ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ಅಭಯ ನೀಡಲು ಬಿಎಂಟಿಸಿ ಮುಂದಡಿ ಇಟ್ಟಿದೆ. ಬಸ್‌ಗಳು ಮತ್ತು ನಿಲ್ದಾಣಗಳನ್ನು ಮಹಿಳಾ ಸ್ನೇಹಿಯನ್ನಾಗಿಸಿ, ಸುರಕ್ಷತೆಯ ಭಾವನೆ ಮೂಡಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಬಿಎಂಟಿಸಿ ನಿಲ್ದಾಣಗಳಲ್ಲಿ ಹಲವು ಸೌಲಭ್ಯ ಒಳಗೊಂಡ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲು ಯೋಜಿಸಲಾಗಿದೆ.
ಖರ್ಚಾಗದೇ ಉಳಿದಿರುವ ನಿರ್ಭಯಾ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಬಿಎಂಟಿಸಿಯಿಂದ ಮಹಿಳೆಯರ ವಿಶ್ರಾಂತಿ ಗೃಹ ಆರಂಭಿಸಲಾಗುವುದು. ಕೇಂದ್ರ ಸರಕಾರವು ‘ನಿರ್ಭಯಾ’ ಯೋಜನೆಯಡಿ 56.50 ಕೋಟಿ ರೂ. ಅನುದಾನವನ್ನು ಬಿಎಂಟಿಸಿಗೆ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಮಹಿಳಾ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಶಿವಾಜಿನಗರ, ಬನಶಂಕರಿ, ಜಯನಗರ, ವಿಜಯನಗರ, ದೊಮ್ಮಲೂರು, ವೈಟ್‌ಫೀಲ್ಡ್, ಕೆಂಗೇರಿ ಸೇರಿದಂತೆ 15 ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ದಣಿವಾರಿಸಿಕೊಳ್ಳಲು ವಿರಾಮ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರು, ಫ್ಯಾನ್, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಸವಲತ್ತು ಕಲ್ಪಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ 10-15 ಆಸನಗಳನ್ನೂ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಮಹಿಳೆಯರು ಬಸ್‌ಗಾಗಿ ಕಾದು ನಿಲ್ಲುವುದು ತಪ್ಪಲಿದೆ.
ಬಿಎಂಟಿಸಿಗೆ 33.64 ಕೋಟಿ ರೂಪಾಯಿ ಅನುದಾನ ಬಂದಿದೆ.ಅದರಲ್ಲಿ 2.37 ಕೋಟಿ ರೂಪಾಯಿ ಖರ್ಚಾಗಿದೆ. ಉಳಿದ 31.27 ಕೋಟಿ ರೂಪಾಯಿ ಅನುದಾನವನ್ನು ಬಳಸಿಕೊಂಡು ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು. ಬಿಎಂಟಿಸಿ 14 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಿದ್ದು, ಕುಡಿಯುವ ನೀರು, ಫೀಡಿಂಗ್ ಕೊಠಡಿ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಶೌಚಗೃಹ, ವೈಫೈ ಸೌಲಭ್ಯ ಮಾಹಿತಿ ಪ್ರದರ್ಶನ ಮೊದಲಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ.1000 ಬಸ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.
ಕಳೆದ ಕೆಲ ವರ್ಷಗಳಿಂದ ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕೈಯ್ಯಾರೆ ಊಟ ಅಥವಾ ಬೇರೆ ಕೆಲಸ ಮಾಡಲು ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ 27 ವರ್ಷದ ಅಬುಲ್ ಬಜಂದಾರ್ಗೆ ಬರೋಬ್ಬರಿ 19 ಶಸ್ತ್ರ ಚಿಕಿತ್ಸೆ ಮಾಡಿದ್ರೂ ತೊಂದರೆ ನಿವಾರಣೆ ಆಗಿಲ್ಲ.
ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.
ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ…
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ…