ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕ್ರಿಕೆಟ್ ನಮ್ಮ ಭಾರತೀಯ ಆಟವಲ್ಲದಿದ್ದರು, ಇಡೀ ಭಾರತೀಯರ ಮನ ಮನದಲ್ಲೂ ಮನೆ ಮಾಡಿದೆ. ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ ಸ್ತಬ್ಧಗೊಳ್ಳುತ್ತದೆ. ಭಾರತವೇಕೆ ಈಡಿ ಕ್ರಿಕೆಟ್ ಜಗತ್ತು ಕಣ್ಣುರೆಪ್ಪೆ ಮುಚ್ಚದೇ ಟಿವಿ ಮುಂದೆಯೇ ಕುಳಿತು ಬಿಡುತ್ತದೆ. ಸಹಜವಾಗಿ ಭಾರತೀಯರೆಲ್ಲರೂ ಭಾರತದ ತಂಡವನ್ನು ಬೆಂಬಲಿಸಿದರೆ ಪಾಕಿಸ್ತಾನೀಯರು ಪಾಕಿಸ್ತಾನದ ತಂಡವನ್ನು ಬೆಂಬಲಿಸುತ್ತಾರೆ.
ಆದರೆ ಪ್ರತಿ ಬಾರಿ ಭಾರತ ಪಾಕಿಸ್ತಾನ ನಡುವೆ ನಡೆಯುವ ಪಂದ್ಯವನ್ನು ನೋಡಲು ತಪ್ಪದೇ ಪಾಕಿಸ್ತಾನಿ ಕ್ರೀಡಾಪ್ರೇಮಿಯೊಬ್ಬರು ಆಗಮಿಸುತ್ತಾರೆ. ‘ಚಾಚಾ ಚಿಕಾಗೋ’ ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ವ್ಯಕ್ತಿ ಪ್ರಸಿದ್ಧಿ ಪಡೆದಿರುವುದು ಕೇವಲ ಈ ಒಂದು ಕಾರಣಕ್ಕಾಗಿ ಮಾತ್ರವಲ್ಲ, ಅಚ್ಚರಿ ಏನೆಂದರೆ ಈ ಕ್ರಿಕೆಟ್ ಪ್ರೇಮಿ ಬೆಂಬಲಿಸುವುದು ಪಾಕಿಸ್ತಾನ ತಂದವನ್ನಲ್ಲ, ಅಚ್ಚರಿಯಾದರೂ ನಿಜ ಅವರು ಬೆಂಬಲಿಸುವುದು ಭಾರತದ ತಂಡವನ್ನು! ಅಷ್ಟೇ ಅಲ್ಲ, ಭಾರತವೇ ಗೆಲ್ಲಲಿ ಎಂದು ಇವರು ಪ್ರಾರ್ಥಿಸುತ್ತಾರೆ ಸಹಾ! 
ಚಾಚಾ ಶಿಕಾಗೋ ರವರ ನಿಜ ನಾಮಧೇಯ ಮುಹಮ್ಮದ್ ಬಶೀರ್ ಎಂದಾಗಿದೆ. ಮೊದಲು ಇವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರೂ ಈಗ ಇವರು ಭಾರತದ ತಂಡವನ್ನು ಬೆಂಬಲಿಸುತ್ತಿದ್ದಾರೆ.
ಧೋನಿ ಇವರ ಅಚ್ಚುಮೆಚ್ಚಿನ ಆಟಗಾರನಾಗಿದ್ದು, ಇವರು ಧೋನಿಯವರ ಆಟದ ಸಮಯದಲ್ಲಿ ಭಾರತೀಯರ ನಡುವೆ ಕುಳಿತು ಭಾರೀ ಕರತಾಡನದ ಮೂಲಕ ಧೋನಿಯವರನ್ನು ಬೆಂಬಲಿಸುತ್ತಿದ್ದರು. ಹಲವು ವರ್ಷಗಳವರೆಗೆ ಇವರು ತಮ್ಮ ಸ್ವದೇಶದ ತಂಡವನ್ನು ಬೆಂಬಲಿಸಿದರೂ ಧೋನಿಯವರ ಆಟದ ವೈಖರಿಯನ್ನು ಮೆಚ್ಚದೇ ಇರಲು ಇವರಿಗೆ ಸಾಧ್ಯವೇ ಆಗಿರಲಿಲ್ಲ.
ನಾನು ಪಾಕಿಸ್ತಾನವನ್ನು ಇಂದಿಗೂ ಪ್ರೀತಿಸುತ್ತೇನೆ. ಆದರೆ ಈಗ ಭಾರತವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಹಿಂದೆ ನನಗೆ ಪಾಕಿಸ್ತಾನದ ತಂಡ ಗೆಲ್ಲಬೇಕಿತ್ತು. ಆದರೆ ಈಗ ನನಗೆ ಭಾರತದ ತಂಡ ಗೆಲ್ಲಬೇಕಾಗಿದೆ. 2011 ರಲ್ಲಿ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಅನ್ನು ನೋಡಲು ಮೊದಲ ಬಾರಿ ಅಲ್ಲಿ ತೆರಳಿದ ಬಳಿಕ ನನ್ನ ಭಾವನೆ ಬದಲಾಗಿದೆ” ಎಂದು ಇವರು ತಿಳಿಸುತ್ತಾರೆ.
2011ರ ವಿಶ್ವಕಪ್ ಬಳಿಕ ನಡೆದ ಅಷ್ಟೂ ಪಂದ್ಯಗಳನ್ನು ಇವರು ನೋಡಿದ್ದಾರೆ. ಎಲ್ಲವನ್ನೂ ಇವರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು ನೋಡಿದ್ದುದೇ ವಿಶೇಷವಾಗಿದೆ. “ವರ್ಷವಿಡೀ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ನೋಡಲೆಂದು ನಾನು ಬರುತ್ತಲೇ ಇರುತ್ತೇನೆ ಹಾಗೂ ವರ್ಷದ ಹೆಚ್ಚಿನ ಸಮಯವನ್ನು ಭಾರತದಲ್ಲಿಯೇ ಕಳೆಯುತ್ತೇನೆ. ನನಗೆ ಭಾರತದಲ್ಲಿಯೇ ಹೆಚ್ಚಿನ ಭದ್ರತೆಯ ಅನುಭವವಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ.
ಈ ಕ್ರೀಡಾಪ್ರೇಮಿಯ ಪ್ರಕಾರ ಕ್ರಿಕೆಟ್ ಕ್ರೀಡೆಯ ಅಪ್ಪಟ ಅಭಿಮಾನಿಯಾಗಿರುವ ಇವರ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಪರ್ಧೆಯೇ ಇಲ್ಲ. ಕ್ರಿಕೆಟ್ ಆಟದ ಸೂಕ್ಷ್ಮತೆಗಳನ್ನು ಪಾಕಿಸ್ತಾನಕ್ಕಿಂತಲೂ ಹೆಚ್ಚು ಚೆನ್ನಾಗಿ ಅರಿತು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಹೆಚ್ಚಿನ ಸಾಧನೆಯನ್ನು ಸಾಧಿಸಲು ಸಾಧ್ಯವಾಗಿದೆ. ಏನೇ ಆಗಲಿ, ಈ ವ್ಯಕ್ತಿಯ ಅಪ್ಪಟ ಕ್ರೀಡಾಭಿಮಾನವನ್ನು ನಾವು ಅಭಿನಂದಿಸುತ್ತೇವೆ. ಚಾಚಾ ಶಿಕಾಗೋರವರೇ ನಿಮ್ಮ ಭಾರತದ ಮೇಲಿನ ಈ ಅಭಿಮಾನಕ್ಕೆ ನಮ್ಮ ಧನ್ಯವಾದಗಳು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು,ಮಾಜಿ ಸಿಎಂ ಯಡಿಯೂರಪ್ಪ ಹೇಳಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಅಲ್ಲದೆ ಕಾಂಗ್ರೆಸ್ 4 ಕ್ಷೇತ್ರದಲ್ಲಿ ಲೀಡ್ನಲ್ಲಿದ್ದರೆ, ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತ್ತ ಒಟ್ಟಾರೆಯಾಗಿ ಬಿಜೆಪಿ 340 ಕ್ಷೇತ್ರದಲ್ಲಿ ಲೀಡ್ನಲ್ಲಿ ಇದೆ. ದೇಶದ ಬಹುತೇಕ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿಯಾಗಿ ಬಹುಮತ ಪಡೆಯುವ ಮೂಲಕ ಮುನ್ನಡೆ ಸಾಧಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲು ರೆಡಿಯಾಗುತ್ತಿದ್ದಾರ ಎನ್ನುವ ಪ್ರಶ್ನೆ…
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….
ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.
ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..
ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್ವುಡ್ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ…
ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.