ಸರ್ಕಾರದ ಯೋಜನೆಗಳು

ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಸರಕಾರದಿಂದ ವಸತಿ ಭಾಗ್ಯ..!ಈ ಸೌಲಭ್ಯವನ್ನು ಪಡೆಯುವುದು ಹೇಗೆ ಗೊತ್ತಾ..?

9291

ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆನ್ಲೈಸನ್ ಮೂಲಕ 1 ಲಕ್ಷ ಮನೆ ಹಂಚುವ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಹಾಗೂ ವಸತಿ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಲ್ಲಿ ಮನೆ ನೀಡುವ ಯೋಜನೆ ಇಂದು ಅಧಿಕೃತವಾಗಿ ಜಾರಿಗೊಂಡಿತು.

ಬೆಂಗಳೂರಿನಲ್ಲಿ ಒತ್ತುವರಿ ತೆರವುಗೊಳಿಸಿ ವಶಕ್ಕೆ ತೆಗೆದುಕೊಂಡ ಸಾಕಷ್ಟು ಜಮೀನು ಇದೆ. ಅಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಒಂದೇ ಕಡೆ ನಿರ್ಮಾಣ ಆಗುತ್ತಿಲ್ಲ. ನಗರದ ಬೇರೆ ಬೇರೆ ಭಾಗಗಳಲ್ಲಿ ನಿರ್ಮಿಸಲಾಗುತ್ತದೆ. ವಾರ್ಷಿಕ ಆದಾಯ ₹ 87,600 ಕ್ಕಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಒಂದು ಕುಟುಂಬದಿಂದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳದ ದೃಢೀಕರಣ ಪತ್ರಗಳ ಆರ್ಡಿ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯ. ಇನ್ನುಳಿದ ಮಾಹಿತಿಯನ್ನು ಆನ್ಲೈನ್ ಮೂಲಕವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ವಸತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 30, ಪರಿಶಿಷ್ಟ ಪಂಗಡಕ್ಕೆ ಶೇ 10, ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲು ಇದೆ. ಉಳಿದ ಶೇ  50 ಮನೆಗಳನ್ನು ಸಾಮಾನ್ಯ ವರ್ಗಕ್ಕೆ ಹಂಚಲಾಗುತ್ತದೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ₹ 3.50 ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹ 2.70 ಲಕ್ಷ ಸಹಾಯ ಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್‌ನಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಅರ್ಜಿ ಸಲ್ಲಿಕೆಗೆ ಬಿಬಿಎಂಪಿಯ ಎಲ್ಲ ವಾರ್ಡ್, ಕಚೇರಿಗಳಲ್ಲಿ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದರೊಂದಿಗೆ ಯಾವುದೇ ಬ್ರೌಸಿಂಗ್ ಸೆಂಟರ್ನ್ಲ್ಲಿಯೂ ಆನ್ಲೈಂನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 2018ರ ಜನವರಿ 5 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಪುರಿ ಜಗನ್ನಾಥ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು

    ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದು. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದಲ್ಲಿ ಇಂದಿಗೂ ನಡೆಯುವ ಅಚ್ಚರಿ ಸಂಗತಿಗಳು ವೈಜ್ಞಾನಿಕ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿದೆ. ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು…

  • ತಂತ್ರಜ್ಞಾನ

    ನೀವು ದಿನನಿತ್ಯ ನಡೆಯುವುದರಿಂದ ಬ್ಯಾಟರಿ ಚಾರ್ಜ್ ಮಾಡಬಹುದು ಹೇಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.

  • ದೇಶ-ವಿದೇಶ

    ಈ ಪುಟ್ಟ ದೇಶ ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ!ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ರೆ ನಾನು ನಿಮ್ಮ ಸ್ನೇಹಿತ ಎಂಬುದು ಈ ದೇಶದ ನಿಯಮ!ಮುಂದೆ ಓದಿ ಶೇರ್ ಮಾಡಿ..

    ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ ! ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಂಚೆ ವೈರಿಗಳು ಯೋಚಿಸಬೇಕಾದದ್ದು ಏನು ಗೊತ್ತಾ..? ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ…

  • ಆಧ್ಯಾತ್ಮ

    ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

    ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(13 ಫೆಬ್ರವರಿ, 2019) ದಿನದ ಉತ್ತರಾರ್ಧದಲ್ಲಿ ಅತ್ಯಾಕರ್ಷಕ ಮತ್ತು ಮನರಂಜನೆಯ ಏನನ್ನಾದರೂ ಹೊಂದಿಸಿ. ಪ್ರಣಯ ಮತ್ತು…

  • ಸುದ್ದಿ

    ಪಾಕಿಸ್ಥಾನ ಸೋತ ಖುಷಿಯಲ್ಲಿ ಅರೆಬೆತ್ತಲೆ ಕುಣಿದಂತಹ ಪೂನ್ಂ ಪಾಂಡೆ ಅವಾಂತರ…!

    ನೆನ್ನೆ ನಡೆದ ಇಂಡಿಯಾ ಹಾಗೂ ಪಾಕಿಸ್ತಾನದ ಹೈ ವೋಲ್ಟೇಜ್ ಪಂದ್ಯದಲ್ಲಿ ಇಂಡಿಯಾ ಪಾಕ್ ವಿರುದ್ಧ 89 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಬಾರತದ ಈ ಗೆಲುವನ್ನು ಎಲ್ಲರೂ ಪಟಾಕಿ ಹಚ್ಚಿ, ಸಹಿ ತಿಂದು, ಪಾರ್ಟಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರೆ ಕೆಲ ಮಾಡೆಲ್​ಗಳು ಸ್ಪರ್ಧೆ ನೀಡುವ ರೀತಿಯಲ್ಲಿ ನ್ಯೂಡ್​ ಫೋಟೋಗಳನ್ನು ನೀನಾ – ನಾನಾ ಎಂದು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನೂ ಈ ಫೋಟೋಗಳಂತ್ತು…