ಉಪಯುಕ್ತ ಮಾಹಿತಿ, ವಿಧ್ಯಾಭ್ಯಾಸ

ಮಕ್ಕಳು ಓದಿದ್ದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೀಗೆ ಮಾಡಿದರೆ ಚೆನ್ನಾಗಿ ನೆನಪಿರುತ್ತದೆ..!ತಿಳಿಯಲು ಇದನ್ನು ಓದಿ ..

359

ನಿಮ್ಮ ಮಕ್ಕಳು ಕೂಡ ವಸ್ತು ಅಥವಾ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿದ್ದಾರೆಯೇ? ಹೌದು ಎಂದಾದರೆ ಅದರ ಬಗ್ಗೆ ಟೆನ್ಶನ್‌ ಮಾಡಬೇಡಿ. ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ಯಾವುದೆ ವಿಷಯವನ್ನು ಅರ್ಥಮಾಡಿಕೊಳ್ಳಲು ಅಥವಾ ಅದನ್ನು ನೆನಪು ಮಾಡಿಕೊಳ್ಳಲು ಕಷ್ಟವಾದರೆ, ಅವರಿಗೆ ಅದನ್ನು ಸ್ವಲ್ಪ ಜೋರಾಗಿ ಓದಲು ಹೇಳಿ.

ಹೆಚ್ಚಾಗಿ ಮಕ್ಕಳ ಮನಸ್ಸಿನಲ್ಲಿ ಎಕ್ಸಾಮ್‌ ಬಗ್ಗೆ ಹೆಚ್ಚು ಪ್ರೆಶರ್‌ ಇರುತ್ತದೆ. ಈ ಭಯದಿಂದಾಗಿ ಮಕ್ಕಳು ಎಲ್ಲಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಆದರೆ ಅದೆ ವಿಷಯವನ್ನು ಅವರು ಸ್ವಲ್ಪ ಜೋರಾಗಿ ಓದಿದರೆ ಅವರ ಕಂಠವು ಸ್ಪಷ್ಟವಾಗುತ್ತದೆ ಜೊತೆಗೆ ಅವರಿಗೆ ವಿಷಯಗಳು ನೆನಪಿನಲ್ಲಿ ಉಳಿಯಲು ಸಹ ಸಹಾಯಕವಾಗುತ್ತದೆ.

ಈ ಸಂಶೋಧನೆಯಲ್ಲಿ ತಿಳಿಸಿದಂತೆ ಮಾತನಾಡುವುದು ಹಾಗೂ ಆ ಮಾತನ್ನು ತಾನಾಗಿ ಕೇಳುವುದು ಯಾವುದೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಪ್ರೊಡಕ್ಷನ್‌ ಇಫೆಕ್ಟ್‌‌ ಎಂದು ಕರೆಯಲಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಮುಖ್ಯವಾಗಿದೆ ಎಂದು ಹೇಳಲಾಗುತ್ತದೆ.

ಈ ಪ್ರೊಡಕ್ಷನ್‌ ಇಫೆಕ್ಟ್‌ನ ಪರಿಣಾಮ ಪ್ರಭಾವಶಾಲಿಯಾಗಿರುತ್ತದೆ. ಯಾಕೆಂದರೆ ತಾವು ಹೇಳಿದ ಶಬ್ಧಗಳನ್ನು ಮತ್ತೆ ಕೇಳಿದಾಗ ಮೆದುಳು ಇನ್ನಷ್ಟು ಚುರುಕಾಗುತ್ತದೆ. ನಂತರ ಅದು ಮೆದುಳಿನಲ್ಲಿ ಹೇಗಾದರು ಫೀಡ್‌ ಆಗುತ್ತದೆ.

ಕೆನಡಾ ಯುನಿವರ್ಸಿಟಿ ಆಫ್‌ ವಾಟರಲುನ ಪ್ರೊಫೇಸರ್‌ ಕೊಲಿನ್‌ ಎಂ ಮೆಕ್‌ಲಾಯ್ಡ್‌ ಹೇಳುವಂತೆ ನಾವು ಯಾವುದೆ ಶಬ್ಧದಲ್ಲಿ ಕ್ರಿಯೆಯನ್ನು ಸೇರಿಸಿದರೆ ಅದನ್ನು ನಮ್ಮ ಮೆದುಳು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇದರಿಂದ ಆ ಶಬ್ಧಗಳು ತುಂಬಾ ಸಮಯದವರೆಗೂ ನೆನಪಿನಲ್ಲಿರುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ