ಉಪಯುಕ್ತ ಮಾಹಿತಿ

ನೀವು ಎಷ್ಟುತೂಕ ಇದ್ದೀರಿ ..? ಹಾಗಾದ್ರೆ ನೀವು ದಿನನಿತ್ಯ ಎಷ್ಟು ಲೀ ನೀರು ಕುಡಿಯಬೇಕು ಗೊತ್ತಾ ..? ತಿಳಿಯಲು ಈ ಲೇಖನ ಓದಿ…

2836

ಉತ್ತಮ ಆರೋಗ್ಯಕ್ಕೆ ನೀರು ಅತ್ಯಾವಶ್ಯಕ ಅಂಶ.ನೀರಿನ ಆವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ  ಭಿನ್ನವಾಗಿರಬಹುದು.  ನೀವು ಸಾಕಷ್ಟು ದ್ರವಾಹಾರ ಸೇವಿಸುತ್ತಿರುವಿರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಲೇಖನವು ನಿಮಗೆ ಸಹಾಯ ಮಾಡಲಿದೆ.  ನೀರಿನ ಆವಶ್ಯಕತೆ ಎನ್ನುವುದು ಅನೇಕ ಅಂಶಗಳನ್ನು ಅವಲಂಬಿಸಿಕೊಂಡು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬೇರೆ ಬೇರೆ ಆಗಿರುತ್ತದೆ.

ಮಾನವನ ದೇಹದಲ್ಲಿ ಸುಮಾರು ಶೇ.70 ರಿಂದ 80ರವರೆಗೂ ನೀರೇ ಇರುತ್ತದೆ. ಯಾವುದೇ ಅವಯವ ಕೆಲಸ ಮಾಡಬೇಕಾದರೆ ನೀರು ಅತ್ಯಗತ್ಯ. ರೋಗಗಳು ನಮ್ಮ ಬಳಿಗೆ ಸುಳಿಯದೆ ಇರಬೇಕಾದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯಬೇಕು. ಆದರೆ ಎಷ್ಟು ತೂಕ ಇರುವ ವ್ಯಕ್ತಿ ಎಷ್ಟು ಪ್ರಯಾಣದ ನೀರು ಕುಡಿಯಬೇಕು ಎಂಬ ವಿಷಯದ ಮೇಲೆ ಒಂದು ಸಾಮಾನ್ಯ ಫಾರ್ಮುಲಾ ಇದೆ. ಈ ಸೂತ್ರವನ್ನು ಅನುಸರಿಸಿ ನಿಮ್ಮ ತೂಕವನ್ನು ಅವಲಂಭಿಸಿ ನೀವು ನಿತ್ಯ ಎಷ್ಟು ಲೀಟರ್ ನೀರನ್ನು ಕುಡಿಯಬೇಕು ಅಂತ ತಿಳಿದುಕೊಳ್ಳಬಹುದು.

ನೀರಿನ  ಸೂತ್ರ: 

ಒಬ್ಬ ವ್ಯಕ್ತಿ ನಿತ್ಯ ಎಷ್ಟು ಲೀಟರ್ ನೀರು ಕುಡಿಯಬೇಕು= (ಆ ವ್ಯಕ್ತಿಯ ತೂಕ/10)-2

ಉದಾಹರಣೆಗೆ 60 KG ತೂಕವುಳ್ಳ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣ = (60/10)-2   =4 ಲೀಟರ್

ನಿಮ್ಮ ತೂಕಕ್ಕೆ ತಕ್ಕಂತೆ ನೀರು ಕುಡಿಯರಿ:-

  • 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು.
  • 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು.
  • 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು.
  • 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು.
  • 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು.
  • 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು.
  • 75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು.
  • 80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು.
  • 85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು.
  • 90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು.
  • 95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು.
  • 100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ