ಸುದ್ದಿ

ಪ್ಲಾಸ್ಟಿಕ್ ಬಾಟಲ’ಗಳನ್ನು ಬಿಸಾಡ್ತೀರಾ.!ನೋಡಿ ಇವರು ಈ ವೇಸ್ಟ್ ಬಾಟಲ’ಗಳಿಂದಲೇ ಮನೆ ಕಟ್ಟಿದ್ದಾರೆ..ಹೇಗೆ ತಿಳಿಯಲು ಈ ಲೇಖನ ಓದಿ…

276

ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪರಿಸರ ಮತ್ತು ವನ್ಯಜೀವಿಗಳಿಗೆ ಹೇಗೆ ಹಾನಿಕಾರಕವೆಂದು ನಮಗೆ ತಿಳಿದಿದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು 450 ವರ್ಷಗಳು ತೆಗೆದುಕೊಳ್ಳುತ್ತದೆ, ಆದ್ದರಿಂದ ಈ ಜನರು ತಿರಸ್ಕರಿಸಿದ ಪ್ಲಾಸ್ಟಿಕ್ ಬಾಟಲಿಗಳ “ಉತ್ತಮ” ಬಳಕೆಯನ್ನು ಕಂಡುಕೊಂಡಿದ್ದಾರೆ.

ನಾವು ವಿಶೇಷವಾಗಿ ಕುಡಿಯುವ ನೀರಿಗೆಂದೇ ಬಳಸುವ ಬಾಟಲಿಗಳನ್ನು ಬಳಸಿದ ನಂತರ ಬಿಸಾಡುತ್ತೇವೆ ಆದರೆ ಇಲ್ಲಿನ ಜನರು ಹಾಗಲ್ಲ ನಮ್ಮ ಮಣ್ಣಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಾಟಲಿ ಗಳಿಂದ ಮನೆಗಳನ್ನು ನಿರ್ಮಿಸಿ, ಒಂದು ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದಾರೆ!

ನೈಜೀರಿಯಾದಲ್ಲಿ, ಮನೆಗಳನ್ನು ಕಟ್ಟಲು ಮರಳು ತುಂಬಿದ ಸಾವಿರಾರು ಪ್ಲಾಸ್ಟಿಕ್ ಬಾಟಲಿಗಳನ್ನು ಜನರು ಬಳಸುತ್ತಿದ್ದಾರೆ. ಈ ಮನೆಗಳಿಂದ ಅಲ್ಲಿಯ ಜನರು  ಹಲವು ಪ್ರಯೋಜನ ಪಡೆಯುತ್ತಿದ್ದರೆ, ಈ ಮನೆಗಳು ಈಗ ಬುಲೆಟ್ ಪ್ರೂಫ್, ಬೆಂಕಿ ಸಾಕ್ಷಿ, ಮತ್ತು ಭೂಕಂಪದ ಪ್ರೂಫ್ ಆಗಿ ನಿರ್ಮಾಣಗೊಂಡಿವೆ.

ನಿರ್ಮಾಣ ಮಾಡೋದಾದ್ರೂ ಹೇಗೆ ಗೊತ್ತಾ..?

ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ  ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು  ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.

ಒಂದು ರೂಮನ್ನು ನಿರ್ಮಿಸಲು ಸುಮಾರು ಎರಡು ಸಾವಿರ ಬಾಟಲಿಗಳು, ಎರಡು-ಮಲಗುವ ಕೋಣೆಗಳನ್ನು ನಿರ್ಮಿಸಲು ಸುಮಾರು.14000ಬಾಟಲಿಗಳ ಅಗತ್ಯವಿದೆ, ಇದು ಮನೆಗಳನ್ನು ಪರಿಸರ ಸ್ನೇಹಿಯಾಗಿ ಮಾಡಿದೆ- ಇತ್ತೀಚಿನ ವರದಿಯ ಪ್ರಕಾರ ನೈಜೀರಿಯಾದಲ್ಲಿ ಪ್ರತಿದಿನ ಸುಮಾರು ಮೂರು ದಶಲಕ್ಷ ಬಾಟಲಿಗಳನ್ನು ಎಸೆಯುತ್ತಿದ್ದರಂತೆ.

ಇಲ್ಲಿಯ ಜನ ಇದಕ್ಕೆ ಮಾರು ಹೋಗಲು ಮತ್ತೊಂದು ಕಾರಣವೂ ಇದೆ ಅದೇನೆಂದರೆ ಬಾಟಲಿಗಳಲ್ಲಿರುವ ಮರಳು ಕೊಠಡಿ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನೈಜೀರಿಯಾದಂತಹ ತೀವ್ರ ತಾಪಮಾನ ಹೊಂದಿದ ದೇಶಗಳಿಗೆ ಬಹಳ ಸಹಕಾರಿಯಾಗಿದೆ.

ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪರಿಸರ ಮತ್ತು ವನ್ಯಜೀವಿಗಳಿಗೆ ಹೇಗೆ ಹಾನಿಕಾರಕವೆಂದು ನಮಗೆ ತಿಳಿದಿದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು 450 ವರ್ಷಗಳು ತೆಗೆದುಕೊಳ್ಳುತ್ತದೆ, ಆದ್ದರಿಂದ ಈ ಜನರು ತಿರಸ್ಕರಿಸಿದ ಪ್ಲಾಸ್ಟಿಕ್ ಬಾಟಲಿಗಳ “ಉತ್ತಮ” ಬಳಕೆಯನ್ನು ಕಂಡುಕೊಂಡಿದ್ದಾರೆ.

ವಿಶೇಷವಾಗಿ ಕುಡಿಯುವ ನೀರಿಗೆಂದೇ ಬಳಸುವ ಬಾಟಲಿಗಳನ್ನು ಬಳಸಿದ ನಂತರ ಬಿಸಾಡುತ್ತೇವೆ ಆದರೆ ಇಲ್ಲಿನ ಜನರು ಹಾಗಲ್ಲ ನಮ್ಮ ಮಣ್ಣಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಾಟಲಿ ಗಳಿಂದ ಮನೆಗಳನ್ನು ನಿರ್ಮಿಸಿ, ಒಂದು ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದಾರೆ.

ನೈಜೀರಿಯಾದಲ್ಲಿ, ಮನೆಗಳನ್ನು ಕಟ್ಟಲು ಮರಳು ತುಂಬಿದ ಸಾವಿರಾರು ಪ್ಲಾಸ್ಟಿಕ್ ಬಾಟಲಿಗಳನ್ನು ಜನರು ಬಳಸುತ್ತಿದ್ದಾರೆ. ಈ ಮನೆಗಳಿಂದ ಅಲ್ಲಿಯ ಜನರು  ಹಲವು ಪ್ರಯೋಜನ ಪಡೆಯುತ್ತಿದ್ದರೆ, ಈ ಮನೆಗಳು ಈಗ ಬುಲೆಟ್ ಪ್ರೂಫ್, ಬೆಂಕಿ ಸಾಕ್ಷಿ, ಮತ್ತು ಭೂಕಂಪದ ಪ್ರೂಫ್ ಆಗಿ ನಿರ್ಮಾಣಗೊಂಡಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ