ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಂಟೆಕ್ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ ಜೂನ್‌ನಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದು ತಮ್ಮ ಸಮಸ್ಯೆ ವಿವರಿಸಿದ್ದರು.
ಅಲ್ಲದೇ 2018ರ ಸೆ.15ರಂದು ಪಿಎಂ ಟ್ವಿಟರ್ ಖಾತೆಗೆ ಸಮಸ್ಯೆ ಬರೆದು ಟ್ಯಾಗ್ ಮಾಡಿದ್ದರು. ಅದರ ಪ್ರತಿಫಲವಾಗಿ 2018ರ ಅ.1ರಂದು ರೂರಲ್ ಎಲೆಕ್ಟ್ರಿಕಲ್ ಕಾರ್ಪೊರೇಶನ್ ಲಿಮಿಟೆಡ್ ವತಿಯಿಂದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಮರೇಶಗೆ ಉತ್ತರ ಬಂತು. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ಆಯ್ದ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ವಿಷಯವನ್ನು ಪತ್ರದಲ್ಲಿ ಉಲ್ಲೇಖೀಸಲಾಗಿತ್ತು.
ವಿದ್ಯುತ್ ಇಲ್ಲದೇ ಚಿಮಣಿ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದ ದೊಡ್ಡಿಗಳಿಗೆ ಈಗ ಬೆಳಕಿನ ಸೌಭಾಗ್ಯ ಬಂದಂತಾಗಿದೆ. ಜೆಸ್ಕಾಂ ವಿಭಾಗೀಯ ಕಚೇರಿ ಸಹಾಯಕ ಎಂಜಿನಿಯರ್ ಹಳ್ಳಿಗಳಿಗೆ ತೆರಳಿ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಈಗಾಗಲೇ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಿದ್ದು, ಬಹುತೇಕ ಮನೆಗಳಿಗೆ ಮೀಟರ್ ಅಳವಡಿಸಲಾಗಿದೆ.ಜತೆಗೆ, ಟ್ರಾನ್ಸ್‌ಫಾರ್ಮರ್ ತರಲಾಗಿದ್ದು, ಒಂದೆರಡು ದಿನಗಳಲ್ಲಿ ಅಳವಡಿಸುವ ಸಾಧ್ಯತೆಯಿದೆ. ಇದು ಕೇವಲ ಮೂರು ದೊಡ್ಡಿಗಳಿಗೆ ಮಾತ್ರವಲ್ಲದೇ ಇನ್ನುಳಿದ ಹತ್ತಾರು ದೊಡ್ಡಿಗಳ ಭಾಗ್ಯದ ಬಾಗಿಲು ತೆರೆಸಿದೆ. ಜೆಸ್ಕಾಂ ಅಧಿಕಾರಿಗಳ ಮಾಹಿತಿ ಪ್ರಕಾರ 1,400 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
ತಮ್ಮ ದೊಡ್ಡಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಇಲ್ಲದ ಕಾರಣ ಮಾವನ ಮನೆಯಲ್ಲಿದ್ದು ಓದಿದ ಅಮರೇಶ, ಎಂಟೆಕ್ ಪದವಿ ಪಡೆದಿದ್ದಾರೆ. ಬಳಿಕ ಮುಂಬೈನಲ್ಲಿ ಕೆಲ ಕಾಲ ಉದ್ಯೋಗ ಮಾಡಿ ಈಗ ಪುನಃ ಊರು ಸೇರಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ತಮ್ಮ ದೊಡ್ಡಿಗಳ ಸಮಸ್ಯೆ ನೀಗದ ಕಾರಣ ಪ್ರಧಾನಿ ಕಚೇರಿಯ ಮೊರೆ ಹೋಗಿದ್ದಾರೆ. ಅವರ ಸಣ್ಣ ನಡೆ ಈಗ ದೊಡ್ಡಮಟ್ಟದ ಪ್ರತಿಫಲವನ್ನೇ ನೀಡಿದೆ.
ಅನೇಕ ದೊಡ್ಡಿಗಳಿಗೆ ತೆರಳಿ ಶುಲ್ಕ ಪಾವತಿಸಿದರೆ ವಿದ್ಯುತ್ ನೀಡುವುದಾಗಿ ನಾವು ಈ ಮೊದಲೂ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಜನರು ಶುಲ್ಕ ಕಟ್ಟಲು ಮುಂದಾಗುತ್ತಿರಲಿಲ್ಲ. ಸೌಭಾಗ್ಯ ಯೋಜನೆಯಡಿ ವಿದ್ಯುತ್ ನೀಡುವಂತೆ ನಮಗೆ ನಿರ್ದೇಶನ ಬಂದ ಕಾರಣ ಆ ಮೂರು ದೊಡ್ಡಿಗಳ ಜತೆ ಇನ್ನೂ ಅನೇಕ ಕಡೆ ವಿದ್ಯುತ್ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ವಿದ್ಯುತ್ ಸರಬರಾಜು ಆರಂಭಿಸಲಾಗುವುದು. ಅಲ್ಲಿನ ನಿವಾಸಿಗಳು ಇನ್ನು ಮುಂದೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿದರೆ ಸಾಕು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.
ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ ಆರಂಭವಾಗಿದೆ. ಚಳಿಯಿ೦ದ ಕೂಡಿದ ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹಲವು ಹೆಸರುಗಳಿಂದ ಕರೆಯಲ್ಪಡುವ ಆಂಜನೇಯನ ವಿಶೇಷತೆ ಮಹತ್ವ ಪೂರ್ಣವಾದದ್ದು. ರಾಮನ ಪರಮ ಭಕ್ತನಾದ ಹನುಮಂತನಿಗೆ ಅಪಾರ ಸಂಖ್ಯೆಯ ಭಕ್ತರು… ಮೊದಲಿಗೆ ಪಂಚಮುಖಿ ಆಂಜನೇಯನ ಅವತಾರವಾಗಿದ್ದು ಹೇಗೆ ಎಂದು ತಿಳಿಯೋಣ… ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ. ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ…
ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
ಬಿಜೆಪಿ ಆಡಳಿತ ಸರ್ಕಾರವಿರುವ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು.
ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ.. ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು…