ಸಿನಿಮಾ

ನಿಮ್ಮ ಮನೆ ಮನೆಗೆ “ಕಿಲಾಡಿ ಕುಟುಂಬ” ಬರುತ್ತಿದೆ! ಏನು ಅಂತ ಗೊತ್ತಾಗಬೇಕಾದರೆ ಈ ಲೇಖನಿ ಓದಿ……

726

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿಸಿದ್ದ 10 ಜನ ಫೈನಲಿಸ್ಟ್‌ ಗಳು ಮತ್ತೂಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಅಂದ ಆಗೇ ಆ ಕಾರ್ಯಕ್ರಮದ ಹೆಸರು “ಕಿಲಾಡಿ ಕುಟುಂಬ” ವಿಶೇಷವಾಗಿ ನವರಸನಾಯಕ ಜಗ್ಗೇಶ್‌ ಅವರು ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದ ಜಗ್ಗೇಶ್‌ ಅವರು ಇಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಅಲ್ಲದೆ, ಇವರೊಂದಿಗೆ ವಿಶೇಷವಾಗಿ ಡ್ರಾಮಾ ಜ್ಯೂನಿಯರ್, ಲಿಟ್ಲ ಚಾಂಪಿಯನ್ಸ್‌, ಸರಿಗಮಪ ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು ಈ ಕಿಲಾಡಿ ಕುಟುಂಬದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್‌ ಬೇರಾರೂ ಅಲ್ಲ, ನಟ ಜಗ್ಗೇಶ್‌! ಜೂನ್‌ 12ರ ಸೋಮವಾರದಿಂದ ಆರಂಭವಾಗಲಿರುವ ಈ ರಿಯಾಲಿಟಿ ಶೋ ಈವರೆಗೆ ಪ್ರಸಾರಗೊಂಡ ಕಾಮಿಡಿ ಕಾರ್ಯಕ್ರಮಗಳೆಲ್ಲವುಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಂತೆ ಇದು ಕೂಡ ಪ್ರೇಕ್ಷಕರನ್ನು ರಂಜಿಸಲೆಂದೇ ನಿರೂಪಿಸುತ್ತಿರುವ ಶೋ ಆಗಿದೆ. ಆದರೆ, ಈ ಬಾರಿ ವಿಶೇಷವಾಗಿ ಕಾಮಿಡಿಯ ಜೊತೆಗೆ ಎಲ್ಲಾ ಬಗೆಯ ನವರಸಗಳನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಶೋನಿಂದ ನಡೆಯುತ್ತಿದೆ.

ಎಂದಿನಂತೆ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಎಲ್ಲಾ ತಯಾರಿಯೂ ನಡೆದಿದೆ. ಇದರ ಜೊತೆಗೆ, ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಹುಡುಕಿ ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಹೊಸ ಪ್ರಯತ್ನವನ್ನು ಜೀ ವಾಹಿನಿ ತಂಡ ಕೈಗೆತ್ತಿಕೊಂಡಿದೆ.

ವಿಶೇಷವೆಂದರೆ ನವರಸ ನಾಯಕ ಜಗ್ಗೇಶ್‌ ಅವರೊಂದಿಗೆ, ಕಾಮಿಡಿ ಕಿಲಾಡಿಗಳ ವಿಜೇತರಾದ ಶಿವರಾಜ್‌ ಕೆ.ಆರ್‌. ಪೇಟೆ ಹಾಗೂ ನಯನ ಕೂಡ ನಿರೂಪಣೆಯ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಜೂ.12ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30ರ ವರೆಗೆ ಕಿಲಾಡಿ ಕುಟುಂಬ ಪ್ರಸಾರವಾಗಲಿದೆ. ಈ ಕಿಲಾಡಿ ಕುಟುಂಬ ವಾರದ 5 ದಿನವೂ ಪ್ರಸಾರವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಮೋದಿ ಸರ್ಕಾರದ ಹೊಸ ಶಾಕ್ !!!

    ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಸುದ್ದಿ

    ಸಾರ್ವಜನಿಕರ ಮುಂದೆಯೇ ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ …!

    20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…

  • ಉಪಯುಕ್ತ ಮಾಹಿತಿ

    ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ನೀವು ಕೂಡ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೀರಿ. ಆಗ ಟ್ರೈನ್‌ನ ಪ್ರತಿ ಕಂಪಾರ್ಟ್‌ಮೆಂಟ್‌ನ ಮೇಲೆ ಐದು ಡಿಜಿಟ್‌ ಹೊಂದಿರುವ ಒಂದು ನಂಬರ್‌ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ.ಈ ಐದು ಡಿಜಿಟ್‌ ನಂಬರ್‌ನ ಹಿಂದಿರುವ ರಹಸ್ಯ ಏನ್ ಗೊತ್ತಾ. ಆದರೆ ಯಾವತ್ತಾದರೂ ಈ ನಂಬರ್‌ ಏನು..? ಯಾಕೆ ಈ ನಂಬರ್‌ ಬರೆಯುತ್ತಾರೆ ಅನ್ನೋದನ್ನು ಯೋಚನೆ ಮಾಡಿದ್ದೀರಾ…? ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲೆಯೂ ಐದು ಡಿಜಿಟ್‌ನ ಈ ನಂಬರ್‌ ಇರುವುದು ಏಕೆ ಗೊತ್ತಾ..? ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲೆಯೂ…

  • ಮನರಂಜನೆ

    ಸಿಕ್ಕ ಸಿಕ್ಕ ಹುಡುಗಿಯರಿಗೆ ಮುತ್ತಿಟ್ಟು ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಸಖತ್ ಆಸಾಮಿ..!

    ಹಣ ಸಂಪಾದನೆಗೆ ಅನೇಕ ವಿಧಾನಗಳಿವೆ. ಆದ್ರೆ ಕೆಲವರು ಹಣ ಗಳಿಸುವ ವಿಧಾನ ವಿಚಿತ್ರ ಹಾಗೂ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಈ ಯುವಕ ಹಣ ಸಂಪಾದನೆ ಮಾಡುವ ವಿಧಾನ ದಂಗಾಗಿಸುತ್ತದೆ. ಆತ ಯಾವುದೇ ಸೆಲೆಬ್ರಿಟಿಯಲ್ಲ. ಆದ್ರೆ ಸಿನಿಮಾ ತಾರೆಯರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾನೆ. ನಟರು ಸಿನಿಮಾದಲ್ಲಿ ನೀಡುವ ಮುತ್ತಿಗಿಂತ ದುಪ್ಪಟ್ಟು ಮುತ್ತನ್ನು ಹುಡುಗಿಯರಿಗೆ ನೀಡಿದ್ದಾನೆ. ಮುತ್ತು ಕೊಟ್ಟು ಹಣ ಗಳಿಸುವುದು ಇವ್ನ ಕೆಲಸ. ಈತನ ಹೆಸ್ರು ಕ್ರಿಸ್ ಮೆನ್ರೋ. ಈತ ಪ್ರಾಂಕ್ ಸ್ಟಾರ್. ದಾರಿಯಲ್ಲಿ ಹೋಗುವ ಹುಡುಗಿಯರಿಗೆ ಮುತ್ತು ನೀಡಿ…

  • ಕರ್ನಾಟಕ

    ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್‌ ಡೂಡಲ್‌ ಗೌರವ…ಗೂಗಲ್‌ ಮುಖಪುಟದಲ್ಲಿ ರಾರಾಜಿಸುತ್ತಿರುವ ಕನ್ನಡದ ಕಂಪು…

    ಇಂದು ಡಿಸೆಂಬರ್‌ 29 ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

  • ಸಿನಿಮಾ

    (Video)ಕೇವಲ ಒಂದೇ ಗಂಟೆಯಲ್ಲಿ ಯೂಟ್ಯೂಬ್ ನಲ್ಲಿ ಚಿಂದಿಯಾಗಿದೆ ನಟ ಸಾರ್ವಭೌಮ ಚಿತ್ರದ ಟ್ರೈಲರ್!

    ನಟ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಅಪ್ಪು ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹಿರಿಯ ನಟಿ ಬಿ ಸರೋಜಾದೇವಿ, ಅಚ್ಯುತ್, ರವಿಶಂಕರ್ ಅವರು ಪೋಷಕ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರ ಪಾತ್ರವೂ ವಿಶೇಷವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಟ್ರೈಲರ್…