ. ಅದೇ ಬಸ್ಸಿನಲ್ಲಿ ಪಾಟೀಲರೂ ಹೊರಟಿದ್ದರು. ಪಕ್ಕದಲ್ಲಿಯೇ ಕುಳಿತಿದ್ದರಿಂದ ಪರಸ್ಪರ ಪರಿಚಯವಾಗಿ ಆತ್ಮೀಯರಾದೆವು. ಅಲ್ಲಿಂದ, ನಾವಿಬ್ಬರು ದೂರವಾಣಿ ಕರೆ ಮಾಡಿಕೊಳ್ಳುತ್ತಿದ್ದೆವು.  ಒಂದು ದಿನ ಪಾಟೀಲರಿಗೆ ಉಯಿಲು (ವಿಲ್) ಬರೆಯುವ ಮನಸ್ಸಾಯಿತು. ಆದ್ದರಿಂದ ಭೇಟಿಯಾಗಲು ನನ್ನ ಕಚೇರಿಗೆ ಬಂದರು. ಸುದೀರ್ಘ ಚರ್ಚೆ ಬಳಿಕ ಮಗನಿಗೆ ಮನೆ, ಮಗಳಿಗೆ ಸೈಟು ಹಾಗೂ ಹೆಂಡತಿಗೆ ಒಡವೆ ಬರೆದರು. ಅಲ್ಲಿಗೆ ಅವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಎರಡನೆಯ ಹಂತ ತಲುಪಿದ ನಿಟ್ಟುಸಿರು ಬಿಟ್ಟರು.

ಇದಾದ ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆಯೇ ರಾತ್ರಿ ಸುಮಾರು ಎರಡು ಗಂಟೆಗೆ ನನಗೆ ದೂರವಾಣಿ ಕರೆ ಮಾಡಿದ ಪಾಟೀಲರು ನಡುಗುತ್ತಿದ್ದರು. ಗಾಬರಿಯಿಂದ ನಾನು ವಿಷಯ ಏನು ಎಂದು ಕೇಳಿದೆ. ಮಗಳು ಯಾರೋ ಒಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾಳೆ ಎಂದು ಹೇಳಿದರು.  ‘ನಾಳೆನೇ ಯಾವುದೋ ದೇವಸ್ಥಾನದಲ್ಲಿ ಮದುವೆ ಮುಹೂರ್ತ ಇಟ್ಟುಕೊಂಡಿದ್ದಾಳಂತೆ. ಆನಂತರ ಅವನ ಜೊತೆ ವಿದೇಶಕ್ಕೆ ಹೋಗುತ್ತಾಳಂತೆ. ಹೀಗೆ ಅವಳು ನನಗೆ ಕರೆ ಮಾಡಿ ಹೇಳಿದ್ದಾಳೆ, ಏನು ಮಾಡಬೇಕು ಎಂದೇ ತಿಳಿಯುತ್ತಿಲ್ಲ’ ಎಂದು ಒಂದೇ ಉಸಿರಿನಲ್ಲಿ ಹೇಳಿದರು.

‘ಮದುವೆಗೆ ನಮ್ಮನ್ನು ಕರೆದಿದ್ದಾಳೆ. ಹುಡುಗ ಯಾರು, ಯಾವ ಕುಲ, ಅವನ ಕುಟುಂಬದ ಹಿನ್ನೆಲೆ ಏನು, ಅವನ ಗುಣ ಹೇಗಿದೆಯೋ ಏನೂ ಗೊತ್ತಿಲ್ಲ. ಮಗಳಿಗೆ ಯಾರಾದರೂ ಮೋಸ ಮಾಡಿದರೆ ಏನು ಮಾಡುವುದು, ಅವಳಿಗೆ ಏನೂ ಗೊತ್ತಾಗುವುದಿಲ್ಲ’ ಎಂದ ಅವರು ಪೊಲೀಸರ ಮೂಲಕ ಮದುವೆಯನ್ನು ಹೇಗಾದರೂ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.   ಮಕ್ಕಳ ವಿಷಯ ಬಂದಾಗ, ಅದರಲ್ಲೂ ಹೆಣ್ಣುಮಕ್ಕಳ ವಿಷಯದಲ್ಲಿ ಎಡವಟ್ಟು ಆಗುತ್ತಿರುವಾಗ ಎಂಥವರೂ ನಡುಗಿ ಹೋಗುತ್ತಾರೆ, ಏನು ಮಾಡಬೇಕೆಂದೂ ತೋಚುವುದಿಲ್ಲ, ತಲೆಯೇ ಓಡುವುದಿಲ್ಲ ಎನ್ನುತ್ತಾರಲ್ಲ, ಇದು ಹಾಗೆಯೇ. ಪಾಟೀಲರೇ ಖುದ್ದು ವಕೀಲರಾಗಿದ್ದರೂ ಅವರಿಗೆ ಏನು ಮಾಡಬೇಕೆಂದು ತೋಚದೆ ನಡುರಾತ್ರಿ ನನ್ನ ಸಲಹೆ ಕೇಳಿದ್ದರು. ನಾನು ಎಲ್ಲವನ್ನೂ ಆಲಿಸಿ ಮರುದಿನ ಬೆಳಿಗ್ಗೆ ಬರುವಂತೆ ಹೇಳಿ ಸಮಾಧಾನ ಪಡಿಸಿದೆ.

ಮದುವೆಯನ್ನು ತಡೆಯುವ ಸಂಬಂಧ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವರು ನಿರ್ಧರಿಸಿದ್ದರು. ರಾತ್ರಿಪೂರ್ತಿ ಕುಳಿತು ಖುದ್ದಾಗಿ ಅರ್ಜಿ ತಯಾರಿಸಿ ಬೆಳ್ಳಂಬೆಳಗ್ಗೆ ನನ್ನ ಕಚೇರಿಗೆ ಬಂದರು. ಆ ಪ್ರಕರಣದಲ್ಲಿ ವಕಾಲತ್ತು ವಹಿಸುವಂತೆ ನನ್ನನ್ನು ಕೇಳಿಕೊಂಡರು. ಬಹುತೇಕ ಅರ್ಜಿ ಅವರೇ ತಯಾರು ಮಾಡಿದ್ದರು. ಮದುವೆಯ ಸ್ಥಳ ಮತ್ತು ವರನ ವಿವರಗಳನ್ನು ತುಂಬುವುದು ಮಾತ್ರ ನನ್ನ ಕೆಲಸವಾಗಿತ್ತು.

ನಾನು ಕೇಸು ನಡೆಸುವ ಸಂಬಂಧ ಪಾಟೀಲರ ಜೊತೆ ಚರ್ಚಸುತ್ತಿರುವಾಗಲೇ ಅವರ ಹೆಂಡತಿ ನನಗೆ ದೂರವಾಣಿ ಕರೆ ಮಾಡಿದರು. ತುಂಬಾ ಆತಂಕದಲ್ಲಿದ್ದ ಅವರು, ಮಗಳ ವಿರುದ್ಧ ಕೋರ್ಟ್ನಲ್ಲಿ ಕೇಸು ಹಾಕದಂತೆ ಕೋರಿಕೊಂಡರು! ‘ದಯವಿಟ್ಟು ಈ ವಿಷಯದಲ್ಲಿ ಮುಂದುವರಿ ಯಬೇಡಿ. ನನ್ನ ಯಜಮಾನರು ನನ್ನ ಮಾತು ಕೇಳುತ್ತಿಲ್ಲ. ನೀವೇ ಅವರಿಗೆ ಏನಾದರೂ ಹೇಳಿ’ ಎಂದರು.

‘ಮದುವೆಯ ಎಲ್ಲಾ ಸಿದ್ಧತೆಗಳನ್ನು ಮಗಳೇ ಮಾಡಿಕೊಂಡಿದ್ದಾಳೆ. ಹುಡುಗ ತುಂಬಾ ಒಳ್ಳೆಯವ ಎಂದಿದ್ದಾಳೆ. ಮದುವೆಯಾದ ಮರು ದಿನವೇ ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಲಿದ್ದಾರಂತೆ. ಅವರ ಭವಿಷ್ಯ ಅವರೇ ನಿರ್ಧರಿಸಿ ಕೊಂಡಿದ್ದಾರೆ. ನಾವು ಅಡ್ಡಿ ಮಾಡುವುದು ಸರಿಯಲ್ಲ. ಹೀಗೆ ಕೇಸು ಹಾಕಿದರೆ ಎಲ್ಲರ ಮಾನ ಹರಾಜು ಆಗುತ್ತದೆ.

ನಾನು ಹೇಳುವಷ್ಟು ಹೇಳಿ ನೋಡಿದೆ. ಆದರೆ ಅವಳು ಕೇಳುತ್ತಿಲ್ಲ. ಈ ಸಮಯದಲ್ಲಿ ಕೇಸು-ಗೀಸು ಅಂತೆಲ್ಲಾ ಹೋದರೆ ಚೆನ್ನಾಗಿ ಇರಲ್ಲ. ಅವಳ ಹಣೆಬರಹದಲ್ಲಿ ಇದ್ದದ್ದು ಆಗಲಿ’ ಎಂದು ಗದ್ಗದಿತರಾಗಿ ಹೇಳಿದರು. ಪಾಟೀಲರ ಕೋಪವನ್ನು ತಣಿಸುವಂತೆ ನನ್ನನ್ನು ಕೋರಿಕೊಂಡರು.

ಅವರು ಹೇಳಿದ್ದು ನನಗೂ ಸರಿ ಎನ್ನಿಸಿತ್ತು. ಆದರೆ ಪಾಟೀಲರಲ್ಲಿ ತುಂಬಿದ್ದ ಆಕ್ರೋಶ, ನೋವು ಶಮನ ಮಾಡುವುದು ನನಗೆ ಅಷ್ಟು ಸುಲಭ ಆಗಿರಲಿಲ್ಲ. ಆದರೂ ನನ್ನ ಪ್ರಯತ್ನ ಬಿಡಲಿಲ್ಲ. ಎಲ್ಲಾ ರೀತಿಯಲ್ಲೂ ಹೇಳಿ ನೋಡಿದೆ. ಅವರ ಕೋಪ ಒಂದು ಹಂತಕ್ಕೆ ತಣ್ಣಗಾಗುತ್ತ ಬಂದ ಮೇಲೆ ಸಮೀಪದ ಹೋಟೆಲ್ಗೆ ಕರೆದುಕೊಂಡು ಹೋಗಿ ಒಳ್ಳೆ ದೋಸೆ ತಿನ್ನಿಸಿದೆ.

ಅಷ್ಟರಲ್ಲಿ ಅವರು ತಮ್ಮನ್ನು ತಾವು ಸಮಾಧಾನ ಮಾಡಿಕೊಂಡು, ನಡುರಾತ್ರಿ ಹಾಗೂ ಬೆಳ್ಳಂಬೆಳಗ್ಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೋರಿದರು. ನಂತರ, ‘ಹಾಳಾಗಿ ಹೋಗಲಿ ಬಿಡಿ. ಮದುವೆ ನಡೆದೇ ಹೋಗಲಿ. ಆದರೆ ಯಾವುದೇ ಕಾರಣಕ್ಕೂ ನಾವ್ಯಾರೂ ಅವಳ ಮದುವೆಗೆ ಹೋಗುವುದಿಲ್ಲ. ಅವಳ ಮುಖವನ್ನೂ ನೋಡುವುದಿಲ್ಲ. ನಮಗೂ ಅವಳಿಗೂ ಸಂಬಂಧವೇ ಇಲ್ಲ’ ಎಂದು ಹೇಳಿ ಹೋದರು. ಅಲ್ಲಿಗೆ ಅವರಿಗೆ ತಾವು ಮಗಳ ಬಗ್ಗೆ ಕಂಡಿದ್ದ ಕನಸು ಕಮರಿದ ಅನುಭವ ಆಯಿತು.

ಕೆಲವು ದಿನಗಳ ನಂತರ ಅವರು ನನ್ನನ್ನು ಮತ್ತೆ ಭೇಟಿಯಾದರು. ಆದರೆ ಮಗಳ ಬಗ್ಗೆ ಒಂದು ಮಾತೂ ಆಡಲಿಲ್ಲ. ನಾನೂ ಕೇಳಲೂ ಹೋಗಲಿಲ್ಲ. ಅವರೀಗ ಎಂಬಿಬಿಎಸ್ ಓದುತ್ತಿದ್ದ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಹೀಗೆ ಕೆಲ ವರ್ಷಗಳು ಕಳೆದವು. ಒಂದು ದಿನ ನನಗೆ ದೂರವಾಣಿ ಕರೆ ಮಾಡಿದ ಪಾಟೀಲರು ತುರ್ತಾಗಿ ಭೇಟಿಯಾಗಬೇಕು ಎಂದರು. ಅವರ ಸಮಸ್ಯೆ ಈಗ ಮಗನ ವಿಚಾರದ್ದಾಗಿತ್ತು. ಬೇರೆ ಧರ್ಮದ ಹುಡುಗಿಯನ್ನು ಆತ ಪ್ರೀತಿಸುತ್ತಿರುವ ವಿಷಯ ಕೇಳಿದ್ದ ಅವರು ಕುಸಿದು ಹೋಗಿದ್ದರು. ಆದರೆ ಮಗನ ಮೇಲಿದ್ದ ಮಮತೆ ಮಾತ್ರ ಕಮ್ಮಿಯಾಗಿರಲಿಲ್ಲ.

‘ನನ್ನ ಮಗ ಎಂಬಿಬಿಎಸ್ ಪೂರ್ತಿಗೊಳಿಸಿದ್ದಾನೆ. ಅವನು ಪ್ರೀತಿಸುತ್ತಿರುವ ಹುಡುಗಿ ಬುದ್ಧಿವಂತೆಯಂತೆ. ಎಂ.ಎಸ್.ನಲ್ಲಿ ಮೆರಿಟ್ ಸೀಟು ಪಡೆದುಕೊಂಡಿದ್ದಾಳಂತೆ. ಮಗನಿಗೆ ಕಡಿಮೆ ಅಂಕ ಇರುವ ಕಾರಣ ಮೆರಿಟ್ ಸೀಟು ಸಿಗುವುದಿಲ್ಲ. ಈಗಾಗಲೇ ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಸೀಟನ್ನು ರಿಸರ್ವ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾನೆ.

ಒಳ್ಳೆಯ ಹುಡುಗ. ದಯವಿಟ್ಟು ನಿಮ್ಮ ಶಿಫಾರಸು ಬಳಸಿ ಒಂದು ಸೀಟು ಕೊಡಿಸಿ’ ಎಂದರು. ಮಗಳಿಂದ ಈಗಾಗಲೇ ಅವರು ಪಟ್ಟಿರುವ ನೋವಿನ ಅರಿವು ನನಗಿತ್ತು. ಆದ್ದರಿಂದ ಮಗನ ವಿಷಯದಲ್ಲಿ ಪುನಃ ಅವರಿಗೆ ತೊಂದರೆ ಆಗಬಾರದು ಎಂದು ‘ನನ್ನ ಕೈಲಾದಷ್ಟು ಪ್ರಯತ್ನ ಮಾಡುವೆ’ ಅಂದೆ. ಅತ್ಯಧಿಕ ಶುಲ್ಕ ಇರುವ ಆ ಕಾಲೇಜಿನಲ್ಲಿ ನನ್ನ ಶಿಫಾರಸು ಬಳಸಿ 25ಲಕ್ಷ ರೂಪಾಯಿಯಲ್ಲೇ ಸೀಟು ಕೊಡಿಸಿದೆ. ಪಾಟೀಲರು ಬಹಳ ಖುಷಿಯಾದರು. ಬ್ಯಾಂಕಿನಲ್ಲಿ ಇಟ್ಟಿದ್ದ ಅಷ್ಟೂ ಹಣವನ್ನು ಮಗನ ಕಾಲೇಜಿನ ಶುಲ್ಕವಾಗಿ ನೀಡಿದರು. ಮಗ ಮುಂದೆ ವೈದ್ಯನಾಗಿ ಇದಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿ ತಮ್ಮನ್ನು ಸಾಕುವ ಭರವಸೆ ಅವರಿಗಿತ್ತು.

ಈ ಮಧ್ಯೆ ಪಾಟೀಲರ ಹೆಂಡತಿ ತೀರಿ ಹೋದರು. ಮಗನನ್ನು ಅದೇ ಹುಡುಗಿ ಜೊತೆ ಪಾಟೀಲರು ಮದುವೆ ಮಾಡಿಸಿದರು. ಮಗ-ಸೊಸೆ ಇಬ್ಬರೂ ಓದು ಮುಗಿಸಿದರು. ಈಗ ದಂಪತಿಗೆ ನರ್ಸಿಂಗ್ ಹೋಂ ಮಾಡುವ ಆಸೆಯಾಯಿತು. ಪಾಟೀಲರ ಬಳಿ ಈಗ ಇದ್ದ ಏಕೈಕ ಆಸ್ತಿ ಎಂದರೆ ಬಂಗಲೆ. ಅದನ್ನೇ ನರ್ಸಿಂಗ್ ಹೋಂ ಮಾಡುವುದಾಗಿ ಮಗ ಅಪ್ಪನ ಬಳಿ ಕೇಳಿದ. ಹೆಂಡತಿ-ಮಗಳು ಇಬ್ಬರಿಂದಲೂ ದೂರವಾಗಿದ್ದ ಪಾಟೀಲರಿಗೆ ಈಗ ಏಕೈಕ ಆಧಾರ ಎಂದರೆ ಈ ಮಗನೇ. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಮಗನ ಬೇಡಿಕೆಗೆ ಇಲ್ಲ ಎನ್ನಲಾಗದೇ ಮನೆಯನ್ನು ನರ್ಸಿಂಗ್ ಹೋಂ ಮಾಡಲು ಒಪ್ಪಿಗೆ ಸೂಚಿಸಿದರು.

ನರ್ಸಿಂಗ್ ಹೋಂ ಉದ್ಘಾಟನೆ ಭರ್ಜರಿಯಾಗಿ ನಡೆಯಿತು. ಇದಕ್ಕಾಗಿ ಪಾಟೀಲರು ಕೆಲವು ಕಡೆ ಸಾಲ ಕೂಡ ಮಾಡಿದರು. ಈ ಮೊದಲು ಬರೆದಿದ್ದ ಉಯಿಲು ಪತ್ರವನ್ನು ಬದಲಾಯಿಸಿದ ಅವರು, ಎಲ್ಲಾ ಆಸ್ತಿಯನ್ನು ಮಗನ ಹೆಸರಿಗೆ ಬರೆದರು. ಎಲ್ಲಾ ಆಸ್ತಿ ತನ್ನ ಕೈಸೇರುತ್ತಲೇ ಮಗನ ವರಸೆ ಬದಲಾಯಿತು. ‘ಡ್ಯಾಡಿ ನೀವು ಒಬ್ಬರೇ ಇದ್ದೀರಲ್ವಾ? ಔಟ್ಹೌಸ್ನಲ್ಲಿ ಉಳಿದುಕೊಳ್ಳಿ’ ಎಂದ. ಪಾಟೀಲರಿಗೆ ಆಕಾಶವೇ ಕಳಚಿಬಿದ್ದಂಥ ಅನುಭವ. ಆದರೆ ಮಗ-ಸೊಸೆಯ ಮಾತಿಗೆ ಎದುರಾಡುವ ಪರಿಸ್ಥಿತಿ ಅವರದ್ದಾಗಿರಲಿಲ್ಲ. ಔಟ್ಹೌಸ್ನಲ್ಲಿ ಒಂಟಿಯಾಗಿ ವಾಸಮಾಡತೊಡಗಿದರು. ಅಲ್ಲಿಗೆ ತಮ್ಮ ಮಗನ ಭವಿಷ್ಯದ ಬಗ್ಗೆ ತಾವು ಕಂಡ ಕನಸೂ ನುಚ್ಚುನೂರಾಗುತ್ತಿರುವುದು ಅನುಭವಕ್ಕೆ ಬಂತು. ಆದರೆ ಹಾಗೂ ಹೀಗೂ ಸುಧಾರಿಸಿಕೊಂಡರು.

ಇತ್ತ, ಮಗ-ಸೊಸೆಯ ದಾಂಪತ್ಯದಲ್ಲಿ ಬಿರುಕು ಶುರುವಾಯಿತು. ನರ್ಸಿಂಗ್ ಹೋಂನತ್ತ ಗಮನ ಕಡಿಮೆಯಾಯ್ತು. ದಾಂಪತ್ಯ ಜೀವನ ವಿಚ್ಛೇದನ ದಲ್ಲಿ ಕೊನೆಯಾಯ್ತು. ದುರದೃಷ್ಟಕ್ಕೆ ಈ ಪ್ರಕರಣಕ್ಕೂ ನಾನೇ ವಕೀಲನಾಗಬೇಕಾಯಿತು. ನರ್ಸಿಂಗ್ ಹೋಂಗೆ ಪಡೆದುಕೊಂಡ ಸಾಲದ ಬಡ್ಡಿ ಏರುತ್ತಾ ಬಂತು. ಹೆಂಡತಿಗೆ ವಿಚ್ಛೇದನ ಕೊಟ್ಟ ಮೇಲೆ ಮಗ ದುರಭ್ಯಾಸಗಳಿಗೆ ದಾಸನಾದ. ನರ್ಸಿಂಗ್ ಹೋಂಗೆ ಬರುವುದನ್ನೇ ನಿಲ್ಲಿಸಿದ. ನರ್ಸಿಂಗ್ ಹೋಂ ಮುಚ್ಚಿತು. ಮನೆ ಹರಾಜಿಗೆ ಬಂತು. ಬ್ಯಾಂಕಿಗೆ ಒತ್ತೆ ಇಟ್ಟಿದ್ದ ಔಟ್ಹೌಸ್ ಕೂಡ ಬ್ಯಾಂಕ್ ಪಾಲಾಯ್ತು.

ಮುದ್ದಿನ ಮಗಳು ಮಾತುಕೇಳದೇ ದೂರವಾದಳು. ಪ್ರೀತಿಯ ಹೆಂಡತಿ ನಡುವಿನಲ್ಲಿಯೇ ಒಂಟಿಮಾಡಿ ಇಹಲೋಹ ತ್ಯಜಿಸಿದರು, ಇಳಿವಯಸ್ಸಿಗೆ ಆಸರೆಯಾಗಬೇಕಿದ್ದ ಮಗ ಇಲ್ಲ ಸಲ್ಲದ ಚಟ ಅಂಟಿಸಿಕೊಂಡು ದೂರವಾದ. ನೆಲೆಯಾಗಿದ್ದ ಒಂದೇ ಸೂರೂ ಕೈತಪ್ಪಿತು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿಗೆ ಯೋಚಿಸಿ, ತಮ್ಮ ಹೊಟ್ಟೆಬಟ್ಟೆ ಕಟ್ಟಿ ಹಣ ಕೂಡಿಸಿಟ್ಟ ಪಾಟೀಲರಿಗೆ ಎಲ್ಲವನ್ನೂ-ಎಲ್ಲರನ್ನೂ ಕಳೆದುಕೊಂಡು ದಿಕ್ಕೇ ತೋಚದಾಯಿತು.

ಕೊನೆಗೆ ಅವರ ಕೈಹಿಡಿದಿದ್ದು ವಕೀಲಿ ವೃತ್ತಿ ಮಾತ್ರ. ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ವಕೀಲಿ ವೃತ್ತಿಯಿಂದ ದೂರ ಸರಿದಿದ್ದ ಪಾಟೀಲರು ಪುನಃ ವಕೀಲಿ ವೃತ್ತಿ ಆರಂಭಿಸಿದ್ದಾರೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಈಗಲೂ ಕೋರ್ಟ್ಗೆ ಹಾಜರಾಗುತ್ತಾರೆ. ಐಷಾರಾಮಿ ಕಾರಿನಲ್ಲಿ ಠಾಕುಠೀಕಾಗಿ ಬರಬೇಕಿದ್ದ ಪಾಟೀಲರು ಅದೇ ಹಳೆಯ ಕೋಟನ್ನು ಹಾಕಿಕೊಂಡು ಬಸ್ಸಿನಲ್ಲಿ ಬಂದು ಇಳಿಯುವುದನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ.

ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಕೂಡಿಟ್ಟರೆ, ದಯವಿಟ್ಟು ಅದನ್ನು ನಿಮ್ಮ ಮಕ್ಕಳೂ ಸೇರಿದಂತೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಒಂದಿಷ್ಟು ಹಣ ನಿಮ್ಮ ಭವಿಷ್ಯಕ್ಕೂ ಕೂಡಿಟ್ಟುಕೊಳ್ಳಿ. ಮಕ್ಕಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯಲ್ಲ. ಇಲ್ಲದಿದ್ದರೆ ನಿಮ್ಮ ಪಾಡೂ ನನ್ನ ಹಾಗೆ ಆಗಬಹುದು’ ಎಂದು ಪದೇಪದೇ ಹೇಳುತ್ತಿರುವ ಪಾಟೀಲರ ಮಾತಿನಲ್ಲಿ ಎಷ್ಟು ಸತ್ಯಾಂಶ ಇದೆಯಲ್ಲವೇ…?

courtesy: Chethan Ram

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಟೋಮೊಬೈಲ್ಸ್

    ಬೈಕ್‌ಗಳ ಮಹಾರಾಜ ರಾಯಲ್ ಎನ್‌ಫೀಲ್ಡ್’ಗೆ ಗೇಲಿ ಮಾಡಿ ಟಾಂಗ್ ಕೊಟ್ಟ, ಬಜಾಜ್ ಡೊಮಿನರ್!

    ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.

  • ಸೌಂದರ್ಯ

    ಈಕೆಯ ವಯಸ್ಸು ನೀವ್ ಅನ್ಕೊಂಡಿರ ಹಾಗೆ ಇಲ್ಲ!ಶಾಕ್ ಆಗ್ತೀರಾ..ಈ ಲೇಖನಿ ಓದಿ…

    ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.

  • ಸುದ್ದಿ

    ಹುಲ್ಲು ಮೆಯಾದ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿದ್ದೇನು? ಅದನ್ನು ನೋಡಿ ಬೆರಗಾದ ವೈದ್ಯರು…

    ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ…

  • ಸುದ್ದಿ

    ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಮಹಿಳೆ ಒಬ್ಬಳು ಟ್ರಂಪ್ ವಿರುದ್ಧ ಆರೋಪ ಮಾಡಿದ್ದಾಳೆ…

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.ಮ್ಯಾನ್‍ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್‍ಹಟನ್‍ನ ಬರ್ಗ್‍ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗ ಟ್ರಂಪ್‍ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ…

  • ಜ್ಯೋತಿಷ್ಯ

    ಶ್ರೀ ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿನಿಮ್ಮ ಸಂಜೆ…

  • ಉಪಯುಕ್ತ ಮಾಹಿತಿ, ಜೀವನಶೈಲಿ

    ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ… ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.