ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ.
ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ ಬಿರು ಬಸಿಲಿನ ಬೇಗೆ ತಟ್ಟತೊಡಗಿದೆ.
ಬೆಂಗಳೂರೇ ಹೀಗಾದರೆ ಇನ್ನು ಉತ್ತರ ಕನ್ನಡ, ಗಡಿ ನಾಡುಗಳ ಪರಿಸ್ಥಿತಿ ಹೇಳಲೂ ಆಗದ ಹಾಗಿದೆ. 10 ರಿಂದ 4 ಗಂಟೆಯವರೆಗೆ ಹೊರಗೆ ಬರಲಾಗದ ಸ್ಥಿತಿ ಈ ಊರುಗಳಲ್ಲಿದೆ. ಹಣ್ಣು ಹಾಗೂ ತಂಪು ಪಾನೀಯಗಳ ಮಾರಾಟ ಬಲು ಭರಾಟೆಯಿಂದ ಸಾಗಿದೆ.
ತಾಯಂದಿರ ಕಷ್ಟ ಹೇಳಲಿಕ್ಕಾಗದಷ್ಟಿದೆ. ಮಕ್ಕಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜಾ ಶುರುವಾಗಿದೆ. ಇನ್ನು ಪುಟ್ಟ ಕಂದಮ್ಮಗಳ ಗೋಳಂತೂ ಹೇಳಲಾಗದು. ಅಳು ಒಂದೇ ಗೋಳಾಗಿದೆ. ಇವೆಲ್ಲದರ ನಡುವೆ ಕರೆಂಟ್ ಹೋದರಂತೂ ಒಂದು ಕ್ಷಣ ಕೂಡ ಇರಲಿಕ್ಕೆ ಆಗಿಲ್ಲ.
ಇದು ಮಕ್ಕಳ ಕತೆಯಾದರೆ ವಯಸ್ಸಾದವರ ಕಷ್ಟ ಮತ್ತೊಂದು ಥರ. ಮಲಗಲೂ ಆಗದೆ, ಕೂರಲೂ ಆಗದ ಅವರ ಪರಿಸ್ಥಿತಿ ಹೇಳತೀರದು. ಮಾರ್ಚ್ ನಲ್ಲೇ ಈ ಗತಿಯಾದರೆ ಇನ್ನೂ ಮೇ ಜೂನ್ ನಲ್ಲಿ ಏನಾಗಬಹುದು ಹೇಳಿ.
ನಾವೆಲ್ಲರೂ ಇದಕ್ಕೆ ಪರಿಹಾರ ಏನೂ ಮಾಡದೇ ಬಿಸಿಲು, ಬೇಸಿಗೆ ಅಂತ ನಾವು ನಮ್ಮ ಕೆಲಸ ಮಾಡುತ್ತ ಸುಮ್ಮನೆ ಕುಳಿತುಕೊಳ್ಳುವುದು ಬಿಟ್ಟು ಮನೆಯಲ್ಲಿರೊ ಎಲ್ಲ ಸದಸ್ಯರಿಗೂ ಒಬ್ಬರಿಗೆ ಒಂದರಂತೆ ಗಿಡಗಳನ್ನು ನೆಟ್ಟು ಬೆಳೆಸಿ. ಮನೆ ಕಟ್ಟುವವರೆಲ್ಲರೂ ಮಳೆ ಕೋಯ್ಲ ಮಾಡಿ, ಊರಿನ ಸುತ್ತ ಮಳೆ ನೀರಿನ ಹೋರಟ ನಿರ್ಮಿಸಿ, ನಮ್ಮ ಕರ್ತವ್ಯ ಮಾಡಿದರೆ ಈ ಬಿಸಿ ಬಿಸಿ ಬೇಸಿಗೆಯಿಂದ ಸ್ವಲ್ಪವಾದರೂ ತಪ್ಪಿಸಿಕೊಳ್ಳಬಹುದು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.
ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್! ಫೇಸ್ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್ನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಫೆಬ್ರವರಿ 1, 2020ರ ಬಳಿಕ ಕೆಲ ಮೊಬೈಲ್ಗಳಿಗೆ ತನ್ನ ಸೌಲಭ್ಯವನ್ನು ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ. ಪ್ರಪಂಚದ ಜನಪ್ರಿಯ ಸಂದೇಶ ರವಾನೆ ಮಾಡುವ ವೇದಿಕೆಗಳಲ್ಲಿ ವಾಟ್ಸಾಪ್ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿದೆ. ಇದೀಗ ವಾಟ್ಸಾಪ್ ಪ್ರಿಯರಿಗೆ ಒಂದ ಕಹಿ ಸುದ್ದಿ ಬಂದಿದ್ದು ಕೆಲ ಮೊಬೈಲ್ಗಳಲ್ಲಿ ವಾಟ್ಸಾಪ್ ಸೇವೆ ಬಂದ್ ಆಗಲಿದೆ ಎಂದು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದ ದೈತ್ಯ ಮಾದ್ಯಮವಾಗಿ ಬೆಳೆದಿರುವ…
ಸ್ಮಾರ್ಟ್ಫೋನ್ ಹಳೆಯದಾದಷ್ಟು ಅದು ಹ್ಯಾಂಗ್ ಹಾಗೂ ಸ್ಲೋ ಆಗುವ ಚಾನ್ಸ್ ಹೆಚ್ಚಾಗಿರುತ್ತದೆ. ಅಂದರೆ ಬಳಕೆ ಮಾಡುವಾಗ ಲೇಟ್ ಆಗಿ ರೆಸ್ಪಾನ್ಸ್ ಮಾಡುತ್ತದೆ. ನಂತರ ಹ್ಯಾಂಗ್ ಆಗುತ್ತದೆ. ಹೀಗೆ ಆದರೆ ಫೋನ್ನ್ನು ಮತ್ತೆ ಮತ್ತೆ ರಿಸ್ಟಾರ್ಟ್ ಮಾಡಬೇಕಾಗುತ್ತದೆ.
ಹೈನುಗಾರಿಕೆಯ ಭಾಗವಾಗಿ, ಹಸುಗಳ ಹೊಟ್ಟೆಯಲ್ಲಿ ದೊಡ್ಡ ಹೋಲ್ಗಳನ್ನು ಮಾಡಿದ್ದಾರೆ.ಸ್ವಿಟ್ಜರ್ಲೆಂಡ್ನಲ್ಲಿರುವ ಕೆಲವು ರೈತರು ಹೀಗೆ ಮಾಡುತ್ತಿರುವುದು ಏಕೆ ಎಂದು ಹಲವು ಜನರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ತಿರುಗಾಡುತ್ತಿರುತ್ತದೆ ಎಂದು ಹಿಂದು ಪುರಾಣಗಳು ನಂಬುತ್ತವೆ.
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…