ಸುದ್ದಿ

ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

597

ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಾವುದು ಆ ಹಳ್ಳಿ..?ಅದು ಇಲ್ಲಿದೆ…?

ಕೋಟ್ಯಾಧೀಪತಿಗಳಾಗುವ ಅದೃಷ್ಟ ಅಂದರೆ ಇದೆ ಇರಬಹುದು! ಹೌದು, ಅರುಣಾಚಲ ಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.ಈ ಹಳ್ಳಿಯ ಎಲ್ಲಾ ಕುಟುಂಬಗಳು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ.

ಈ ಹಳ್ಳಿ ಏಷಿಯಾದ ಅತ್ಯಂತ ಶ್ರೀಮಂತ ಗ್ರಾಮವಾಗಿದ್ದು ಹೇಗೆ ಗೊತ್ತಾ..?

ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮಸ್ಥರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ.ಹೌದು, ತಾವಾಂಗ್ ಗ್ಯಾರಿಸನ್ ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು ಇದರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಇದರಿಂದಾಗಿ ಈ ಹಳ್ಳಿ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ.

ರಕ್ಷಣಾ ಸಚಿವಾಲಯ ಸ್ವಾಧೀನಪಡಿಸಿಕೊಂಡಿದ್ದು ಏಕೆ..?

ಕೇಂದ್ರದ  ರಕ್ಷಣಾ ಸಚಿವಾಲಯ 40.80 ಕೋಟಿ ಬಿಡುಗಡೆ ಬೋಮ್ಜಾ ಗ್ರಾಮದ ಸುಮಾರು 200.056 ಎಕರೆ ಭೂಮಿಯನ್ನು ಭಾರತೀಯ ಸೇನೆಯ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ರಕ್ಷಣಾ ಸಚಿವಾಲಯ ಸ್ವಾಧೀನಪಡಿಸಿಕೊಂಡಿದೆ. ಹಳ್ಳಿಯ ಎಲ್ಲಾ 31 ಕುಟುಂಬಗಳಿಗೆ ರೂ. 40,80,38,400 ಮೊತ್ತವನ್ನು ವಿತರಣೆ ಮಾಡಿದೆ. ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಿರುವ ಏಕೈಕ ಗ್ರಾಮ..!

ಏಷಿಯಾದಲ್ಲೇ ಹೆಚ್ಚು ಕೋಟ್ಯಾಧಿಪತಿಗಳಿರುವ ಶ್ರೀಮಂತ ಗ್ರಾಮ ಆಗಿದ್ದು, ಗ್ರಾಮದ ಒಟ್ಟು 31 ಕುಟುಂಬಗಳಲ್ಲಿ ಸಂತ್ರಸ್ತ 29 ಕುಟುಂಬಗಳಿಗೆ ತಲಾ ರೂ. 1.09 ಕೋಟಿ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಖಂಡು ವಿತರಿಸಿದ್ದಾರೆ. ಅವುಗಳಲ್ಲಿ ಒಂದು ಕುಟುಂಬ ರೂ. 6.73 ಕೋಟಿ ಪಡೆದಿದ್ದರೆ ಇನ್ನೊಂದು ಕುಟುಂಬ ರೂ. 2.45 ಕೋಟಿ ಪರಿಹಾರ ಧನ ಪಡೆದಿವೆ. ಒಟ್ಟಿನಲ್ಲಿ ಈ ಗ್ರಾಮದ ಏಷಿಯಾದಲ್ಲೇ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದ್ದು, ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಾಗಿರುವ ಏಕೈಕ ಗ್ರಾಮ.ಈ ಹಣವನ್ನು ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಪೇರಳ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸ್ಲಿಮ್‌ ಆಗಬೇಕೆನ್ನುವವರು ಡಯಟಿಂಗ್‌ ಲಿಸ್ಟ್‌ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್‌ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್. ಇದು…

  • inspirational, ದೇವರು, ದೇವರು-ಧರ್ಮ

    ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

    ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  • ಸುದ್ದಿ

    ಶಾಕಿಂಗ್ ನ್ಯೂಸ್ ಪೀಣ್ಯದ 10 ಸಾವಿರ ಕೈಗಾರಿಕೆಗಳು ಕ್ಲೋಸ್, 15 ಲಕ್ಷ ಕಾರ್ಮಿಕರು ಬೀದಿಗೆ,..ಇದಕ್ಕೆ ಕಾರಣವಾದರು ಏನು..?

    ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು. ಆರ್ಥಿಕ ಹಿಂಜರಿತದ ಎಫೆಕ್ಟ್​…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ರಾಜಯೋಗವಿದ್ದು, ಧನಲಾಭವಾಗಲಿದೆ..!

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ(16 ಡಿಸೆಂಬರ್, 2018) ನಾವು ಬುದ್ಧಿವಂತ ಚಟುವಟಿಕೆಗಳ ಮೂಲಕ ಜೀವನಕ್ಕೆ ಅರ್ಥ ನೀಡುತ್ತೇವೆಂದು ನೆನಪಿಡಿ. ನೀವು ಅವರ ಕಾಳಜಿ ವಹಿಸುತ್ತೀರೆಂದುಅವರಿಗೆ ತಿಳಿಯುವಂತೆ ಮಾಡಿ….

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…