ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ ಈವರೆಗೂ ಮೊದಲ ವರ್ಷದ ಬಡ್ಡಿ ದರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?
ಯೋಜನೆಗೆ ಯಾರು ಅರ್ಹರು? ತಿಂಗಳಿಗೆ ರೂ. 15,000ವರೆಗೆ ಗಳಿಸುವ ಅಸಂಘಟಿತ ವಲಯದ ಕಾರ್ಮಿಕರು- 18 ಮತ್ತು 40 ವರ್ಷ ವಯಸ್ಸಿನ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು.- 60 ವರ್ಷ ವಯಸ್ಸಿನ ನಂತರ 3,000 ರೂ. ಮಾಸಿಕ ಪಿಂಚಣಿ ಪಡೆಯುತ್ತಾರೆ- ಮಾಸಿಕ ಕೊಡುಗೆ ಮೊತ್ತವನ್ನು ವಯಸ್ಸಿನ ಆಧಾರದ ಮೇಲೆ 60 ವಯಸ್ಸಿನವರೆಗೆ ಪಾವತಿಸಬೇಕು. – ಗೃಹಾಧಾರಿತ ಕಾರ್ಮಿಕರು, ಬೀದಿ ಮಾರಾಟಗಾರರು, ಮಿಡ್ ಡೇ ಮೀಲ್ ಕಾರ್ಮಿಕರು, ಹೆಡ್ ಲೋಡರ್, ಇಟ್ಟಿಗೆ ಕೆಲಸಗಾರರು, ಚಮ್ಮಾರರು,ಸ್ಥಳೀಯ ಕಾರ್ಮಿಕರು, ಬಟ್ಟೆ ತೊಳೆಯುವವರು, ರಿಕ್ಷಾ, ಭೂಮಿರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಆಡಿಯೋ-ದೃಶ್ಯ ಕೆಲಸಗಾರರು ಮತ್ತು ಇದೇ ರೀತಿಯ ಇತರ ತೊಡಗಿರುವ ಅಸಂಘಟಿತ ಕಾರ್ಮಿಕರು.
ವಯಸ್ಸು ಆಧಾರಿತ ಪಿಂಚಣಿ
ಒಂದು ಜೀವನ ಮಾದರಿಯ ಮೂಲಕ ನೋಡೋಣ. ಅಧಿಸೂಚನೆಯ ಪ್ರಕಾರ, 30 ರ ವಯಸ್ಸಿನವರು ತಿಂಗಳಿಗೆ 105 ರೂಪಾಯಿ 60 ರ ವರೆಗೆ ಪಾವತಿಸಬೇಕಾಗುತ್ತದೆ. ಒಟ್ಟಾರೆಯಾಗಿ, ವ್ಯಕ್ತಿಯು ರೂ. 37,800 (105×12=1260, 1260×30=37,800) ಹಣ ಪಾವತಿಸಿದರೆ ಅಷ್ಟೇ ಮೊತ್ತವನ್ನು ಸರ್ಕಾರ ಭರಿಸಲಿದೆ. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ನೆರೆಹೊರೆಯಲ್ಲಿ ಈ ಯೋಜನೆಯನ್ನು ಲಾಭ ಪಡೆಯಲು ಮಾಹಿತಿ ನೀಡಬಹುದು. ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?
ರೂ. 55 ಮಾಸಿಕ ಕೊಡುಗೆ
18 ರಿಂದ 40 ವರ್ಷ ವಯಸ್ಸಿನೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ.
ವೈಶಿಷ್ಟ್ಯ, ಅರ್ಹತೆ ಮತ್ತು ಅನುಕೂಲ
ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದೆ. ಪಿಂಚಣಿ ಸ್ವೀಕೃತಿಯ ಸಂದರ್ಭದಲ್ಲಿ, ಚಂದಾದಾರರು ತೀರಿಕೊಂಡರೆ ಫಲಾನುಭವಿಗಳ ಸಂಗಾತಿಯು ಕುಟುಂಬದ ಸದಸ್ಯರಾಗಿ ಫಲಾನುಭವಿ ಪಡೆಯುವ 50% ಪಿಂಚಣಿ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಕುಟುಂಬದ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಗಮನಿಸಬಹುದು.ಒಬ್ಬ ಫಲಾನುಭವಿ ನಿಯಮಿತ ಕೊಡುಗೆ ನೀಡುತ್ತಿದ್ದು, ಯಾವುದೇ ಕಾರಣದಿಂದಾಗಿ ಅಂದರೆ 60 ವರ್ಷಕ್ಕೆ ಮುಂಚಿತವಾಗಿ ಮರಣಿಸಿದರೆ, ಅವನ / ಅವಳ ಸಂಗಾತಿಯು ನಿಯಮಿತ ಕೊಡುಗೆಗಳನ್ನು ಪಾವತಿಸುವ ಮೂಲಕ ಯೋಜನೆಗೆ ಸೇರಲು ಅಥವಾ ಮುಂದುವರಿಸಲು ಅರ್ಹರಾಗಿರುತ್ತಾರೆ. (Source: labour.gov.in/pm-sym)
ಸ್ವಯಂ ಪಾವತಿ (auto-debit)
PM-SYM ಯೋಜನೆಯ ಚಂದಾದಾರರು ಕೊಡುಗೆಗಳನ್ನು ತನ್ನ ಉಳಿತಾಯ ಬ್ಯಾಂಕ್ ಖಾತೆಯಿಂದ ಅಥವಾ ಜನ್ ಧನ್ ಖಾತೆಯಿಂದ ‘ಸ್ವಯಂ-ಡೆಬಿಟ್’ ಸೌಲಭ್ಯದ ಮೂಲಕ ಪಾವತಿ ಮಾಡಬೇಕಾಗುತ್ತದೆ. ಸೇರಿದ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೂ ನಿಗದಿತ ಮೊತ್ತವನ್ನು ಚಂದಾದಾರರು ಪಾವತಿಸುತ್ತಾ ಹೋಗಬೇಕಾಗುತ್ತದೆ.
ಸರ್ಕಾರದ ಸಮಾನ ಕೊಡುಗೆ
ಈ ಯೋಜನೆ ಇನ್ನೊಂದು ವಿಶೇಷತೆಯೆಂದರೆ ಫಲಾನುಭವಿ ಕೊಡುಗೆ ಜೊತೆಗೆ ಸಮಾನ ಪ್ರಮಾಣದ ಮೊತ್ತವನ್ನು ಕೇಂದ್ರ ಸರ್ಕಾರವು ನೀಡುತ್ತದೆ. ಉದಾಹರಣೆಗೆ, ಫಲಾನುಭವಿಯು ತನ್ನ 20 ವರ್ಷ ವಯಸ್ಸಿನಲ್ಲಿ ಈ ಯೋಜನೆಯನ್ನು ಪಾರಂಭಿಸಿದರೆ, ಅವನು ಅಥವಾ ಅವಳು 60 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ. 61 ಹಣವನ್ನು ನೀಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಕೂಡ ಇಷ್ಟೇ ಪ್ರಮಾಣದ ಸಮಾನ ಮೊತ್ತವನ್ನು ರೂ. 61 ಪ್ರತಿ ತಿಂಗಳು ಭರಿಸುತ್ತದೆ. ಆದ್ದರಿಂದ, ಒಂದು ತಿಂಗಳಲ್ಲಿ ಪ್ರತಿ ವ್ಯಕ್ತಿಯ ಒಟ್ಟು ಕೊಡುಗೆ ರೂ. 122 ಆಗಿರುತ್ತದೆ.
ಕನಿಷ್ಠ 3,000 ಪಿಂಚಣಿ
http://pmjandhanyojana.co.in ಪ್ರಕಾರ, ಈ ಯೋಜನೆ ಪ್ರಾಥಮಿಕವಾಗಿ ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ಯೋಜನೆಯಾಗಿದೆ ಎಂದು ಗಮನಿಸಬಹುದು. 2016 ರ ಫೆಬ್ರವರಿಯಲ್ಲಿ ಪಿಯೂಶ್ ಗೋಯಲ್ ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದ ಕಾರ್ಮಿಕರ ಉದ್ದೇಶಿತ ಫಲಾನುಭವಿಗಳಾಗಿ ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ರೂ. 3,000 ಪಿಂಚಣಿ ಒದಗಿಸುತ್ತದೆ. ಮಾತೃಶ್ರೀ ಯೋಜನೆ: ರೂ. 12 ಸಾವಿರ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳೆಯರು ಹೆಚ್ಚಾಗಿ ಬಿಸಿಲಿಗೆ ಹೋಗುವಾಗ ಲೋಷನ್ ಹಚ್ಚಿಕೊಂಡು ಹಾಗೂ ಮುಖಕ್ಕೆ ಸ್ಕರ್ಫ್ಕ ಕಟ್ಟಿಕೊಂಡು ಹೋಗುತ್ತಾರೆ. ಹೀಗೆ ನಾವು ಕವರ್ ಮಡಿದ ಜಾಗವನ್ನ ಬಿಟ್ಟು ಬೇರೆ ಎಲ್ಲಾಕಡೆ ಸೂರ್ಯನ ಕಿರಣಗಳಿಂದ ನಮ್ಮ ಚರ್ಮ ಸುಟ್ಟು ಕಪ್ಪಾಗಿರುತ್ತದೆ. ಹೀಗೆ ಟ್ಯಾನ್ ಆಗಿರುವುದನ್ನ ತೆಗೆದು ಹಾಕಲು ನೀವು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳಬಹುದು.
ಕನ್ನಡದ ಅದ್ದೂರಿ ಚಿತ್ರ KGF ಚಿತ್ರದ ಬಿಡುಗಡೆಗೆ ಕಾದಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಸ್ವತಃ ನಟಿ ರಾಧಿಕಾ ಪಂಡಿತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವ ಒಂದಾದರೆ, ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ…
ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂಗ ಎಂದರೆ ಅದು ಮೆದುಳು. ಮೆದುಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಆತ ಬುದ್ಧಿವಂತನಾಗುತ್ತಾನೆ, ಅಥವಾ ಆತ ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ಹೇಳಬಹುದು. ಹಾಗಾದ್ರೆ ನಮ್ಮ ಮೆದುಳಿಗೆ ತೊಂದರೆ ಉಂಟು ಮಾಡುವ ಹತ್ತು ಹವ್ಯಾಸಗಳನ್ನು ತಿಳಿಯೋಣ..
ಭಾರತ ದೇಶವನ್ನು ತನ್ನ ಕೈ ಬೆರಳುಗಳಿಂದಲೇ ಶಾಸಿಸುವಷ್ಟು ಶಕ್ತಿ ಇರುವ ದಿಗ್ಗಜ, ರಿಲಯೆನ್ಸ್ ಅಧಿನೇತ ಮುಖೇಶ್ ಅಂಬಾನೀ ಪುತ್ರ ಆಕಾಶ್ ಅಂಬಾನೀ ವಿವಾಹ ಇಷ್ಟರಲ್ಲೇ ಜರುಗಲಿದೆ.