ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಕಲಿ ಸಿಮ್ ಕಾರ್ಡ್ ಬಳಸಿ ಕೆಲವರು ಪಾತಕ ಕೃತ್ಯಗಳನ್ನು ನಡೆಸುತ್ತಿರುವುದು ಅಗಾಗ ವರದಿಯಾಗುತ್ತಲೇ ಇದೆ. ಮೊಬೈಲ್ ಸಿಮ್ ಕಾರ್ಡ್ ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ.
ಹಾಗಾಗಿ ಆಧಾರ್ ಲಿಂಕ್ ಮಾಡುವ ಮೂಲಕ ಸಿಮ್ ಬಳಕೆದಾರರನ್ನು ಪರಾಮರ್ಶಿಸಬೇಕೆಂದು ಇತ್ತೀಚೆಗಷ್ಟೇ ದೂರ ಸಂಪರ್ಕ ಇಲಾಖೆಯು ಎಲ್ಲ ಟೆಲಿಕಾಂ ಕಂಪನಿಗಳಿಗೂ ನಿರ್ದೇಶನ ನೀಡಿದೆ.
ಹೌದು. ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿ 2 ರ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಹಕರು ತಮ್ಮ ಸಿಮ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯ. ಒಂದು ವೇಳೆ ತಪ್ಪಿಸಿದರೆ ಸಂಪರ್ಕ ಕಡಿತಗೊಳ್ಳುತ್ತದೆ. ಆಧಾರ್ ಅನ್ನು ಮೊಬೈಲ್ ನಂಬರ್ ಗೆ ಸಂಪರ್ಕಿಸಲು ಮೊಬೈಲ್ ಸಿಮ್ ಕಾರ್ಡ್ ಬಳಕೆದಾರರ ಆಧಾರ್ ಕಾರ್ಡ್ ನ ಪ್ರತಿ, ಜೋಡಣೆ ಮಾಡುವ ಸಂದರ್ಭದಲ್ಲಿ ಬರುವ ಒಟಿಪಿ ಮತ್ತು ಬಯೋಮೆಟ್ರಿಕ್ ಪರಾಮರ್ಶೆಗೆ ಬೆರಳಚ್ಚು ದಾಖಲೆಗಳು ಬೇಕು.
ಲಿಂಕ್ ಮಾಡಲು 4 ಹಂತಗಳು ನಿಮ್ಮ ಮೊಬೈಲ್ ಸೇವೆ ನೀಡುವ ಕಂಪನಿಯಿಂದ ಆಧಾರ್ ಲಿಂಕ್ ಮಾಡುವಂತೆ ಎಸ್‌ಎಂಎಸ್ ಬಂದಿದೆ ಎನ್ನುವುದಾದರೆ, ಸಮೀಪದ ಏರ್ ಟೆಲ್, ವೋಡಾಫೋನ್, ಐಡಿಯಾ ಅಥವಾ ನಿಮ್ಮ ಮೊಬೈಲ್ ಸೇವಾದಾತರ ರೀಟೇಲ್ ಸ್ಟೋರ್ ಗೆ ಭೇಟಿ ನೀಡಿ.
ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.
ಹಾಗಾಗಿ ಈಗ ಟೆಲಿಕಾಂ ಕಂಪನಿಗಳು ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಎಲ್ಲಾ ಗ್ರಾಹಕರಿಗೆ ಮೆಸೇಜ್, ಮೇಲ್, ಜಾಹಿರಾತಿನ ಮೂಲಕ ಸೂಚನೆ ನೀಡುತ್ತಿವೆ.ತನ್ನ ಅಧಿಕೃತ ಸ್ಟೋರುಗಳಲ್ಲಿ, ನಿರ್ದಿಷ್ಟ ಅಂಗಡಿಗಳಲ್ಲಿ ಗ್ರಾಹಕರಿಗೆ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.
ಆದ್ರೂ ಕೆಲವರಿಗೆ ಕೆಲಸದ ಒತ್ತಡದಲ್ಲಿ ಅಂಗಡಿಗೆ ಹೋಗಿ ಲಿಂಕ್ ಮಾಡಿಕೊಳ್ಳಲು ಕಷ್ಟವಾಗುತ್ತೆ ಆಗಿದ್ರೆ ಇಲ್ಲಿದೆ ನೋಡಿ ನೀವೇ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳಬಹುದು.
ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ:-
ಮೊದಲಿಗೆ ಆಧಾರ್ ವೆಬ್‌ಸೈಟ್ ಓಪನ್ ಮಾಡಿಕೊಳ್ಳಿ…
ನಂತರ ಆಧಾರ್ ಅಪ್ಡೇಟ್ ಆಯ್ಕೆಯನ್ನು ಮಾಡಿಕೊಳ್ಳಿ.
ವೆಬ್‌ಸೈಟ್ ಓಪನ್ ಆಗುತ್ತೆ ಅಲ್ಲಿ ಕ್ಲಿಕ್ ಇಯರ್ ಬಟನ್ ಕ್ಲಿಕ್ ಮಾಡಿ.
ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಎಂಟರ್ ಮಾಡಿ.
ನಂತರ ಒಟಿಪಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಒಟಿಪಿ ನಂಬರ್ ಬರುತ್ತೆ.ನಂತರ ಒಟಿಪಿ ಯನ್ನು ಎಂಟ್ರಿ ಮಾಡಿ.
ಆಮೇಲೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನಿಮ್ಮ ಮಾಹಿತಿ ಹಾಕಿ ಮತ್ತು ಮೊಬೈಲ್ ನಂಬರ್ ಬದಲಿಸಿಕೊಳ್ಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.
ಕೆಜಿಎಫ್ ಪರಭಾಷೆಗಳಿಗೆ ಡಬ್ ಆಗಿ ಧೂಳು ಎಬ್ಬಿಸಿದ ಬೆನ್ನಲ್ಲೇ ಇತ್ತ ಬೇರೆ ಭಾಷೆಯ ಚಲನ ಚಿತ್ರಗಳು ಸಹ ಡಬ್ ಆಗಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿವೆ. ಇಷ್ಟು ದಿನ ಬೇರೆ ಭಾಷೆಯ ಚಲನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಲು ಭಾರಿ ವಿರೋಧ ವಿತ್ತು. ಡಬ್ ವಿಷಯವನ್ನು ಮಾತನಾಡುವಂತೂ ಇರಲಿಲ್ಲ. ಅದರಲ್ಲೂ ಕನ್ನಡ ಚಲನಚಿತ್ರ ಮಂಡಲಿಯಂತೂ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಕಾರಣ ಕನ್ನಡ ಚಲನಚಿತ್ರ ರಂಗವು ಮೊದಲೇ ಮಾರ್ಕೆಟಿಂಗ್ ವಿಚಾರದಲ್ಲಿ ಹಿಂದೆ ಇರುವುದರಿಂದ ಪರಭಾಷಾ ಚಿತ್ರಗಳು ಡಬ್ ಆದರೆ…
ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ… ಹಣ ಮತ್ತು ಆರೋಗ್ಯ ಎರಡೂ ಗಳಿಸಿ. ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ? ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ….
ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್ ಫ್ರೂಟ್ನ್ನು ಬೆಳೆಯಲಾಗುತ್ತದೆ. ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರ ದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ…
ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ…
ಘಟಬಂಧನ್ ನಾಯಕರು ಅವರ ಕ್ಷೇತ್ರದಲ್ಲಿ ಈ ಬಾರಿ ಅಡ್ರೆಸ್‌ಗೆ ರ‍್ತಾರಾ-ಚಿಂತನೆ ಮಾಡಲಿ ಕೋಲಾರ:- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕರೆತರುವ ಮುನ್ನ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್‌ರ ಘಟಬಂಧನ್ ತಂಡ ಕೋಲಾರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ, ಅವರ ಕ್ಷೇತ್ರಗಳಲ್ಲಿ ಅವರು ಅಡ್ರೆಸ್‌ಗೆ ರ‍್ತಾರ ಆಲೋಚಿಸಲಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಸವಾಲು ಹಾಕಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ…