ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.ಇತ್ತೀಚೆಗೆ ಸಮೀರಾ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದು, ಸಮೀರಾ ಅಂಡರ್ವಾಟರ್ ಫೋಟೋಶೂಟ್ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಮೀರಾ, “ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಆನಂದಿಸಿದ್ದೇನೆ. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್ಗಳಲ್ಲಿ ಇದು ಒಂದಾಗಿದೆ. ನಾನು ಕೆಲವೇ ಸಮಯದಲ್ಲಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇದು ಒಳ್ಳೆಯ ಅನುಭವ” ಎಂದು ಹೇಳಿದ್ದಾರೆ.
ಸಮೀರಾ ಫೋಟೋ ನೋಡಿ ಕೆಲವರು, ನೀವು ಈ ಫೋಟೋದಲ್ಲಿ ಸೂಪರ್ ಕೂಲ್ ಆಗಿ ಕಾಣಿಸುತ್ತಿದ್ದೀರಾ ಎಂದು ನಿಮಗೆ ಅನಿಸಿರಬಹುದು. ಆದರೆ ಪ್ರೆಗ್ನೆನ್ಸಿ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವ ಅವಶ್ಯಕತೆ ಆದರೂ ಏನಿತ್ತು. ದಯವಿಟ್ಟು ಹುಷಾರಾಗಿರಿ. ಮಕ್ಕಳು ದೇವರು ಕೊಟ್ಟ ಉಡುಗೊರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ನಿಮಗೆ ತಲೆ ಕೆಟ್ಟಿದ್ದೀಯಾ ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ಸಮೀರಾ ಅವರ ಈ ಫೋಟೋಗಳಿಗೆ ಯಾವುದೇ ಫಿಲ್ಟರ್ ಅಥವಾ ಫೋಟೋಶಾಪ್ ಮಾಡಲಿಲ್ಲ. ಈ ಫೋಟೋಗಳು ಸುಂದರವಾಗಿ ಬಂದಿದ್ದು, ಇದರಿಂದ ಸಮೀರಾ ಖುಷಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಈ ಫೋಟೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಸಿಟಿಯ ಒಂದಿಲ್ಲೊಂದು ರೀತಿಯಾಗಿ ಈ ಡೇರಿ ಪ್ರಾಡಕ್ಟ್ಸ್ ನ ಬಳಸುತ್ತಲೇ ಇರುತ್ತೇವೆ, ಅದು ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.
ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 2018ರ ಕ್ರಿಕೆಟ್ ಚಾಂಪಿಯನ್ಶಿಪ್ನ ಸಂಪೂರ್ಣ ವೇಳಾಪಟ್ಟಿ ನಿಮಗಾಗಿ ಇಲ್ಲಿದೆ.ಈ ಸಲದ ಚಾಂಪಿಯನ್ಶಿಪ್ನಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಆ ತಂಡಗಳ ಪಟ್ಟಿಯನ್ನು ನೀವೂ ನೋಡಬಹುದು. ಭಾಗವಹಿಸುವ ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್, ರಾಜಸ್ತಾನ ರಾಯಲ್ಸ್. ಸೂಚನೆ:- ಪಂದ್ಯಗಳ ದಿನಾಂಕ ಮತ್ತು ನಿಗದಿತ ಸ್ಥಳಗಳು ಐಪಿಎಲ್ ಸೂಚನೆಯಂತೆ ಬದಲಾಗುವ ಸಾಧ್ಯತೆಗಳು ಇರುತ್ತವೆ.
ರಾಧಿಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು . ಅಕ್ಟೋಬರ್ ಮೊದಲ ವಾರದಲ್ಲಿ ಅವರ ಮನೆಗೆ ತುಂಟ ಕೃಷ್ಣನೋ ಅಥವಾ ಮಹಾಲಕ್ಷ್ಮೀಯೋ ಬರುತ್ತಾರೆ. ಇತ್ತೀಚೆಗಷ್ಟೇ ಯಶ್ ಮಗಳ ಜೊತೆಗಿನ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋದಲ್ಲಿ ಆಯ್ರಾ ಕ್ಯಾಮೆರಾ ನೋಡಿ, ತಂದೆ ಯಶ್ ಹೇಳಿಕೊಟ್ಟಂತೆ ಟಾಟಾ ಮಾಡುತ್ತಿದ್ದಳು. ಇವಳ ಚೂಟಿತನ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಸ್ಯಾಂಡಲ್ವುಡ್ನ ಬೆಸ್ಟ್ಬ್ಯೂಟಿಫುಲ್ ದಂಪತಿ ಯಶ್ ಹಾಗೂರಾಧಿಕಾ ಪಂಡಿತ್. ಮದುವೆಯ ನಂತರದಲ್ಲಿರಾಧಿಕಾ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.ಯಶ್ ‘ಕೆಜಿಎಫ್ 2’ ಸಿನೆಮಾದಲ್ಲಿ ಬಿಜಿಯಿದ್ದಾರೆ. ಇವರಿಬ್ಬರಿಗೂ ಮುದ್ದಾದ ಆಯ್ರಾ ಎಂಬಮಗಳಿರೋದು ಗೊತ್ತೇ ಇದೆ. ಆಗಾಗದಂಪತಿ…
ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ… ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.
ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್ ಹೈಪರ್ಲೂಪ್ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್ ಸಮ್ಮಿಟ್ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವರ್ಜಿನ್ ಹೈಪರ್ಲೂಪ್ ಒನ್ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.