Sports, ಕ್ರೀಡೆ

ಪ್ರತಿಷ್ಠೆಗಾಗಿ ಭಾರತ ಮತ್ತು ಪಾಕ್ ಕೊನೆಯ ಹೋರಾಟ ಇಲ್ಲಿ ಗೆಲುವು ಯಾರದು?

844

‘ಕಡುವೈರಿಗಳ ವಿರುದ್ಧ ಫೈನಲ್​ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.

ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ.  ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಭಾನುವಾರ ಎದುರಾಗುತ್ತಿವೆ. ಆ ಕಾರಣಕ್ಕಾಗಿ ಅತೀವ ಕುತೂಹಲಕ್ಕೆ ಕಾರಣವಾಗಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವ 14.11 ಕೋಟಿ ರೂ. ಹಾಗೂ ಮಿರುಗುವ ಟ್ರೋಫಿಗಿಂತ ಮುಖ್ಯವಾಗಿ ‘ಕಡುವೈರಿಗಳ ವಿರುದ್ಧ ಫೈನಲ್​ನಲ್ಲಿ ಗೆದ್ದೆ’ ಎನ್ನುವ ಪ್ರತಿಷ್ಠೆಯೇ ಎರಡೂ ತಂಡಕ್ಕೆ ಮುಖ್ಯವಾಗಿದೆ.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯ 5 ಪಂದ್ಯಗಳಿಗೆ ಆತಿಥ್ಯ ವಹಿಸಿಕೊಂಡಿರುವ ‘ದಿ ಓವಲ್’ ಮೈದಾನದಲ್ಲಿ ಭಾರತಕ್ಕೆ ಟೂರ್ನಿಯ 3ನೇ ಪಂದ್ಯವಾಗಿದೆ. ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತ್ತು.

ಇನ್ನೊಂದೆಡೆ ಪಾಕಿಸ್ತಾನ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಪಂದ್ಯ ಆಡಲಿದೆ. ಐಸಿಸಿ ಟೂರ್ನಿಗಳಲ್ಲಿ ಅಭೂತಪೂರ್ವ ಸ್ಥಿರ ನಿರ್ವಹಣೆ ತೋರುವ ಭಾರತ ತಂಡ, ಪಾಕಿಸ್ತಾನದ ವಿರುದ್ಧವೂ ಇಂಥದ್ದೊಂದು ದಾಖಲೆ ಕಾಯ್ದುಕೊಂಡಿದೆ. ಅಲ್ಲದೆ, ಹಾಲಿ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು 124 ರನ್​ಗಳಿಂದ ಬಗ್ಗುಬಡಿದ ಆತ್ಮವಿಶ್ವಾಸ ಕೊಹ್ಲಿ ಟೀಮ್ಲ್ಲಿದೆ. ಆ ಬಳಿಕ ಪಾಕಿಸ್ತಾನ ತಂಡ ಅದ್ಭುತ ನಿರ್ವಹಣೆ ತೋರಿದ್ದರೂ, ಫೈನಲ್​ನಲ್ಲಿ ನಮ್ಮ ತಂಡ ಭಿನ್ನ ನಿರ್ವಹಣೆ ತೋರುವ ಅಗತ್ಯವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದು 22 ಆಟಗಾರರ ನಡುವೆ ಕ್ರಿಕೆಟ್​ನ ಕೇವಲ ಒಂದು ಪಂದ್ಯವಾಗಿರದೆ ಉಭಯ ದೇಶಗಳ ನಡುವಿನ ಪ್ರತಿಷ್ಠೆಯೇ ಪಣಕ್ಕಿಟ್ಟಂತೆ ಅಭಿಮಾನಿಗಳು ವರ್ತಿಸುವುದು ಪಂದ್ಯದ ಮೇಲಿನ ಕ್ರೇಜ್ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಕ್ರಿಕೆಟ್​ಅನ್ನು ಮಾತ್ರವೇ ಗಮನಿಸುವುದಾದರೆ, ಪಾಕಿಸ್ತಾನ ತಂಡ ವಿರಾಟ್ ಕೊಹ್ಲಿ ಟೀಮ್ ಯಾವುದೇ ವಿಭಾಗಕ್ಕೂ ಸಮವಲ್ಲ. ಆದರೆ, ಅನ್​ಪ್ರಿಡಿಕ್ಟಬಲ್ ಟೀಮ್ ಖ್ಯಾತಿಯ ಪಾಕ್ ತನ್ನ ದಿನದಂದು ಸಾಂಘಿಕ ನಿರ್ವಹಣೆ ನೀಡುತ್ತದೆ.

ಪಾಕ್​ನ ಅಗ್ರ ಮೂವರು ಬ್ಯಾಟ್ಸ್​ಮನ್​ಗಳಾದ ಅಜರ್ ಅಲಿ, ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಟೀಮ್ ಇಂಡಿಯಾದ ಅಗ್ರ ಮೂವರು ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿಗೆ ಯಾವ ಹಂತದಲ್ಲೂ ತಾಳೆಯಾಗುವುದಿಲ್ಲ. ಆದರೆ, ಮೊಹಮದ್ ಆಮಿರ್, ಹಸನ್ ಅಲಿ, ಜುನೇದ್ ಖಾನ್ ಹಾಗೂ ರುಮ್ಮಾನ್ ರಯೀಸ್ ಇರುವ ಪಾಕ್ ತಂಡದ ವೇಗದ ಬೌಲಿಂಗ್ ವಿಭಾಗ ನಿಜಕ್ಕೂ ಬಲಿಷ್ಠ. ವಿಶ್ವ ನಂ.1 ದಕ್ಷಿಣ ಆಫ್ರಿಕಾ ಎದುರು ಇದೇ ಶಕ್ತಿ ಪಾಕ್​ಗೆ ಜಯ ತಂದಿತ್ತು. ಈಗ ಇವರ ಮೇಲೆ ನಂಬಿಕೆ ಇರಿಸಿಯೇ ಪಾಕಿಸ್ತಾನ ಗೆಲುವಿನ ನಿರೀಕ್ಷೆ ಇಟ್ಟಿದೆ.

ಇನ್ನು ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಮೂವರೊಂದಿಗೆ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯರ ನೈಜ ಆಟ ಇನ್ನೂ ಸಾಬೀತಾಗಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳೇ ಮಿಂಚಿರುವ ಕಾರಣ ಮಧ್ಯಮ ಕ್ರಮಾಂಕದ ಶಕ್ತಿ ತೋರ್ಪಡಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ, ಅಪರೂಪದ ವೈಫಲ್ಯ ಅಗ್ರ ಕ್ರಮಾಂಕದಿಂದ ದಾಖಲಾದಲ್ಲಿ, ಮಧ್ಯಮ ಕ್ರಮಾಂಕ ಮಿಂಚುವ ವಿಶ್ವಾಸವನ್ನು ನಾಯಕ ಕೊಹ್ಲಿ ವ್ಯಕ್ತಪಡಿಸಿದ್ದಾರೆ.

ಭಾರತ ನಂ. 1 

ಭಾರತ ತಂಡ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದರೆ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನಕ್ಕೇರಲಿದೆ. ಸೆಮೀಸ್ ಗೆಲುವಿನ ಬಳಿಕ 2ನೇ ಸ್ಥಾನಕ್ಕೇರಿರುವ ಭಾರತ ತಂಡ (118), ಫೈನಲ್ ಸೋತರೆ ಮತ್ತೆ 3ನೇ ಸ್ಥಾನಕ್ಕೆ ಕುಸಿಯಲಿದೆ. ಆದರೆ ಕೊಹ್ಲಿ ಪಡೆ ಗೆದ್ದರೆ ಅಂಕ ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ (119) ಜತೆ ಸಮಬಲ ಸಾಧಿಸಲಿದೆಯಲ್ಲದೆ, ದಶಾಂಶ ಲೆಕ್ಕಾಚಾರದಲ್ಲಿ ಅಗ್ರಸ್ಥಾನಕ್ಕೇರಲಿದೆ. ಭಾರತ ಈಗಾಗಲೆ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನದಲ್ಲಿದ್ದರೆ, ಟಿ20 ರ್ಯಾಂಕಿಂಗ್​ನಲ್ಲಿ 4ನೇ ಸ್ಥಾನದಲ್ಲಿದೆ. ಸದ್ಯ 7ನೇ ಸ್ಥಾನದಲ್ಲಿರುವ ಪಾಕ್ ಗೆದ್ದರೆ 6ನೇ ಸ್ಥಾನಕ್ಕೇರಲಿದ್ದು, ಸೋತರೆ 8ನೇ ಸ್ಥಾನಕ್ಕೆ ಕುಸಿಯಲಿದೆ.

ಭಾರತ ಗೆದ್ದರೆ….

  • ಸತತ 2 ಬಾರಿ ಟ್ರೋಫಿ ಗೆದ್ದ ಆಸೀಸ್ ದಾಖಲೆ ಸಮ
  • ಒಟ್ಟಾರೆ 3 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ದಾಖಲೆ
  • ಭಾರತಕ್ಕೆ 6ನೇ, ನಾಯಕ ಕೊಹ್ಲಿಗೆ ಚೊಚ್ಚಲ ಐಸಿಸಿ ಪ್ರಶಸ್ತಿ
  • ಕೋಚ್ ಅನಿಲ್ ಕುಂಬ್ಳೆಗೆ ಚೊಚ್ಚಲ ಐಸಿಸಿ ಟ್ರೋಫಿ
  • ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಸ್ಥಾನಕ್ಕೆ ಬಡ್ತಿ

ಪಾಕಿಸ್ತಾನ ಗೆದ್ದರೆ…

  • ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಾಧನೆ
  • ಐಸಿಸಿಯ ಎಲ್ಲ ಪ್ರಶಸ್ತಿ ಗೆದ್ದ ನಾಲ್ಕನೇ ತಂಡ ಎನ್ನುವ ಸಾಧನೆ
  • 1992ರ ಬಳಿಕ ಮೊದಲ ಐಸಿಸಿ ಏಕದಿನ ಪ್ರಶಸ್ತಿ ಗೆಲುವು
  • 2009ರ ಬಳಿಕ ಮೊದಲ ಬಾರಿ ಐಸಿಸಿ ಟೂರ್ನಿ ಚಾಂಪಿಯನ್
  • ಭಾರತ ವಿರುದ್ಧ ಲೀಗ್ ಸೋಲಿಗೆ ಸೇಡು ತೀರಿಸಿದ ಸಮಾಧಾನ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕಿತ್ತಳೆ ಹಣ್ಣಿನ ಉಪಯೋಗಗಳನ್ನು ತಿಳಿಯ ಬೇಕಾ..? ಹಾಗದ್ರೆ ಈ ಲೇಖನವನ್ನು ಓದಿ…

    ಕಿತ್ತಳೆ ಹಣ್ಣು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಇಂಥ ಸಿಹಿ ಕಿತ್ತಳೆ ಹಣ್ಣಿನಿಂದ ದೇಹಕ್ಕೆ ಹಲವು ಉಪಯೋಗಗಳಿವೆ. ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.

  • ಜ್ಯೋತಿಷ್ಯ

    ನಿಮಿಷ್ಟದ ದೇವರನ್ನು ನೆನಯುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….

  • ಸುದ್ದಿ

    ಹೊಸ ವರ್ಷದ ಆರಂಭದಲ್ಲಿ ಮದ್ವೆ ಮಾಡಿಕೊಳ್ಳಬೇಕು ಎಂದಿದ್ದವರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್..!

    2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…

  • ಸುದ್ದಿ

    70 ವರ್ಷದ ಈ ವೃದ್ದನ ಬಯಕೆ ಕೇಳಿದ್ರೆ ಅಚ್ಚ್ಚರಿಯಂತು ಗ್ಯಾರಂಟಿ..ಅಷ್ಟಕ್ಕೂ ಆ ವಿಷಯವಾದ್ರು ಏನು?

    ಯಾರ್ಯಾರಿಗೋ ಏನೋ ಆಸೆಯಾದರೆ, ಈ ವೃದ್ಧನದ್ದು ಬಲು ವಿಚಿತ್ರ ಹಾಗೂ ವಿಲಕ್ಷಣ ಆಸೆ…! ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಮಲೈಸ್ವಾಮಿ ಎಂಬ 70 ವರ್ಷದ ಈ ವೃದ್ಧನಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ 24 ವರ್ಷದ ಪಿ.ವಿ. ಸಿಂಧುವನ್ನು ಮದುವೆಯಾಗಬೇಕಂತೆ..! ಒಂದು ವೇಳೆ ಸಿಂಧು ಮದುವೆಯಾಗಲು ಒಪ್ಪದಿದ್ದರೆ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಮದುವೆಯಾಗುತ್ತಾನಂತೆ. ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆಂದು ಜಿಲ್ಲಾಧಿಕಾರಿಗಳು ನಡೆಸುವ ವಾರದ ಜನತಾದರ್ಶನದಲ್ಲಿ ಸಿಂಧು ಫೋಟೋ ಸಹಿತ ಪತ್ರವೊಂದನ್ನು ಜಿಲ್ಲಾಧಿಕಾರಿಗಳ ಕೈಗಿತ್ತು, ನನ್ನನ್ನು ಮದುವೆಯಾಗುವಂತೆ ಸಿಂಧು ಅವರಿಗೆ ಸೂಚಿಸಬೇಕೆಂದು…

  • ಸಿನಿಮಾ

    ಅಂಜನಿಪುತ್ರನಿಗೆ ಕೋರ್ಟ್ ಶಾಕ್..!

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.

  • ಸುದ್ದಿ

    ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ ; ಬಾರಿ ಇಳಿಕೆ ಕಂಡ ಬಂಗಾರದ ಬೆಲೆ,..!!

    ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ  ತರುವಂತೆ  ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ  ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ  ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು…