ಆರೋಗ್ಯ

ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

207

ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಆರೋಗ್ಯ ಸಮಸ್ಯೆಗಳು..

ಹೃದಯದ ಮೇಲೆ ಪರಿಣಾಮ :-

ಬೆಳಿಗ್ಗೆ ಆರೋಗ್ಯಕರ ಆಹಾರ ಸೇವನೆಯಿಂದ ದಿನವನ್ನು ಆರಂಭಿಸುವವರಿಗೆ ಹೋಲಿಸಿದರೆ ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವವರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ.

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತವೆ.

ಗ್ಯಾಸ್ಟ್ರಿಕ್ ತೊಂದರೆಗಳು:-

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಊಟದ ವೇಳೆ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ. ಪರಿಣಾಮವಾಗಿ ಆಹಾರವನ್ನು ಜೀರ್ಣಿಸುವ ಕರುಳುಗಳ ಮೇಲೆ ಅಧಿಕ ಹೊರೆ ಬೀಳುತ್ತದೆ ಮತ್ತು ಇದು ಅಲ್ಸರ್,ಗ್ಯಾಸ್ಟ್ರಿಕ್ಸ್, ಅಜೀರ್ಣ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಮಧುಮೇಹದ ಹೆಚ್ಚಿನ ಅಪಾಯ:-

ಬ್ರೇಕ್‌ಫಾಸ್ಟ್ ತಪ್ಪಿಸುವವರಿಗೆ ಹೋಲಿಸಿದರೆ ಬೆಳಿಗ್ಗೆ ಆರೋಗ್ಯಕರ ತಿಂಡಿ ತಿನ್ನುವವವರು ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಹಿಳೆಯರು ತಮ್ಮ ಕೆಲಸದ ಭರಾಟೆಯಲ್ಲಿ ಹೆಚ್ಚಿನ ಸಲ ಬೆಳಗಿನ ತಿಂಡಿಯನ್ನು ಕಡೆಗಣಿಸುವುದರಿಂದ ಮಧುಮೇಹಕ್ಕೆ ತುತ್ತಾಗುವುದು ಹೆಚ್ಚು.

ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವವರೆಗೆ ಉಪವಾಸವಿರುವುದರಿಂದ ಬ್ರೇಕ್‌ಫಾಸ್ಟ್ ತಪ್ಪಿಸುವುದು ಈ ಉಪವಾಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

ತಲೆಗೂದಲು ನಷ್ಟವಾಗಬಹುದು:-

ಸುಂದರ ತಲೆಗೂದಲನ್ನು ಹೊಂದಿರಲು ಪೌಷ್ಟಿಕ ಬ್ರೇಕ್‌ಫಾಸ್ಟ್ ಅಗತ್ಯವಾಗಿದೆ. ಪ್ರೋಟಿನ್‌ಭರಿತ ಬ್ರೇಕ್‌ಫಾಸ್ಟ್ ಕೆರಾಟಿನ್ ಉತ್ಪತ್ತಿಗೆ ನೆರವಾಗುತ್ತದೆ ಮತ್ತು ಕೆರಾಟಿನ್ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಬೊಜ್ಜು ಹೆಚ್ಚುತ್ತದೆ:-

ಇದನ್ನು ಓದಿದರೆ ಅಚ್ಚರಿಯೆನ್ನಿಸಬಹುದು. ನೀವು ದೇಹತೂಕ ಇಳಿಸಲು ಬಯಸಿದ್ದೀರಾದರೆ ಕಡಿಮೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಇದು ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವುದಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ ಊಟದ ವೇಳೆ ಹಸಿವು ತೀವ್ರವಾಗಿರುತ್ತದೆ.

ಪರಿಣಾಮವಾಗಿ ಹೆಚ್ಚಿನ ಊಟ ಮಾಡುವಂತಾಗುತ್ತದೆ ಮತ್ತು ದಿನದ ಅತ್ಯಂತ ಹೆಚ್ಚು ಜಡತೆಯ ಸಮಯದಲ್ಲಿ ಹೆಚ್ಚಿನ ಕ್ಯಾಲರಿಗಳು ಶರೀರದಲ್ಲಿ ಸೇರಿಕೊಂಡು ಅಂತಿಮವಾಗಿ ತೂಕ ಹೆಚ್ಚುತ್ತದೆ.

ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ:-

ಬ್ರೇಕ್‌ಫಾಸ್ಟ್ 12 ಗಂಟೆಗಳ ಸುದೀರ್ಘ ಉಪವಾಸದ ಬಳಿಕ ನಾವು ಸೇವಿಸುವ ಮೊದಲ ಆಹಾರವಾಗಿದೆ ಮತ್ತು ಇದನ್ನು ತಪ್ಪಿಸಿದರೆ ನಮ್ಮ ಶರೀರಕ್ಕೆ ಉತ್ತಮ ಆರಂಭ ದೊರೆಯುವುದಿಲ್ಲ. ನಮ್ಮ ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಇಡೀ ದಿನ ಆಲಸ್ಯ ಕಾಡುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಮಹಿಳೆಯೊಬ್ಬಳು 300 ವರ್ಷ ವಯಸ್ಸಿನ ದೆವ್ವದ ಜೊತೆ ಮದುವೆಯಾಗಿದ್ದಾಳೆ..!ತಿಳಿಯಲು ಈ ಲೇಖನ ಓದಿ…

    ಮಹಿಳೆಯೊಬ್ಬಳು ಐರ್ಲೆಂಡ್ ನಲ್ಲಿ ದೆವ್ವವನ್ನೇ ಮದುವೆಯಾಗಿದ್ದಾಳೆ. ಅಮಂಡಾ ಟೀಗ್ ಎಂಬ ಮಹಿಳೆ ಸರ್ವಾಲಂಕೃತಳಾಗಿ ಚರ್ಚ್ ಗೆ ಬಂದಿದ್ಲು. ಅಲ್ಲಿ ಅತಿಥಿಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ 300 ವರ್ಷ ವಯಸ್ಸಿನ ಜಾಕ್ ಎಂಬ ದೆವ್ವವನ್ನು ಮದುವೆಯಾಗಿದ್ದಾಳೆ.

  • ಕಬಡ್ಡಿ

    ಈ ಸಲ ಕಪ್ಪು ನಮ್ದೇ

    ಕೋನೆಗೂ ಕಪ್ಪು ಗೆದ್ದ ಬೆಂಗಳೂರು ಹೌದು VIVO Pro Kabaddi Season 6 ರಲ್ಲಿ ಕೋನೆಗೂ ಕಪ್ಪು ನಮ್ದೇ, ಇಂದು ನಡೆದ prokabaddi ಗುಜರಾತ್ ವಿರುದ್ಧ 5 ಅಂಕ 38-33 ರಲ್ಲಿ ಗೆದ್ದಿದೆ.  ಪವನ್ ಕುಮಾರ್ ರವರಿಂದ ವಿರೋಚಿತ ಆಟ Man of the match ಅವರಿಗೆ ಸಿಕ್ಕಿದೆ. ಮ್ಯಾನ್ of the series 24match 282pts, 11.8 avarege ನಲ್ಲಿ 15 ಲಕ್ಷ ರೂ ಗೆದ್ದರು.  ಕಪ್ಪು ಗೆದ್ದ ಬೆಂಗಳೂರು bulls ಇಂದ ಎಲ್ಲ ಜನ…

  • ವಿಸ್ಮಯ ಜಗತ್ತು

    ಈ ಊರಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದ್ರು, ಆಮೇಲೆ ಏನಾಯ್ತು ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ಮಳೆ ಬಂದಿಲ್ಲ ಅಂದ್ರೆ ಹಳ್ಳಿಗಳ ಕಡೆ ಮಳೆರಾಯನ ಪೂಜೆ ಮತ್ತು  ಕಪ್ಪೆಗಳಗೆ ಮದುವೆ ಮಾಡಿಸುವುದು ವಾಡಿಕೆ. ಹಾಗೂ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆರಾಯನ ಮೊರೆಹೊದರೆ ಖಂಡಿತ ಮಳೆ ಬರುತ್ತದೆ ಎಂಬ ನಂಬಿಕೆ ಇದೆ… ಹೌದು, ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮಸ್ಥರು ಹೀಗೆ ಕಪ್ಪೆಗಳಗೆ ಮದುವೆ ಮಾಡಿಸಿ ಮೂರೇ ದಿನದಲ್ಲಿ ಮಳೆ ಬರಿಸಿದ್ದಾರೆ. ಕಪ್ಪೆ ಮದುವೆ ಮಾಡಿಸುವುದು ಹೇಗೆ? ಊರಿನ ಜನರು ಮಳೆರಾಯನಿಗೆ ಪ್ರಾರ್ಥಿಸಿ ಹೆಣ್ಣು ಮತ್ತು ಗಂಡು ಕಪ್ಪೆಗಳಿಗೆ ಸಿಂಗಾರ ಮಾಡಿ ಗ್ರಾಮದ ಮುಖ್ಯಬೀದಿಗಳಲ್ಲಿ ತಮಟೆವಾದ್ಯಗಳೊಂದಿಗೆ ಕಪ್ಪೆ ಜೊಡಿಯ ಮೆರವಣಿಗೆ…

  • ಉಪಯುಕ್ತ ಮಾಹಿತಿ

    ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!

    ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,೦೦೦ ರೂ ಹಣ ಸಂದಾಯ ಮಾಡುವ ಗೃಹಲಕ್ಷ್ಮಿ ಯೋಜನೆಗೆ  ನೋಂದಣಿ ಆರಂಭ ಮಾಡಲಾಗುವುದು, ಕುಟುಂಬಗಳಿಗೆ ಹಣ ಸಂದಾಯ ಮಾಡುವ ಮೊದಲು ಎಸ್.ಎಂ.ಎಸ್ ಮಾಹಿತಿ ನೀಡಲಾಗುತ್ತದೆ  ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳಿದ್ದು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಗೆ ಹಣ ಸಂದಾಯ ಅಗಲಿದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ನೋಂದಣಿ ಆರಂಭ…

  • ಸ್ಪೂರ್ತಿ

    ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣಕ್ಕೆ ಸ್ವೀಟ್ ಕೇಕ್ ಕಂಡು ಹಿಡಿದಿದ್ದಾರೆ..!ತಿಳಿಯಲು ಈ ಲೇಖನ ಓದಿ…

    ಪ್ರಸ್ತುತ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುತ್ತಿದ್ದು ಅದರಿಂದ ಡೆಂಗ್ಯೂ ಜ್ವರ ಮುಂತಾದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ಮನುಷ್ಯ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿನ ವಿವಿಧ ರೀತಿಯ ಸೊಳ್ಳೆಯನ್ನು ನಿಯಂತ್ರಿಸುವ ಸಲಕರಣೆಗಳನ್ನು ಪಡೆಯಲು ಮುಂದಾಗುತ್ತಿರುವುದು ಪ್ರಸ್ತುತ ನಡೆಯುತ್ತಿದೆ.

  • ಸುದ್ದಿ

    ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

    ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.