ಸುದ್ದಿ

ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರಿಗೊಂದು ಬಿಗ್ ಶಾಕ್, ಇಷ್ಟಕ್ಕೂ ಏನದು, ಇದನ್ನೊಮ್ಮೆ ಓದಿ ..!

56

ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ. 2019ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡ ವನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ. ಸೆಪ್ಟೆಂಬರ್ 1ರಿಂದ ಪರಿಷ್ಕøತ ದಂಡದ ಪ್ರಮಾಣ ಅನುಷ್ಠಾನಕ್ಕೆ ಬರಲಿದೆ. ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತಂದು ವಿವಿಧ ಸಂಚಾರಿ ನಿಯಮ ಗಳಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಅಪರಾಧಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 100 ನಿಂದ 500ರೂ.ಗೆ ಹೆಚ್ಚಿಸಲಾಗಿದೆ. ಪರವಾನಗಿ ಇಲ್ಲದೆ ಅನಧಿಕೃತ ವಾಹನಗಳಿಗೆ 1000 ದಿಂದ 5000ರೂ. ವರೆಗೆ ಪರಿಷ್ಕರಿಸಲಾಗಿದೆ.

ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣವನ್ನು 500 ರಿಂದ 5000ರೂ.ಗೆ ಹೆಚ್ಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 2000 ದಿಂದ 10,000ರೂ.ಗೆ ಹೆಚ್ಚಿಸಲಾಗಿದೆ. ಅತೀ ವೇಗದ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 400 ರಿಂದ 1000ರೂ.ಗೆ ಪರಿಷ್ಕರಿಸಲಾಗಿದೆ. ಪರವಾನಗಿ ಇಲ್ಲದ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 5000 ದಿಂದ 10,000ಕ್ಕೆ ಹೆಚ್ಚಿಸಲಾಗಿದ್ದು, ಅರ್ಹತೆ ಇಲ್ಲದವರು ವಾಹನ ಚಾಲನೆ ಮಾಡಿದರೆ ವಿಧಿಸಲಾಗುತ್ತಿದ್ದ ದಂಡವನ್ನು 500 ರಿಂದ 10,000ರೂ.ಗೆ ಹೆಚ್ಚಳ ಮಾಡಲಾಗಿದೆ.

ಸೀಟ್‍ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣ 100 ರಿಂದ 1000ರೂ.ಗೆ ಹೆಚ್ಚಿಸಲಾಗಿದೆ. ಆ್ಯಂಬುಲೆನ್ಸ್‍ನಂತಹ ತುರ್ತು ವಾಹನಗಳಿಗೆ ಅವಕಾಶ ಮಾಡಿಕೊಡದಿದ್ದರೆ 10,000ರೂ., ಟಿಕೆಟ್ ರಹಿತ ಪ್ರಯಾಣಕ್ಕೆ 500ರೂ. ದಂಡ ವಿಧಿಸಲಾಗಿದೆ. ವಿಮೆ ಇಲ್ಲದೆ ಚಾಲನೆ ಮಾಡುವ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 2000ರೂ.ಗೆ ಹಾಗೂ ಅಪಾಯಕಾರಿ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 5000ರೂ.ಗೆ ಹೆಚ್ಚಿಸಲಾಗಿದೆ.

ಅತಿ ಭಾರದ ಸರಕು ಸಾಗಣೆ ಮಾಡಿದರೆ 20,000ರೂ.ವರೆಗೂ ದಂಡ ವಿಧಿಸುವುದಲ್ಲದೆ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ ಪ್ರತೀ ಪ್ರಯಾಣಿಕರಿಗೆ 1000ರೂ., ಹಾಗೆಯೇ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ 1000 ದಿಂದ 5000ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಎಸಗುವ ಅಪರಾಧಕ್ಕೆ 25,000ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಕರೋನಾ ವೈರಸ್ COVID – 19

    MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…

  • inspirational

    ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು

    ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ. ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ…

  • ಉಪಯುಕ್ತ ಮಾಹಿತಿ

    ಪಿ.ಎಂ. ಕಿಸಾನ್ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ e kyc ಮಾಡಿಸಿಕೊಳ್ಳಿ

    ಪಿ.ಎಂ. ಕಿಸಾನ್ ಯೋಜನೆಯಲ್ಲಿ ನೊಂದಣಿಯಾಗಿರುವ ಫಲಾನುಭವಿಗಳಿಗೆ ಆರ್ಥಿಕ ನೆರವು ವರ್ಗಾವಣೆಯು ಚಾಲ್ತಿಯಲ್ಲಿದ್ದು, ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರೆಕುತ್ತಿದ್ದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು e kyc ಮಾಡುವುದು ಕಡ್ಡಾಯವಾಗಿರುತ್ತದೆ e kyc ಮಾಡಿಸಲು ತಮ್ಮ ಆಧಾರ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊOದಿಗೆ ನೊಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದ ನಂತರ ಓಟಿಪಿ ಆಧಾರಿಸಿದ e-kyc ಮಾಡಬಹುದಾಗಿರುತ್ತದೆ. ಆಧಾರ್ ಸಂಖ್ಯೆಯೊOದಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಅಥವಾ ಮೊಬೈಲ್ ಸಂಖ್ಯೆಗೆ ಓಟಿಪಿ ಸ್ವೀಕೃತಿಯಾಗಿರುವ ಸಂದರ್ಭದಲ್ಲಿ ನಿಮ್ಮ ಹತ್ತಿರದ ನಾಗರಿಕ ಸೇವ ಕೇಂದ್ರಗಳಿಗೆ…

  • ಸಿನಿಮಾ, ಸುದ್ದಿ

    70 ಲಕ್ಷ ರೂಪಾಯಿ ಕಳೆದುಕೊಂಡ ಕಥೆ ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್.

    ಸಿನಿಮಾ ರಂಗದಲ್ಲಿ ‘ನವರಸನಾಯಕ’ ಜಗ್ಗೇಶ್ ಅವರಿಗೆ 40 ವರ್ಷಗಳ ಅನುಭವ ಇದೆ. ಅವರಿಗೆ ಸಿನಿಮಾ ಬಗ್ಗೆ ಸಾಕಷ್ಟು ಅನುಭವವಿದೆ. ಸೋಲು-ಗೆಲುವು ಕಂಡ ಅವರು 75 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದರು. ಈ ಸಾಲ ತೀರಿಸಲು ಮನೆ ಮಾರಿದ್ದರಂತೆ. ಇದರ ಬಗ್ಗೆ ಜಗ್ಗೇಶ್ ಹೇಳಿದ್ದೇನು? ‘ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಅವರು ಸಿನಿಮಾ ಮಾಡಲು ಹೋಗಿ 70 ಲಕ್ಷ ರೂಪಾಯಿ ಕಳೆದುಕೊಂಡ…

  • ಆರೋಗ್ಯ

    ಈರುಳ್ಳಿ ತಿನ್ನುವ ಅಭ್ಯಾಸ ಇದ್ರೆ ಖಂಡಿತ ನೀವು ಇದನ್ನು ತಿಳಿದುಕೊಳ್ಳಲೇಬೇಕು..!

    ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ, ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ, ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ. ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ, ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ, ಅಲ್ಲದೆ ಹಸಿ…

  • ಕಾನೂನು

    10ರೂ ನಾಣ್ಯವನ್ನು, ಅಂಗಡಿಯವ ಮುಲಾಜಿಲ್ಲದೆ ತಿರಸ್ಕರಿಸಿದಕ್ಕೆ, ಅವನಿಗಾದ ಶಿಕ್ಷೆ ಏನು ಗೊತ್ತಾ..?

    ಹತ್ತು ರುಪಾಯಿಯ ನಾಣ್ಯವನ್ನು ತೆಗೆದುಕೊಳ್ಳುವುದರ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.ವ್ಯಾಪಾರಿಗಳು ತಮಗಿರುವ ಗೊಂದಲದಲ್ಲಿ, 10ರುಪಾಯಿಯ ನಾಣ್ಯವನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದಾರೆ.