ಉಪಯುಕ್ತ ಮಾಹಿತಿ, ಸಂಬಂಧ

ನೀವು ಯಾವ ವಯಸ್ಸಿನಲ್ಲಿ ಮದುವೆಯಾದ್ರೆ, ನಿಮ್ಗೆ ಆಗುವ ಲಾಭ ಏನು ಗೊತ್ತಾ?ತಿಳಿಯಲು ಈ ಲೇಖನ ಓದಿ..

664

ಮದುವೆಯ ಪರ್‌ಫೆಕ್ಟ್‌ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ.

ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ. ಇನ್ನೂ ಕೆಲವರು 40ರ ಹರೆಯದ ನಂತರ ಮದುವೆಯಾಗುತ್ತಾರೆ. ಮದುವೆಯಾಗಲು ಸರಿಯಾದ ವಯಸ್ಸು ಯಾವುದು? ಯಾವ ವಯಸ್ಸಿನಲ್ಲಿ ಮದುವೆಯಾದರೆ ಏನು ಲಾಭ.

20 ರಿಂದ 30 ವರ್ಷದಲ್ಲಿ ಮದುವೆ :-

ಒಂದು ವೇಳೆ ಯಾವುದೆ ವ್ಯಕ್ತಿಯ ಮದುವೆ 20 ರಿಂದ 30 ವರ್ಷದೊಳಗೆ ಆದರೆ ಆ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.

ಅಂದರೆ ನಿಮ್ಮ ನಡುವೆ ಹೊಂದಾಣಿಕೆ ಬರಲು ಸಮಯ ಸಿಗುತ್ತದೆ. ಈ ಸಮಯದಲ್ಲಿ ಇಬ್ಬರೂ ಸಹ ಎನರ್ಜಿಟಿಕ್‌ ಆಗಿರುತ್ತೀರಿ. ಇಬ್ಬರಿಗೂ ತಮ್ಮ ಕರಿಯರ್‌ಗೆ ಸಂಬಂಧಿಸಿದಂತೆ ಹೆಚ್ಚು ಕನಸು ಇರುತ್ತದೆ. ಅಷ್ಟೇ ಅಲ್ಲ ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಲು, ಮೋಜು ಮಸ್ತಿ ಮಾಡಲು ಸಹ ಸಾಧ್ಯವಾಗುತ್ತದೆ. ಯಾಕೆಂದರೆ ಮಕ್ಕಳ ಮದುವೆಯಾಗುತ್ತಿದ್ದಂತೆ ನಿಮ್ಮ ವಯಸ್ಸು 50 ವರ್ಷ ಆಗುತ್ತದೆ.

30 ರಿಂದ 40 ವರ್ಷದಲ್ಲಿ ಮದುವೆ :-

ನಿಮ್ಮ ಮದುವೆ 30 ರಿಂದ 40 ವರ್ಷದ ನಡುವೆ ಆದರೆ ನೀವು ಜೀವನ, ಸಂಬಂಧ ಮತ್ತು ಪ್ರಪಂಚದ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತೀರಿ. ನಿಮಗೆ ನಿಮ್ಮ ಹೃದಯದ ಮಾತಿನ ಮೇಲೆ ಯಾವುದೆ ಕನ್‌ಫ್ಯೂಶನ್‌ ಇರೋದಿಲ್ಲ. ಒಬ್ಬರಿಗೊಬ್ಬರು ಕಾಂಪ್ಲಿಮೆಂಟ್‌ ಕೊಡಲು ಸಹಾಯವಾಗುತ್ತದೆ.

ಒಂದು ಸರ್ವೇಯ ಅನುಸಾರ ಈ ವಯಸ್ಸಿನಲ್ಲಿ ಮದುವೆಯಾದರೆ ಡಿವೋರ್ಸ್ ಆಗುವ ಚಾನ್ಸಸ್‌ ಕಡಿಮೆ ಇರುತ್ತದೆ. ಆದರೆ ಈ ವಯಸ್ಸಿನಲ್ಲಿ ಮದುವೆಯಾದರೆ ಪ್ರೆಗ್ನೆನ್ಸಿಯಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತದೆ.

40ನೆ ವಯಸ್ಸಿನ ನಂತರ :-

40 ವರ್ಷದ ನಂತರ ಮದುವೆಯಾಗುವುದರ ಒಂದು ಲಾಭ ಎಂದರೆ ನೀವು ಆರ್ಥಿಕವಾಗಿ ಇಬ್ಬರು ಸಹ ತುಂಬಾನೆ ಸದೃಢರಾಗಿರುತ್ತೀರಿ.

ಜೊತೆಗೆ ಸೆಲ್ಫ್‌ ಕಾಂನ್ಫಿಡೆನ್ಸ್‌‌ ಹೆಚ್ಚಿರುತ್ತದೆ. ಆದರೆ ರಿಸರ್ಚ್‌ ಅನುಸಾರ 40 ವಯಸ್ಸಿನ ನಂತರ ಗರ್ಭಾಧಾರಣೆ ಮಾಡುವ ಚಾನ್ಸಸ್‌ ಕೇವಲ 33 ಶೇಕಡಾದಷ್ಟು ಮಾತ್ರ ಇದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಈ ಸೊಳ್ಳೆಗಳು ಬೇರೆಯವರಿಗಿಂತ ನಿಮ್ಮನ್ನೇ ಯಾಕೆ ಹೆಚ್ಚು ಕಚ್ಚುತ್ತವೆ ಗೊತ್ತಾ…!ಈ ಲೇಖನಿ ಓದಿ, ಗೊತ್ತಾಗುತ್ತೆ…

    ಮನೆಯಲ್ಲಿ ಫ್ಯಾನ್, ಕೂಲರ್ ಇಲ್ಲಾಂದ್ರೆ ನೀವು ಸೊಳ್ಳೆಮಹರಾಯನಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಮನೆಯಲ್ಲಿ ಕರೆಂಟ್ ಏನಾದ್ರೂ ಹೋದ್ರೆ ನಿಮ್ಮ ಕತೆ ಮುಗಿದ ಹಾಗೆ. ಇನ್ನೂ ಚಳಿಗಾಲದಲ್ಲಂತೂ ಕೇಳದೇ ಬೇಡ. ಕೆಲವೊಂದು ಸಾರಿ ನಮ್ಗೆ ಅನ್ನಿಸುವುದೇನಂದ್ರೆ ಈ ಸೊಳ್ಳೆಗಳು ನಮಗೆ ಯಾಕೆ ಕಚ್ಚುತ್ತವೆ ಅಂತ ಬಹಳ ತಲೆ ಕೆಡಿಸಿಕೊಳ್ಳುತ್ತೇವೆ.

  • ರಾಜಕೀಯ

    ಮಿತ್ರ ಪಕ್ಷ ಕಾಂಗ್ರೆಸ್ ತೊರೆದು ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ?

    ಇಷ್ಟು ದಿನ ಬಿಜೆಪಿ ಸಮ್ಮಿಶ್ರ ಸರ್ಕಾರ ಈಗ ಬೀಳುತ್ತದೆ ಆಗ ಬೀಳುತ್ತದೆ ಎಂದು ಹೇಳಿಕೊಂಡೆ ಬರುತ್ತಿದೆ ಆದರೆ ಅದು ಸಾಧ್ಯವಾಗಿಲ್ಲ. ಆಪರೇಷನ್ ಕಮಲ ಮಾಡಲು ಬಿಜೆಪಿ ಏನೆಲ್ಲ ಹರಸಾಹಸ ಮಾಡಿ ಕಡೆಗೆ ಮುಖಭಂಗ ಅನುಭವಿಸಿದೆ. ಈಗಲೂ ಸಹ ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಗೆ ಹೋಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಅವರು ಮಾತ್ರ ಅಲ್ಲ ಅವರ ಜೊತೆ ಅವರ ಬೆಂಬಲಿಗರು ಮೈತ್ರಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಅವರಿಗೆ ಸಚಿವ…

  • ಸುದ್ದಿ

    ಭಾರಿ ಮಳೆಗೆ ಒಡೆದ ಸೇತುವೆ : 6 ಬಲಿ,17 ಮಂದಿ ನಾಪತ್ತೆಯಾಗಿದ್ದಾರೆ……!

    ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ…

  • ಸುದ್ದಿ

    ಖ್ಯಾತ ಸ್ಯಾಕ್ಸೋಫೋನ್ ವಾದಕ,ಪದ್ಮಶ್ರೀ ಪುರಸ್ಕೃತ ವಿಜೇತ ಕದ್ರಿ ಗೋಪಾಲನಾಥ್ ಇನ್ನಿಲ್ಲ …..

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70)​ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…

  • ಉಪಯುಕ್ತ ಮಾಹಿತಿ

    ಬಟ್ಟೆ ಶಾಪಿಂಗ್ ಮಾಡೋವಾಗ ಈ ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ..!ತಿಳಿಯಲು ಈ ಲೇಖನ ಓದಿ ..

    ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.