ಕರ್ನಾಟಕ

ಪ್ರತ್ತ್ಯೇಕ ನಾಡ ಧ್ವಜ ಕುರಿತು ಸಂವಿಧಾನದಲ್ಲಿ ಏನು ಹೇಳಲಾಗಿದೆ ಗೊತ್ತಾ ???

2297

ಈಗ ಎಲ್ಲಾ ಕಡೆ  ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೆ ನಮ್ಮ  ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಕುರಿತು ಏನು ಹೇಳಲಾಗಿದೆ? ಭಾರತದ ಯಾವ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲವೇ?

ನಾವು ಮೊದಲು ಕರ್ನಾಟಕ ಧ್ವಜದ ಹಿನ್ನೆಲೆ ತಿಳಿಯೋಣ:-


1950ರಲ್ಲಿ ಭಾರತ ಗಣರಾಜ್ಯವಾಯಿತು. ಈ ವೇಳೆ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಸುದೀರ್ಘ ಹೋರಾಟದಿಂದ 1956ರಲ್ಲಿ ಕರ್ನಾಟಕದ ಏಕೀಕರಣವಾಯ್ತು. ಮದ್ರಾಸ್, ಹೈದರಾಬಾದ್, ಮುಂಬೈ ಭಾಗದ ಕನ್ನಡ ಮಾತನಾಡೋ ಪ್ರಾಂತ್ಯಗಳೆಲ್ಲಾ ಸೇರಿ `ಮೈಸೂರು ರಾಜ್ಯ’ ಉದಯವಾಯಿತು. ನಂತರ 1973ರಲ್ಲಿ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೇ ಮೈಸೂರು ಭಾಗಗಳನ್ನುಮೈಸೂರಿಗೆ `ಕರ್ನಾಟಕ’ ಅಂತ ಮರುನಾಮಕರಣ ಮಾಡಲಾಯಿತು. 1960ರಲ್ಲಿ ಹೋರಾಟಗಾರ ಮಾ.ರಾಮಮೂರ್ತಿ ಅವರು ಅರಿಶಿನ-ಕುಂಕುಮ ಧ್ವಜವನ್ನು ರೂಪಿಸಿದ್ದರು.

ಪ್ರತ್ಯೇಕ ನಾಡ ಧ್ವಜ ಕುರಿತು ಕುರಿತು ಸಂವಿಧಾನದಲ್ಲಿ ಏನಿದೆ?

  • ಮೊದಲಿಗೆ ಭಾರತ ಒಂದು ಒಕ್ಕೂಟ
  • ಹಲವು ರಾಜ್ಯಗಳಿಂದ ಭಾರತ ಒಕ್ಕೂಟವಾಗಿದ್ದು ರಾಜ್ಯ ಸರಕಾರಗಳಿಗೆ  ಅದರದ್ದೇ  ಆದ ಅಧಿಕಾರಗಳು ಇರುತ್ತವೆ.
  • ಭಾರತದ ಸಂವಿಧಾನದಲ್ಲಾಗಲಿ (flag code of India) ನಲ್ಲಾಗಲಿ ರಾಜ್ಯಗಳು ತಮ್ಮ ಧ್ವಜವನ್ನು ಹೊಂದಬಾರದು ಎಂದು ಹೇಳಿಲ್ಲ.
  • Flag code of India ಪ್ರಕಾರ ಭಾರತದ ತ್ರಿವರ್ಣ ಧ್ವಜಕ್ಕೆ ಮೊದಲ ಸ‌್ಥಾನ, ಅಂದರೆ ಭಾರತ ಒಕ್ಕೂಟದ ಧ್ವಜ ಬೇರೆಲ್ಲಾ ಧ್ವಜಗಳಿಗಿಂತಲೂ ಮೇಲೆ ಹಾರಾಡಬೇಕಿದೆ.
  • ಕರ್ನಾಟಕ ಸರಕಾರ ತನ್ನ ಧ್ವಜವನ್ನು ಹೊಂದಲು ಸಂಪೂರ್ಣ ಸ್ವತಂತ್ರವಿದೆ.
  • ಪ್ರಪಂಚದಲ್ಲಿ ಅನೇಕ ಒಕ್ಕೂಟಗಳಲ್ಲಿ ರಾಜ್ಯಗಳು ತಮ್ಮದೇ ಧ್ವಜವನ್ನು ಹೊಂದಿವೆ.
  • . ರಾಜ್ಯ ತನ್ನದೇ ಧ್ವಜ ಹೊಂದಿದ ಮಾತ್ರಕ್ಕೆ ಏಕತೆಗೆ ಧಕ್ಕೆ ಅನ್ನುವುದರಲ್ಲಿ ಹುರುಳಿಲ್ಲ.
  •  ಅಮೇರಿಕದ 50 ರಾಜ್ಯಗಳಲ್ಲಿ ತಮ್ಮದೇ ಆದ ಧ್ವಜ ಹೊಂದಿದೆ.
  •  ಬ್ರೆಸಿಲ್ ನ 27 ರಾಜ್ಯಗಳು ತಮ್ಮದೇ ಆದ ಧ್ಬಜ ಹೊಂದಿವೆ
  •  ಆಸ್ಟ್ರೇಲಿಯಾದ 8 ಕ್ಕೂ ಹೆಚ್ಚು ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಿವೆ
  •  ಜರ್ಮನಿಯ ಸುಮಾರು 16 ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಿದೆ.

ಪ್ರಪಂಚದ ಅನೇಕ ಒಕ್ಕೂಟದಲ್ಲಿ ರಾಜ್ಯಗಳು ತಮ್ಮ ಧ್ವಜ ಹೊಂದಿದ ಮಾತ್ರಕ್ಕೆ ಆ ಒಕ್ಕೂಟದ ಏಕತೆಗೆ ಧಕ್ಕೆಯಾಗಿದೆಯೇ ? ಪ್ರಸ್ತುತ ಭಾರತದಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವಿಲ್ಲ. ಸಂವಿಧಾನದ ಪ್ರಕಾರ ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಕೆಳಗಡೆ ನಾಡ ಧ್ವಜ ಹಾರಿಸಬಹುದು, ಎಂದು ಉಲ್ಲೇಕಿಸಲಾಗಿದೆ.ಇಲ್ಲಿ ಓದಿ:-ಕನ್ನಡಿಗರಾಗಿ ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ???

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್…!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ…

  • ಸುದ್ದಿ

    ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್‌ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ.   ಏಕೆ ಈ ಯುದ್ದ..? ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು…

  • ಸಿನಿಮಾ, ಸುದ್ದಿ

    ಡಾ।ರಾಜಕುಮಾರ್ ಜೊತೆ ನಟಿಸಿದ ಸರಿತಾ ದುಬೈಗೆ ಹೋಗಲು ಕಾರಣವೇನು? ಅವರ ಜೀವನದಲ್ಲಿ ಅಂಥಾದ್ದು ಏನಾಗಿತ್ತು?

    ಸಿನಿ ಲೋಕದಲ್ಲಿ ನೋಡಲು ಸುಂದರವಾಗಿದ್ದರೆ ಗ್ಲಾಮರಸ್ ಆಗಿದ್ದರೆ ಮಾತ್ರ ಬೆಳೆಯಲು ಸಾದ್ಯ! ಆಗ ಮಾತ್ರ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂದು ಮಾತನಾಡಿಕೊಳ್ಳುವ ಸಮಯದಲ್ಲಿ, ಕಪ್ಪಗಿದ್ದರೆ ವ್ಯಕ್ತಿಗೆ ಅದು ಮೈನಸ್ ಅಲ್ಲ ಪ್ಲಸ್ ಎಂದು ತೋರಿಸಿಕೊಟ್ಟವರು ನಟಿ ಸರಿತಾ.! ಆಕೆಯ ಕಣ್ಣುಗಳನ್ನು ನೋಡಿ ಸೋತವರೆಷ್ಟೋ, ಅವರ ಅಭಿನಯ ಮತ್ತು ವ್ಯಕ್ತಿತ್ವವವನ್ನು ನೋಡಿ ಈ ರೀತಿಯಾದ ಹುಡುಗಿ ನಮಗೆ ಸಿಗಬೇಕು ಎಂದು ಅದೆಷ್ಟೋ ಜನ ಕನಸು ಕಂಡಿದ್ದರು. ಕನ್ನಡ, ತೆಲುಗು, ತಮಿಳು, ಮಲೆಯಾಳ ಮುಚ್ಚಿಗೆ ಮರಗಳಲ್ಲಿ ವಿಜೃಂಭಿಸಿದ ಅವರಿಗೆ ವೈವಾಹಿಕ ಜೀವನ…

  • ಗ್ಯಾಜೆಟ್

    ಇದು ಸೆಲ್ಫಿ ಯುಗ,ಸೆಲ್ಫಿ ತೆಗೆಯುವ ಮುನ್ನ ಈ ಸುದ್ದಿಯನ್ನು ಓದಿ…

    ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.

  • ಸುದ್ದಿ

    ನಿರ್ದೇಶಕ ಮಿಲನ ಪ್ರಕಾಶ್‌ ಮತ್ತೊಮ್ಮೆ ದರ್ಶನ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ತಾರಕ್‌’ ಚಿತ್ರದ ನಂತರ ಈ ಜೋಡಿ ಜತೆಯಾಗುತ್ತಿದೆ…!

    ಈಗಾಗಲೇ ಮಿಲನ ಪ್ರಕಾಶ್‌ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್‌ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ  ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್‌ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…

  • ಸುದ್ದಿ

    ‘ಪಿತೃ ಪಕ್ಷ’ಕ್ಕೂ ಮಹಾಭಾರತದ ಕರ್ಣನಿಗೂ ಏನು ಸಂಬಂಧ ಗೊತ್ತ….!

    ಗತಿಸಿದ ಹಿರಿಯರಿಗೆ ನಮನ ಸಲ್ಲಿಸಲು ಕುಟುಂಬ ಸದಸ್ಯರು ಈ ಮಾಸಾಂತ್ಯದವರೆಗೆ ಪಿತೃ ಪಕ್ಷವನ್ನು ಆಚರಿಸುತ್ತಾರೆ. ಸಾವನ್ನಪ್ಪಿದ ಕುಟುಂಬದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಅವರಿಗಿಷ್ಟವಾದ ಆಹಾರ ಪದಾರ್ಥಗಳನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಅನಾದಿ ಕಾಲದಿಂದಲೂ ಪಿತೃಪಕ್ಷದ ಪರಂಪರೆ ನಡೆದುಕೊಂಡು ಬಂದಿದೆ. ಮಹಾಭಾರತದಲ್ಲಿ ತನ್ನ ಕರ್ಣಕುಂಡಲವನ್ನು ಕೊಟ್ಟು ಮರಣವನ್ನಪ್ಪಿದ ಕರ್ಣ, ಸ್ವರ್ಗ ಲೋಕಕ್ಕೆ ಹೋದ ವೇಳೆ ಆಹಾರವಾಗಿ ವಜ್ರ, ವೈಢೂರ್ಯಗಳನ್ನು ನೀಡಲಾಗುತ್ತದೆ. ಆಗ ಕರ್ಣ ಈ ಕುರಿತು ಪ್ರಶ್ನಿಸಿದಾಗ, ಹಿರಿಯರಿಗೆ ಶ್ರಾದ್ದ ಮಾಡದ ಹಿನ್ನಲೆಯಲ್ಲಿ ಕರ್ಣ ಮಾಡಿದ ದಾನಕ್ಕೆ ಅನುಸಾರವಾಗಿ ಇದನ್ನು ನೀಡಲಾಗುತ್ತದೆ ಎನ್ನಲಾಗುತ್ತದೆ….