Uncategorized

ಬಾಳೆಹಣ್ಣಿನ ಉಪಯೋಗ ಕೇಳಿದ್ರೇ ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರ…

2511

downloadಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ.

ಬೊಜ್ಜು :

ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , ೫೦೦೦ ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ. ಹೆಚ್ಚುಒತ್ತಡದಲ್ಲಿ ಕೆಲಸಮಾಡುವವರಿಗೆ, ಊಟಸೇರುವುದಿಲ್ಲ. ಅದಕ್ಕಾಗಿ ಅವರು ಜಂಕ್ ಫುಡ್ (ಕುರುಕಲು ತಿಂಡಿಗಳನ್ನು) ಎಂದು ಕರೆಯಲಾಗುವ, ಚಿಪ್ಸ್, ಚಾಕೊಲೆಟ್, ಮುಂತಾದ ಅಡ್ಡತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ಬೊಜ್ಜುಬೆಳೆಯಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಹಣ್ಣುಗಳ ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಂಡು ಅಂತಹ ಅಡ್ಡತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.

ಅಲ್ಸರ್ :
ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.

ಉಷ್ಣ ನಿಯಂತ್ರಕ :
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.

ಧೂಮಪಾನ ಹಾಗೂ ತಂಬಾಕುಸೇವನೆ :
ಬಿ-೬, ಬಿ-೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.

ಒತ್ತಡ:
ಪೊಟಾಸಿಯಂ ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. “ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನ ಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಖಂಡಿತವೆಂದು ವೈದ್ಯರು ಹೇಳುತ್ತಾರೆ.

ಖಿನ್ನತೆ :
‘ಮೈಂಡ್ ಸಂಸ್ಥೆ,,’ ಇತ್ತೀಚೆಗೆ ನಡೆಸಿದ, ಸರ್ವೇಕ್ಷಣೆಯ ಪ್ರಕಾರ, ಖಿನ್ನತೆಗೆ ಒಳಗಾದವರು ಒಂದು ಬಾಳೆಹಣ್ಣನು ಸೇವಿಸಿದ ಬಳಿಕ, ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆ. ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ನಮ್ಮ ದೇಹ ಈ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗಶಮನಗೊಂಡು ಪ್ರಪುಲ್ಲಚಿತ್ತರನ್ನಾಗಿಸುವ ಅಂಶವೆಂದು ಪರಿಗಣಿತವಾಗಿದೆ. ಕಾಡುವ ನಮ್ಮೆಲ್ಲರ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳಿಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು. ಬಾಳೆಹಣ್ಣಿನಲ್ಲಿರುವ ಬಿ-೬ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮಸ್ಥಿತಿಯಲ್ಲಿರಿಸಿ, ನಮ್ಮ ಮನಸ್ಥಿತಿಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ.

ರಕ್ತಹೀನತೆ :
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.

ರಕ್ತದೊತ್ತಡ:
ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. “ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ” ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಪದೇ ಪದೇ ಸೆಲ್ಫಿ ಫೋಟೋ ತೆಗೆದುಕೊಳ್ಳುವವರಿಗೆ ಶಾಕಿಂಗ್ ಸುದ್ದಿ!

    ಇದು ಸೆಲ್ಫಿ ಯುಗ. ಒಂದು ಸ್ಮಾರ್ಟ್ ಫೋನ್ ಕೈ ನಲ್ಲಿದ್ದರೆ ಸಾಕು ಎಲ್ಲೆಂದ ರಲ್ಲೇ ಸೆಲ್ಫಿ ತೆಗೆದುಕೊಳ್ಳುವವರೇ ಜಾಸ್ತಿ. ಒಂದು ರೀತಿ ಸೆಲ್ಫಿ ಹುಚ್ಚರ ಸಂತೆಯಾಗಿಬಿಟ್ಟಿದೆ ಈ ದುನಿಯಾ. ಸಿಕ್ಕಿದ ಕಡೆಯೆಲ್ಲಾ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾ ತಾ ಮುಂದು ಫೋಟೋಗಳನ್ನು ಪೋಸ್ಟ್ ಮಾಡುವ ಗೀಳು ಯುವಕ ಯುವತಿಯರು ಸೇರಿದಂತೆ ವಯಸ್ಸಿನ ಅಂತರವಿಲ್ಲದಂತೆ ಎಲ್ಲಾರಲ್ಲೂ ಈ ಗೀಳು ಹೆಚ್ಚಾಗಿಬಿಟ್ಟಿದೆ. ಆದರೆ ಸೆಲ್ಫಿ ಗೀಳು ಅಂಟಿಸಿಕೊಂದವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ… ಹೌದು,…

  • ರೆಸಿಪಿ

    ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?

    ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು…

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ರಾಜಕೀಯ

    ಮುಂದಿನ ಬಾರಿಯ ಎಲೆಕ್ಷನ್ ನಲ್ಲೂ ಮೋದಿದೆ ಹವಾ…..! ಹೇಗಂತ ತಿಳಿಯಲು ಈ ಲೇಖನ ಓದಿ…

    ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಮತದಾರರ ಅಭಿಪ್ರಾಯ ಸಮೀಕ್ಷೆಯಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ 6ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದೆ.

  • ಸಿನಿಮಾ

    ಹೋಟೆಲ್ ನಿಂದ ಎಸ್ಕೇಪ್ ಹಾಗಿದ್ದೇಕೆ ನಟಿ ಪೂಜಾ ಗಾಂಧಿ!

    ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.  ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….

  • ಜ್ಯೋತಿಷ್ಯ

    ಈ ದಿನದ ಭವಿಷ್ಯ ಹೇಗಿದೆ ಇಲ್ಲಿ ನೋಡಿ ತಿಳಿಯಿರಿ…

    ಬುಧವಾರ, 28/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅರಣ್ಯ ಇಲಾಖೆ ಸಿಬ್ಬಂದಿಗೆ ಮನ್ನಣೆ ಸಿಗುವುದು. ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.  ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ ಹೊಂದುವಿರಿ. ವೃಷಭ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು…