ರೆಸಿಪಿ

ನಿಮ್ಮ ಮನೆಯಲ್ಲೇ ರುಚಿ ರುಚಿಯಾದ “ಪಾನಿ ಪುರಿ” ತಯಾರಿಸಿ…

996

ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.

ಇದಕ್ಕೆಲ್ಲಾ ಒಂದೇ ಪರಿಹಾರ. ನಿಮ್ಮ ಮನೆಯಲ್ಲೇ ಪಾನಿ ಪುರಿ ತಯಾರಿಸಿ. ಹಾಗಾದ್ರೆ “ಪಾನಿಪುರಿ” ತಯಾರಿಸಲು ಹೇಗೆಂದು ತಿಳಿಯಲು ಮುಂದೆ  ಓದಿ…

ತಯಾರಿಸಲು ಬೇಕಾಗುವ ಸಾಮಗ್ರಿಗಳು:- 

ಪಾನಿತಯಾರಿಸಲು ಕೊತ್ತಂಬರಿ ಸೊಪ್ಪು – 1 ಕಟ್ಟು

ಪುದೀನಾ ಸೊಪ್ಪು – 1 ಕಟ್ಟು

ಹಸಿಮೆಣಸಿನಕಾಯಿ – 2 ರಿಂದ 3

ಹುಣಸೆಹಣ್ಣು – ದೊಡ್ಡ ನಿಂಬೆಗಾತ್ರದಷ್ಟು

ನಿಂಬೆಹಣ್ಣು – 1

ಕಾಳುಮೆಣಸು – 2 ಟೀ ಚಮಚ

ಜೀರಿಗೆ – 2 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಕುದಿಸಿ ಆರಿಸಿದ ನೀರು – ಸುಮಾರು ಒಂದೂವರೆ ಲೀಟರ್

ಆಲೂ ಪಲ್ಯ ತಯಾರಿಸಲು: 

ಒಂದು ದೊಡ್ಡ ಆಲೂಗಡ್ಡೆ

ಕೆಂಪು ಮೆಣಸಿನ ಪುಡಿ – 1 / 2 ಚಮಚ

ಕಾಳುಮೆಣಸಿನ ಪುಡಿ – 1 / 4 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾವಿನ ಹಣ್ಣಿನ ಪುಡಿ  – 1 / 4 ಚಮಚ /ನಾಲ್ಕಾರು ಹನಿ ನಿಂಬೆರಸ

ಈರುಳ್ಳಿ – 1

ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ

ತಯಾರಿಸುವ ವಿಧಾನ : 

  • ಕರಿಮೆಣಸು, ಜೀರಿಗೆಯನ್ನು ಹುರಿದು ಪುಡಿಮಾಡಿಕೊಳ್ಳಿ. ಹರಳು ಉಪ್ಪನ್ನು ಸೇರಿಸುವುದಾದರೆ ಅದನ್ನೂ ಸ್ವಲ್ಪ ಹುರಿದುಕೊಳ್ಳಬೇಕು.
  • ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹುಣಸೆಹಣ್ಣು, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿ, ಚೆನ್ನಾಗಿ ಸೋಸಿ ಇಟ್ಟುಕೊಳ್ಳಬೇಕು.
  • ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ, ಪುಡಿಮಾಡಿದ ಜೀರಿಗೆ, ಕರಿಮೆಣಸನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲಸಬೇಕು. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.

ಆಲೂ ಪಲ್ಯ :

  • ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
  • ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು.
  • ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು.
  • ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ,ಈ ದಿನದ ರಾಶಿ ಭವಿಷ್ಯದಲ್ಲಿ ನಿಮಗೆ ಶುಭಕರವಾಗಿದಯೇ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(13 ನವೆಂಬರ್, 2018) ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನಿಮ್ಮ…

  • ಮನರಂಜನೆ

    ಬಿಗ್ ಬಾಸ್ ಮನೆಯಲ್ಲಿ, ಇವರನ್ನು ಒದೆಯುವ ಹಂತಕ್ಕೆ ಹೋದ್ರಾ..!ಹಾಗಾದ್ರೆ ನಿಜವಾಗ್ಲು ಒದ್ರ ಇಲ್ವಾ…ತಿಳಿಯಲು ಮುಂದೆ ಓದಿ…

    ಈ ವಾರ ಬಿಗ್ ಬಾಸ್ ಮನೆಯಲ್ಲಿ ನೀಡಿದ್ದ ಲಕ್ಸುರಿ ಬಜೆಟ್ ಟಾಸ್ಕ್ ‘ಕಾಲಾಯ ತಸ್ಮೈ ನಮಃ’ ಮುಕ್ತಾಯವಾಯ್ತು.
    ಮನೆಯಲ್ಲಿರುವ ಸ್ಪರ್ದಿಗಳೆಲ್ಲ ಉತ್ಸಾಹದಿಂದ ಆಟದಲ್ಲಿ ಭಾಗವಹಿಸಿದ್ದರೆಂದು ‘ಬಿಗ್ ಬಾಸ್’ ಮನೆಯ ಸ್ಪರ್ದಿಗಳನ್ನೆಲ್ಲ ಶ್ಲಾಘಿಸಿದ್ದಾರೆ.

  • ಉಪಯುಕ್ತ ಮಾಹಿತಿ

    ಈಗ ಬಂದಿದೆ ಹೊಸ ಸ್ಫೋಟಗೊಳ್ಳದ ಪಾರದರ್ಶಕ ಗ್ಯಾಸ್ ಸಿಲಿಂಡರ್..!ತಿಲಿಯಲು ಈ ಲೇಖನ ಓದಿ..

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

  • ಸುದ್ದಿ

    ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

    ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…

  • ಸುದ್ದಿ

    ಹಳಿಗಳಲ್ಲಿ ಇನ್ಮುಂದೆ ಕಂಪನಿ ರೈಲು ಸಂಚಾರ…!

    ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಐಆರ್‌ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದ‌ಕ್ಕೂ ಮುನ್ನ…

  • ವಿಸ್ಮಯ ಜಗತ್ತು

    ಈ ಕಾಲದಲ್ಲೂ ಈ ಜನ ವರ್ಷ ಪೂರ್ತಿ ನೀರಿನಲ್ಲೇ ವಾಸ ಮಾಡುತ್ತಾರೆ!

    ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.