ಸುದ್ದಿ

ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

28

‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ!

ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ ಬೇರೆ ಆವೃತ್ತಿಗಳ ಶೂಟಿಂಗ್‌ನಲ್ಲಿ ಬಿಜಿ ಆಗಿರುತ್ತೇವೆ. ಅವರಿಲ್ಲಿ ಬರಲು ಸಾಧ್ಯವಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಆದರೆ, ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ಕನ್ನಡದ ಬಿಗ್‌ಬಾಸ್‌ಗೆ ಸುದೀಪ್ ನಿರೂಪಕರಾದರೆ, ಹಿಂದಿ ಬಿಗ್‌ಬಾಸ್‌ಗೆ ಸಲ್ಮಾನ್‌ ನಿರೂಪಕರು. ಸದ್ಯ ಅವರ ಸಾರಥ್ಯದಲ್ಲೀಗ ಬಿಗ್‌ಬಾಸ್‌ ಸೀಸನ್ 13 ಆರಂಭಗೊಂಡಿದೆ. ಇಬ್ಬರಿಗೂ ಬಿಗ್‌ಬಾಸ್‌ ವೇದಿಕೆ ಹೊಸದೇನಲ್ಲ.

ಜತೆಗೆ ‘ದಬಾಂಗ್ 3’ ಚಿತ್ರದ ಮೂಲಕ ಸಲ್ಮಾನ್‌ ಖಾನ್‌ ಚೊಚ್ಚಲ ಬಾರಿಗೆ ಕನ್ನಡಕ್ಕೂ ಕಾಲಿಡಲಿದ್ದಾರೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್ ಆಗಿ ಡಿ.20ಕ್ಕೆ ತೆರೆಕಾಣಲಿದೆ. ಅದರಲ್ಲಿ ಸಲ್ಮಾನ್‌ ಜತೆ ಸುದೀಪ್ ಕೂಡ ನಟಿಸಿದ್ದಾರೆ. ಒಂದುವೇಳೆ, ಸಲ್ಮಾನ್‌ ಕನ್ನಡ ಬಿಗ್‌ಬಾಸ್‌ಗೆ ಬಂದರೆ ಸಿನಿಮಾಕ್ಕೆ ಸಾಕಷ್ಟು ಲಾಭಗಳಿವೆ ಎಂಬುದು ಕನ್ನಡದ ಅಭಿಮಾನಿಗಳ ಲೆಕ್ಕಾಚಾರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಮನೆಯಲ್ಲಿ ಒಮ್ಮೆ ಲವಂಗದ ಎಲೆಯನ್ನು ಉರಿಸಿ ಚಮತ್ಕಾರ ನೋಡಿ..!

    ಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ. ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು. ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು…

  • ತಂತ್ರಜ್ಞಾನ

    ಚಾಲಕನಿಲ್ಲದ ವಿಮಾನ!!!

    ಪೈಲಟ್ ಇಲ್ಲದ ವಿಮಾನ ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.

  • ಸಂಬಂಧ, ಸುದ್ದಿ

    ಈ ಅಜ್ಜಿಯನ್ನು ಬಿಕ್ಷುಕಿ ಅಂದುಕೊಂಡರು, ನಂತರ ಸತ್ಯ ಗೊತ್ತಾಗುತ್ತಿದ್ದಂತೆ ಒಂದು ಕ್ಷಣ ಶಾಕ್!

    ವಯಸ್ಸಾದ ಅಜ್ಜಿಯನ್ನು ಪೊಲೀಸರು ಅರೆಸ್ಟ್ ಮಾಡಲು ಕಾರಣವೇನು ಈ ಮಹಿಳೆ ಯಾರು ಎಂಬುದನ್ನು ತಿಳಿಯೋಣ? ಈ ನ್ಯೂಸ್ ಪ್ರಚಾರವಾಗಿರುವುದು ಗ್ರೇಟರ್ ನೋಯಿಡಾದಿಂದ. ಉತ್ತರ ಪ್ರದೇಶದ ಸರ್ಕಾರ ಅಲ್ಲಿ ಬಿಕ್ಷೆ ಬೇಡುತ್ತಿದ್ದ ಪ್ರತಿಯೊಬ್ಬರನ್ನು ವಶಕ್ಕೆ ಪಡೆದು ಕೈ ಕಾಲು ಗಟ್ಟಿ ಇರುವವರಿಗೆ ಚಿಕ್ಕ ಪುಟ್ಟ ಕೆಲಸಕ್ಕೆ ನಿರ್ಧಾರ ಹಾಗೂ ವಯಸ್ಸಾದವರನ್ನು ವೃದ್ರಾಶ್ರಮಗಳಿಗೆ ಒದಗಿಸುವ ನಿರ್ಧಾರವನ್ನು ಕೈಗೊಂಡಿತ್ತು ಅದಕ್ಕಾಗಿ ಅಲ್ಲಿ ಪ್ರತಿಯೊಬ್ಬರನ್ನು ತಮ್ಮ ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಾರೆ. ಅಲ್ಲಿ ಇದ್ದ ಭಿಕ್ಷುಕರ ನಡುವೆ ಒಬ್ಬ 86 ವರ್ಷದ ಅಜ್ಜಿ…

  • ಸಿನಿಮಾ

    3 ತಿಂಗಳೊಳಗೆ ಮನೆ ಖಾಲಿ ಮಾಡುವಂತೆ, ನಟ ಯಶ್’ಗೆ ಕೋರ್ಟ್ ಆದೇಶ.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ..

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರಿಗೆ, ಮನೆ ಖಾಲಿ ಮಾಡುವಂತೆ 42ನೇ ಸಿಟಿ ಸಿವಿಲ್ ಕೋರ್ಟ್ ಆದೇಶಸಿದೆ. ಹೌದು, ನಟ ಯಶ್ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ, ಕೋರ್ಟ್ 3 ತಿಂಗಳೊಳಗೆ ಮನೆ ಖಾಲಿ ಮಾಡಲು ಸೂಚನೆ ನೀಡಿದೆ. ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ…

  • ಸುದ್ದಿ

    ವರದಕ್ಷಿಣೆ ಬೇಡವೆಂದ ಹೇಳಿದ ವರನಿಗೆ ಸಿಕ್ಕಿತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ…!

    ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ…

  • ಆರೋಗ್ಯ

    ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾದ ಪೋಷಕಾಂಶಗಳಿವೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.