ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.
1.ಗಡಿಬಿಡಿಯಲ್ಲಿ ಶಾಪಿಂಗ್ ಖಂಡಿತ ಮಾಡ್ಬೇಡಿ:-
ಅಯ್ಯೋ ಟೈಂ ಇಲ್ಲ.. ಬೇಗ ಹೋಗ್ಬೇಕು ಅಂದುಕೊಂಡು ಎಂದೂ ಶಾಪಿಂಗ್ ಮಾಡ್ಬೇಡಿ. ಇಂತ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಡಿಸೈನ್‍ಗಳನ್ನ ನೋಡದೆ ಮೊದಲು ಅಂಗಡಿಗೆ ಹೋದಾಗ ಯಾವುದು ಕಣ್ಣಿಗೆ ಚೆನ್ನಾಗಿ ಕಾಣುತ್ತೋ ಅದನ್ನೇ ಕೊಂಡುಕೊಳ್ತೀವಿ.
ಆದ್ರೆ ಇನ್ನೂ ಸ್ವಲ್ಪ ಸಮಯ ಹುಡುಕಿದ್ರೆ ಅದಕ್ಕಿಂತ ಚೆಂದದ ಡಿಸೈನ್‍ವುಳ್ಳ ಬಟ್ಟೆ ಸಿಗಬಹುದು.
2.ಟ್ರಯಲ್ ಮಾಡದೆ ಪರ್ಚೇಸ್ ಮಾಡ್ಬೇಡಿ:-
ಕಣ್ಣಿಗೆ ಚೆಂದವಾಗಿ ಕಂಡ ಬಟ್ಟೆಯನ್ನ ಧರಿಸಿ ನೋಡಿದಾಗ ಅದು ನಿಮಗೆ ಸೂಟ್ ಆಗದಿರಬಹುದು. ಅಥವಾ ಫಿಟಿಂಗ್‍ನಲ್ಲಿ ವ್ಯತ್ಯಾಸವಿರುವ ಸಾಧ್ಯತೆಯೂ ಇರುತ್ತದೆ.
ಹೀಗಾಗಿ ಯಾವಾಗ್ಲೂ ಟ್ರಯಲ್ ನೋಡಿಯೇ ಬಟ್ಟೆ ಖರೀದಿ ಮಾಡಿ. ಅದರಲ್ಲೂ ವಿವಿಧ ಬ್ರ್ಯಾಂಡ್‍ಗಳ ಜೀನ್ಸ್ ಮತ್ತು ಟಾಪ್‍ಗಳ ಸೈಜ್‍ನಲ್ಲಿ ವ್ಯತ್ಯಾಸವಿರುತ್ತದೆ.
3.ಒಂದೇ ಡಿಸೈನ್‍ನಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆ ತಗೋಬೇಡಿ:-
ಒಂದು ಟೀ ಶರ್ಟ್/ಟಾಪ್/ಪ್ಯಾಂಟ್ ಇಷ್ಟವಾದ್ರೆ ಅದೇ ಡಿಸೈನ್‍ನಲ್ಲಿ ಮೂರ್ನಾಲ್ಕು ವಿವಿಧ ಬಣ್ಣದ ಟೀ-ಶರ್ಟ್/ಟಾಪ್ ತೆಗೆದುಕೊಳ್ಳೋದನ್ನ ಮಾಡ್ಬೇಡಿ. ಸಾಕಷ್ಟು ವೆರೈಟಿಯ ಡಿಸೈನ್‍ಗಳು ಇರುವಾಗ ಒಂದೇ ಡಿಸೈನ್‍ಗೆ ಅಂಟಿಕೊಳ್ಳೋದು ಯಾಕೆ?
4.ನಿಮಗೆ ಫಿಟ್ ಆಗದ ಬಟ್ಟೆಯನ್ನ ಅಲ್ಲೇ ಬಿಡಿ:-
ಅಯ್ಯೋ ಈ ಟಾಪ್ ಎಷ್ಟೊಂದು ಚೆನ್ನಾಗಿದೆ… ಆದ್ರೆ ನನಗೆ ಸ್ವಲ್ಪ ಟೈಟ್ ಆಗ್ತಿದೆ… ಪರ್ವಾಗಿಲ್ಲ, ಮುಂದೆ ಸಣ್ಣ ಆಗ್ತೀನಿ…. ಎಂತೆಲ್ಲಾ ಅಂದುಕೊಂಡು ನಿಮಗೆ ಫಿಟ್ ಆಗದಿರುವ ಬಟ್ಟೆಯನ್ನ ಖರೀದಿಸಬೇಡಿ. ತುಂಬಾ ಇಷ್ಟವಾದ ಬಟ್ಟೆ ಸ್ವಲ್ಪ ಇದ್ದು, ನಿಮ್ಮ ಸೈಜ್ ನಲ್ಲಿ ಲಭ್ಯವಿಲ್ಲದಿದ್ರೆ ಅದನ್ನ ಟೈಲರ್ ಬಳಿ ಕೊಟ್ಟು ಫಿಟ್ ಮಾಡಿಸಿಕೊಳ್ಳಬಹುದು.
5.ಸೇಲ್ ಇದ್ದಾಗ ಶಾಪಿಂಗ್ ಹೋಗಿ:-
ಹೊಸ ಡಿಸೈನ್‍ನ ಬಟ್ಟೆಗಳ ಬೆಲೆ ತುಂಬಾ ದುಬಾರಿ ಎನಿಸಿದ್ರೆ ಸ್ವಲ್ಪ ಕಾಯಿರಿ. ಸ್ವಲ್ಪ ಸಮಯದ ನಂತರ ಡಿಸ್ಕೌಂಟ್ ಸೇಲ್ ಹಾಕಿದಾಗ ಅದೇ ಬಟ್ಟೆ ಕಡಿಮೆ ಬೆಲೆ/ ಅರ್ಧ ಬೆಲೆಗೂ ಸಿಗಬಹುದು. ಹಾಗಂತ ಎಲ್ಲಾ ಬಟ್ಟೆಗಳು ಸೇಲ್‍ನಲ್ಲಿ ಬರುತ್ತವೆ ಅಂದ್ಕೋಬೇಡಿ. ಇಂತದ್ದೊಂದು ಜಾಕೇಟ್ ಖರೀದಿಸಬೇಕು ಅಂದ್ಕೊಂಡು ಅದು ತುಂಬಾ ದಿನಗಳ ನಂತರ ಸಿಕ್ಕರೆ ಅದನ್ನ ಆಗಲೇ ಖರೀದಿಸಿದ್ರೆ ಉತ್ತಮ. ಸಾಮಾನ್ಯವಾಗಿ ಸಿಗೋ ಉಡುಪುಗಳಾದ್ರೆ ಸೇಲ್ ಹಾಕಿದಾಗಲೇ ಖರೀದಿ ಮಾಡಿ.
6.ಫ್ರೆಂಡ್‍ಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೇ ಇರಬೇಡಿ:-
ನಿಮ್ಮ ಸ್ಟೈಲ್ ಅಥವಾ ಟೇಸ್ಟ್ ನಿಮ್ಮ ಸ್ನೇಹಿತರಿಗೆ ಇಷ್ಟವಾಗದಿರಬಹುದು. ಅಥವಾ ನೀವು ಆರಿಸಿದ ಬಟ್ಟೆ ಚೆನ್ನಾಗಿಲ್ಲ ಅಂತಲೂ ಅವರು ಹೇಳಿಬಿಡಬಹುದು. ಆದ್ರೆ ಆ ಬಟ್ಟೆಯನ್ನ ಯಾವ ರೀತಿ ಸ್ಟೈಲ್ ಮಾಡಬೇಕು , ಯಾವುದರೊಂದಿಗೆ ಮ್ಯಾಚ್ ಮಾಡಿ ಹಾಕೋಬೇಕು ಅನ್ನೋದು ಅವರಿಗಿಂತ ಚೆನ್ನಾಗಿ ನಿಮಗೆ ಗೊತ್ತಿರುತ್ತದೆ. ಹೀಗಾಗಿ ಗೆಳೆಯ/ ಗೆಳತಿಗೆ ಇಷ್ಟವಾಗ್ಲಿಲ್ಲ ಅಂತ ನೀವು ಇಷ್ಟಪಟ್ಟಿದ್ದನ್ನ ಖರೀದಿಸದೆ ಇದ್ರೆ ನಿಮಗೇ ಲಾಸ್. ಸ್ನೇಹಿತರಿಗಿಂತ ನಿಮ್ಮ ಟೇಸ್ಟ್ ಭಿನ್ನವಾಗಿದ್ರೆ ಒಬ್ಬರೇ ಶಾಪಿಂಗ್ ಮಾಡಲು ಹೋಗಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಾನ್ ಕಾರ್ಡ್ಗೆ ಆಧಾರ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, 30 ಸೆಪ್ಟೆಂಬರ್ 2019 ಇದಕ್ಕೆ ಕೊನೆಯ ದಿನವಾಗಿದೆ. ಆಧಾರ್ ಜೊತೆ ಪಾನ್ ಕಾರ್ಡ್ ಅನ್ನು ನೀವೇ ಲಿಂಕ್ ಮಾಡಿಕೊಳ್ಳಲು ಇಲ್ಲಿದೆ ಎರಡು ಸುಲಭದ ಉಪಾಯ. ಮೊದಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ, ‘ಲಿಂಕಿಂಗ್ ಆಧಾರ್’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ವಿಂಡೋ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಜನ್ಮ ದಿನಾಂಕ ಇತ್ಯಾದಿ ಮಾಹಿತಿ…
ಜನ ಸೇವೆಗೆಂದು ತೆರೆಯುವ ಆಸ್ಪತ್ರೆಗಳು ಈಗ ತೀರಾ ವಿರಳ. ಯಾವುದಾದರು ಕಾಯಿಲೆ ಎಂದು ಖಾಸಗಿ ಆಸ್ಪತ್ರೆಗೆ ಸೇರಿದರೆ ರೋಗಿಯು, ರೋಗದಿಂದಲ್ಲ, ಆಸ್ಪತೆರ್ಗಳು ನೀಡುವ ಬಿಲ್ಲಿನಿಂದ ಸಾಯುತ್ತಾನೆ. ಇನ್ನು ಆಸ್ಪತ್ರೆ ಯಾವ ರೀತಿ ವ್ಯವಹಾರ ಮಾಡುತ್ತಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…
ದೇಹ ಒಬ್ಬನದ್ದು, ತಲೆ ಮತ್ತೂಬ್ಬನದ್ದು! ಈ ರೀತಿ ಸಿನಿಮಾದಲ್ಲಿ ನೀವು ನೋಡಿರುತ್ತಿರಿ ಅಲ್ಲವೇ…?ಎಲ್ಲ ಅಂದುಕೊಂಡಂತೆ ಆದರೆ,ಒಬ್ಬ ಮನುಷ್ಯನ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಜೋಡಿಸಬಹುದಂತೆ.. ಆಶ್ಚರ್ಯವಾಯಿತೇ…?ಮುಂದೆ ಓದಿ.. ಇದೇ ಮೊದಲ ಬಾರಿಗೆ ಅಂತಹುದೊಂದು ಪ್ರಯತ್ನ ನಡೆಯಲಿದೆ. ಮಾನವನ ತಲೆಯನ್ನೇ ಕಸಿ ಮಾಡಿ, ಮತ್ತೂಬ್ಬನ ದೇಹಕ್ಕೆ ಕೂರಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಮುನ್ನುಡಿಯೆಂಬಂತೆ, ಒಂದು ಇಲಿಯ ದೇಹಕ್ಕೆ ಮತ್ತೂಂದು ಇಲಿಯ ತಲೆಯನ್ನು ಕಸಿ ಮಾಡಲಾಗಿದೆ. ಹೌದು. ಚೀನದ ವಿಜ್ಞಾನಿಗಳು ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಮಾನವನ ಮೇಲೆ ನಡೆಯುವ…
ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.
ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….