ಆರೋಗ್ಯ

ನೀವು ಹಣಬೆ ತಿನ್ನೋದ್ರಿಂದ, ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತಾ..?

3517

ನೀವು ಹಣಬೆಯನ್ನು(ಮುಶ್ರೂಮ್ಸ್) ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಲು ಮುಂದೆ ಓದಿ…

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ:-

ಅಣಬೆಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮ ದೇಹಕ್ಕೆ ವೈರಸ್ ನಿರೋಧಕ ರಕ್ಷೆಯನ್ನು ನೀಡುತ್ತದೆ ಮತ್ತು ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹಲವಾರು ಪ್ರೋಟಿನ್‌ಗಳು ದೊರೆಯುತ್ತವೆ. ಜೊತೆಗೆ ದೇಹದ ಕೋಶಗಳಲ್ಲಿನ ರಿಪೇರಿಗಳನ್ನು ಸಹ ದೇಹವೇ ಮಾಡಿಕೊಳ್ಳುವಂತಃ ಆರೋಗ್ಯವನ್ನು ಅಣಬೆಗಳು ನಮಗೆ ನೀಡುತ್ತವೆ.

ವಿಟಮಿನ್ ಡಿ :-

ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಅಣಬೆಯು ಸೂರ್ಯನ ಬೆಳಕಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದರಿಂದ ಈ ವಿಟಮಿನ್ ಅನ್ನು ತನ್ನೊ ಳಗೆ ಹೊಂದುತ್ತದೆ. ಇದನ್ನು ಸೇವಿಸುವುದರಿಂದಾಗಿ, ನಿಮಗೆ ಪ್ರತಿ ದಿನಕ್ಕೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ.

ಆಂಟಿ ಆಕ್ಸಿಡೆಂಟ್ಗಳು:-

ಅಣಬೆಗಳಲ್ಲಿ ಯಥೇಚ್ಛವಾದ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳು ಇರುತ್ತವೆ. ಅವು ಫ್ರೀ ರ್ಯಾಡಿಕಲ್ಗಳಿಂದ ನಿಮ್ಮ ದೇಹವು ಹಾಳಾಗುವಿಕೆಯನ್ನು ತಡೆಯುತ್ತದೆ. ಈ ಆಂಟಿ ಆಕ್ಸಿಡೆಂಟ್ಗಳು ಹೃದ್ರೋಗ, ಕ್ಯಾನ್ಸರ್, ಅಲ್ಜೀಮರ್ ಮುಂತಾದ ಗಂಭೀರ ಕಾಯಿಲೆಗಳ ಬೆಳವಣಿಗೆಯನ್ನು ತಡೆಯುತ್ತವೆ.

ಕಬ್ಬಿಣಾಂಶದ ಆಗರ:-

ಅಣಬೆಗಳು ಕಬ್ಬಿಣಾಂಶದ ಪ್ರಮುಖ ಆಗರವಾಗಿರುತ್ತವೆ. ಇವುಗಳ ಸೇವನೆಯಿಂದ ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ಆಕ್ಸಿಜೆನೆಶನ್ ಆಗುತ್ತದೆ. ಜೊತೆಗೆ ಆಮ್ಲ ಜನಕವು ದೇಹದ ಎಲ್ಲಾ ಭಾಗ ಗಳಿಗೂ ಪಸರಿಸಲು ಇದು ಕಾರಣವಾಗುತ್ತದೆ.

ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ:-

ವಿಟಮಿನ್ ’ಬಿ’ ಯು ಅಣಬೆಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸ ಮಾಡು ತ್ತದೆ. ಇದರಲ್ಲಿರುವ ವಿಟಮಿನ್ಗಳು ನಮ್ಮ ದೇಹಕ್ಕೆ ತೀರಾ ಅಗತ್ಯವಾಗಿರುತ್ತವೆ. ಇನ್ನು ನಮ್ಮ ದೇಹ ಸುಗಮವಾಗಿ ಕೆಲಸ ಮಾಡಲು ಬೇಕಾದ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸಲು ಅಣಬೆಗಳು ಅಗತ್ಯ ಶಕ್ತಿಯನ್ನು ನೀಡುತ್ತವೆ. ಹಾಗಾಗಿ ಅಣಬೆ ಗಳನ್ನು ತಪ್ಪದೆ ಸೇವಿಸಿ, ದೇಹ ವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಹಸಿದ ಬಾಲಕನಿಗೆ ಊಟ ನೀಡಿದಕ್ಕೆ ವೇಯ್ಟರ್‌ ಗೆ ʼಶಿಕ್ಷೆʼ….!

    ಶಾಲಾ ಬಾಲಕನೊಬ್ಬ ಎಂಟು ಡಾಲರ್ ಮೌಲ್ಯದ ಊಟ ಮಾಡಿ, ಬಳಿಕ‌ ಹಣ ಪಾವತಿಸಲು ಸಾಧ್ಯವಾಗಿಲ್ಲವೆಂದು‌ ಸರ್ವ್ ಮಾಡಿದ ಲಂಚ್ ಲೇಡಿಯನ್ನು ‌ವಜಾಗೊಳಿಸಿರುವ ಘಟನೆ ನಡೆದಿದೆ. ಈ‌ ಘಟನೆ ನ್ಯೂ ಹ್ಯಾಮ್‌ಶೈರ್ ಭಾಗದ ಮಸ್ಕೋಮಾ ವ್ಯಾಲಿಯಲ್ಲಿರುವ ಶಾಲಾ ಭಾಗದಲ್ಲಿ ನಡೆದಿದೆ. ಬೋನಿ‌ ಕಿಂಬಲ್ ಎನ್ನುವ ಲಂಚ್ ಲೇಡಿ, ಬಾಲಕ ಕೇಳಿರುವ ಆಹಾರ‌ ಒದಗಿಸಿದ್ದಾಳೆ. ಆದರೆ ತಿಂದ ಬಳಿಕ ಪಾವತಿಸಲು ಬಾಲಕನ ಬಳಿ ಹಣವಿಲ್ಲ. ಆದ್ದರಿಂದ ಹಣವಿಲ್ಲದ ಬಾಲಕನಿಗೆ ಆಹಾರ ನೀಡಿದ್ದಕ್ಕೆ ಆಕೆಯನ್ನು ವಜಾಗೊಳಿಸಲಾಗಿದೆ. ಈ‌ ವಿಷಯ ಹರಡುತ್ತಿದ್ದಂತೆ ವಿದ್ಯಾರ್ಥಿಗಳು…

  • ವಿಸ್ಮಯ ಜಗತ್ತು

    ಇದು ಮತ್ಸ್ಯ ಕನ್ಯಯೋ, ಜಲಚರ ಪ್ರಾಣಿಯೋ ಗೊತ್ತಾಗ್ತಿಲ್ಲಾ..!ನಿಮಗೆನಾದ್ರೂ ಗೊತ್ತಾ ನೋಡಿ…???

    ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ..! ಇಂತಹದೆ ಜಲಚರ ಪ್ರಾಣಿಯೊಂದು ಪತ್ತೆಯಾಗಿದೆ. ಅದು ನೋಡಲು ಮತ್ಸ್ಯ ಕನ್ಯೆ ಅಂತಯೇ ಇದೆ. ಕೆಳಗಿರುವ ಚಿತ್ರಗಳು ಮತ್ತು ವಿಡಿಯೋವನ್ನು ವೀಕ್ಷಿಸಿ ಗೊತ್ತಾಗುತ್ತೆ….

  • ಸುದ್ದಿ

    ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತ್ಯಂತ ಸುಂದರವಾದ ಮಹಿಳೆ,! ಯಾಕೆ ಗೊತ್ತಾ,.??

    ಸೌಂದರ್ಯ ಮತ್ತು ಸುಂದರವಾಗಿ  ಕಾಣಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಹಾಗೆಯೇ ವಾಷಿಂಗ್ಟನ್‌ ಅಮೆರಿಕದ ಸೂಪರ್‌ ಮಾಡೆಲ್‌  ಆದ ಬೆಲ್ಲಾ ಹದೀದ್‌ರನ್ನು ವಿಶ್ವದ ಅತೀ ಸುಂದರ ಮಹಿಳೆ ಎಂದು ಘೋಷಣೆ ಮಾಡಲಾಗಿದೆ.ಯಾಕೆಂದರೆ  ವೈಜ್ಞಾನಿಕವಾಗಿ ಪರೀಕ್ಷಿಸಿ ಆಕೆಗೆ ಈ ಬಿರುದು ನೀಡಲಾಗಿದೆ ಎಂದು ತಿಳಿಸಲಾಗಿದೆ. ಸೌಂದರ್ಯ ಅಳೆಯುವ ಗ್ರೀಕ್‌ ಪದ್ಧತಿಯಾದ ‘ಗೋಲ್ಡನ್‌ ರೇಶ್ಯೋ ಆಫ್‌ ಬ್ಯೂಟಿ ಫಿ ಮಾನದಂಡದ ಪ್ರಕಾರ ಈ ಸೌಂದರ್ಯ ಪರೀಕ್ಷೆ ನಡೆಸಲಾಗಿದ್ದು, ಬೆಲ್ಲಾ ಹದೀದ್‌ ಮುಖ ಶೇ.94.35 ರಷ್ಟುಹೋಲಿಕೆಯಾಗಿದೆ. ಹಾಗಾಗಿ ಆಕೆಯನ್ನು ಜಗತ್ತಿನ…

  • ಸುದ್ದಿ

    ಈ ವಿಲನ್ ತನ್ನ ಹೆಂಡತಿಯನ್ನು ಹೇಗೆ ಕಳೆದುಕೊಂಡರು ಗೊತ್ತಾ, ಕಣ್ಣಲ್ಲಿ ನೀರು ಬರುತ್ತೆ.

    ಟಾಪ್ ವಿಲನ್ ಗಳಲ್ಲಿ ಇವರು ಒಬ್ಬರು. ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ ಈ ನಟ. ತೆಲುಗಿನ ಪೌರ್ಣಮಿ, ತುಳಸಿ, ಮುನ್ನ, ಅರುಂಧತಿ ಕನ್ನಡದ ಶ್ರೀ, ಯೋಧ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಆದರೆ ಈತನ ಸುಂದರ ಸಂಸಾರ 10 ವರ್ಷಗಳ ಹಿಂದೆ ಛಿದ್ರ ಛಿದ್ರವಾಯಿತು. ಅದಕ್ಕೆ ಕಾರಣ ಏನು? ಆನಂತರ ಏನಾಯಿತು? ಗೊತ್ತಾ?? 1998 ರಲ್ಲಿ ರೀನಾ ಎನ್ನುವವರನ್ನು ಮದುವೆಯಾದ ರಾಹುಲ್ ಗೆ ಒಂದು ಮುದ್ದಾದ ಮಗು ಹುಟ್ಟಿತು….

  • ಸ್ಪೂರ್ತಿ

    ಶಾಲೆಯ ಎಲ್ಲ ಮಕ್ಕಳಿಗೂ ಸೈಕಲ್ ಕೊಡಿಸಲು ಈ ಶಿಕ್ಷಕಿ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.

  • ಸುದ್ದಿ

    ಅಂಬೇಡ್ಕರ್ ಸಂಘಗಳಿಂದ ಚೈತ್ರ ಕೋಟೂರು ವಿರುದ್ಧ ಹೋರಾಟ..!ಯಾಕೆ ಗೊತ್ತಾ?

    ಕನ್ನಡ ನಟಿ, ಸಹಾಯಕ ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೋಟೂರು ಇಷ್ಟುದಿನ ‘ಬಿಗ್ ಬಾಸ್’ ಮನೆಯೊಳಗೆ ವಿವಾದಕ್ಕೀಡಾಗಿದ್ದರು. ನಾಮಿನೇಟ್ ಆದಾಗೆಲ್ಲಾ, ಡೇಂಜರ್ ಝೋನ್ ನಿಂದ ಸೇಫ್ ಆಗಲು ಚೈತ್ರ ಕೋಟೂರು ಕಟ್ಟಿದ ಕಥೆಗಳು, ಮಾಡಿದ ಅವಾಂತರಗಳು ಒಂದೆರಡಲ್ಲ. ಆದರೆ ಆ ಎಲ್ಲಾ ವಿವಾದಗಳು ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು. ಈಗ ನೋಡಿದ್ರೆ, ಚೈತ್ರಕೋಟೂರು ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಇಳಿದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು…