ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.
ಕಣ್ಣು ಮುಚ್ಚಾಲೆ : ಇದು Hide and Seek ಗೆ ಹೋಲಿಸಬಹುದು, ಇದು ಮಕ್ಕಳ ಆಟ, ಇದನ್ನು ಸುಮಾರು ಐದರಿ೦ದ ಹತ್ತು ಮಕ್ಕಳಗು೦ಪು ಆಡಬಹುದು, ಗೋಡೆಗೆ ಮುಖ ಮಾಡಿ ಕಣ್ಣು ಮುಚ್ಚಿಕೊ೦ಡು ಒ೦ದರಿ೦ದ ನೂರರವರೆಗೆ ಎಣಿಸುತ್ತಿರುವಾಗ ಉಳಿದವರು ಹೋಗಿ ಬಚ್ಚಿಟ್ಟುಕೊಳ್ಳಬೇಕು. ಎಣಿಕೆ ಮುಗಿದನ೦ತರ ಬಚ್ಚಿಟ್ಟುಕೊ೦ಡಿರುವವರನ್ನು ಹುಡುಕಿ ಅವರ ಹೆಸರನ್ನು ಕೂಗಿ ಗೋಡೆಗೆ ಕೈ ತಾಕಿಸಬೇಕು.
ಬುಗುರಿ : ಈ ಆಟವನ್ನು ಸಾಮಾನ್ಯವಾಗಿ ಗಂಡು ಮಕ್ಕಳು ಹಳ್ಳಿಗಳಲ್ಲಿ ಬುಗುರಿ ಆಟವನ್ನು ಹೆಚ್ಚಾಗಿ ಆಡುತ್ತಾರೆ. ಈ ಬುಗುರಿ ಆಟಕ್ಕೆ ಇತಿಹಾಸದ ಹಿನ್ನೆಲೆ ಸಮೃದ್ದಿಯಾಗಿ ಮಹಾಭಾರತ ಕಥೆಯಲ್ಲಿ ಪಾಂಡವರು ಮತ್ತು ಕೌರವರು ಆಟದ ಸನ್ನಿವೇಶದಲ್ಲಿ ಕಾಣಿಸುತ್ತದೆ.
ಹಳ್ಳಿಗಳಲ್ಲಿ ಈಗಲೂ ಕೆಲುವು ಕಡೆ ಈ ಆಟದ ಕುರುಹು ಕಾಣಬರುತ್ತದೆ. ಉದಾ: ಗೌರಿಬಿದನೂರಿನ ತಾಲೂಕಿನ ಮಂಚೇನ ಹಳ್ಳಿಯಾ ” ಭೀಮನ ಬುಗುರಿ (ಬೆಟ್ಟ).
ಈ ಆಟದ ನಿಯಮ ಈ ರೀತಿ : ಮೊದಲು ಹುಡಗರು ಬುಗುರಿಯನ್ನು ದಾರದಿಂದ ಹೊಸೆದ ಚಾಟಿಯನ್ನು ಸುತ್ತಿ ಆಟದಲ್ಲಿ ಇರುವ ಹುಡುಗುರು ಬಂಗರವನ್ನು ಸ್ಪರ್ಶಿಸಿ ತಕ್ಷಣ ನೆಲಕ್ಕೆ ಹಾಕಿ ನಂತರ ಚಾಟಿಯ ಸಹಾಯದಿಂದ ಯಾರು ಕ್ಯಲ್ಲಿ ಹಿಡಿಯುತ್ತಾರು… ಅವರು ಆಟ ಆಡಲು ಸಿದ್ದವಾಗುತ್ತಾರೆ. ಅಂತಿಮವ ಬುಗುರಿಯನ್ನು ನೆಲದಲ್ಲಿ ಇಡುತ್ತಾನೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ಗುನ್ನ (ತೂತು) ಮಾಡುತ್ತಾರೆ.
ಹೀಗೆಯೇ ಆಟ ಮುಂದುವರೆಯುತ್ತದೆ. ಈ ಆಟದಲ್ಲಿ ಬುಗುರಿಗಳು ಎರಡು ಹೋಳು ಆಗುವುದು ಸರ್ವೇ ಸಾಮಾನ್ಯ. ನೆಲಕ್ಕೆ ಬುಗುರಿ ಬೀಳದ ಹಾಗೆ ಕ್ಯೆಲ್ಲಿ ಹಿಡಿದರೆ ಅದಕ್ಕೆ “ಅಂತರ ಮಂಗ” ಎನ್ನುತ್ತಾರೆ. ಆಟಗಾರನ ಅನುಭವದಿಂದ ಬುಗುರಿಯನ್ನು ಅನೇಕ ರೀತಿ ಆಡಿಸುತ್ತಾನೆ.
ಕುಂಟು ಬಿಲ್ಲೆ : ಇದು ಚಿಕ್ಕ ಹೆಣ್ಣು ಮಕ್ಕಳು ಆಡುವ ಆಟ. ಚೌಕಾಕಾರಾದ ಮನೆಗಳನ್ನು ಬರೆದು ಮನೆಯಿಂದ ಮನೆಗೆ ಕುಣಿಯುತ್ತ ಆಡುವ ಆಟ
ಚಿನ್ನಿ ದಾಂಡು : ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ . ಇದನ್ನು ವೈಯಕ್ತಿಕವಾಗಿ ಅಥವಾ ತಂಡಗಳಾಗಿ ಆಡಬಹುದು.
ವ್ಯವಸ್ಥೆ/ಸಲಕರಣೆಗಳು : ಆಡಲು ಸಾಕಷ್ಟು ಜಾಗ.
ಸುಮಾರು ಒಂದು ಗೇಣು ಉದ್ದದ ನೆಲದ ಮೇಲೆ ಕೊರೆದ ಒಂದು ಗುಂಡಿ / ಕುಳಿ / ಉಳ್ಳ.
ಗುಂಡಿಯಷ್ಟೇ ಉದ್ದವಾದ ಮರದ ಕೋಲಿನಿಂದ ಮಾಡಿದ ಚಿನ್ನಿ / ಹಾಣೆ / ಗಿಲ್ಲಿ. ಇದರ ಎರಡೂ ಬದಿ ಚೂಪಾಗಿರಬೇಕು.
ಚಿನ್ನಿಗಿಂತ ಕನಿಷ್ಠ ಎರಡೂವರೆ-ಮೂರು ಪಟ್ಟು ಉದ್ದವಾದ, ಮರದ ಕೋಲಿನಿಂದ ಮಾಡಿದ ನೇರವಾದ ದಾಂಡು.
ಲಗೋರಿ : ಲಗೋರಿ !!! ಅಂತ ಕಿರುಚಿದಾಗ ಮೈ ಎಲ್ಲ ಜುಮ್ ಅನ್ನುವುದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು.
ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ.
ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿ ಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು.
ಚನ್ನೆಮಣೆ : ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು… ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ….
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ (ಹೆಚ್ಹು ಕಾಳನ್ನು ಕೂಡಿ ಹಾಕಿದವನು).
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸಂಚಿಕೆ 5ರಲ್ಲಿ ವಿಜೇತರಾಗಿದ್ದ ಒಳ್ಳೆ ಹುಡುಗ ಪ್ರಥಮ್,ಈಗಂತೂ ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.ರಾಜ್ಯದಲ್ಲಿ ಯಾರಿಗೆ ಏನೇ ಆದರೂ, ಅದರ ಬಗ್ಗೆ ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ.
ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯೂನಿಟ್ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ….
ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.
ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು. ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ…
ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ:-9353957085 ಮೇಷ(27ಅಕ್ಟೋಬರ್, 2019) : ಮಾನಸಿಕ ಶಾಂತಿಗಾಗಿ ನಿಮ್ಮಒತ್ತಡವನ್ನು ಪರಿಹರಿಸಿ. ಇತರರ ಮೇಲೆ ಪ್ರಭಾವಬೀರಲು ತುಂಬಾ ವೆಚ್ಚ ಮಾಡಬೇಡಿ.ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆಎಚ್ಚರ ವಹಿಸಿ. ನಿಮ್ಮನ್ನು ಯಾರಾದರೂಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಸಂತಸದ ಪ್ರಯಾಣ ತೃಪ್ತಿಕರವಾಗಿರುತ್ತದೆ.ನಿಮ್ಮ ಸಂಗಾತಿ ನಿಮಗೆ ಮನಸ್ಸಿಲ್ಲದಿದ್ದರೂಹೊರಗೆ ಹೋಗುವಂತೆ…
ಚಾರ್ಲಿ ಚಾಪ್ಲಿನ್ ಹೆಸರು ಕೇಳದವರಿಲ್ಲ. ಹಾಸ್ಯ ಲೋಕದ ಈ ಸಾಮ್ರಾಟ 1913ರಂದು ಡಿಸೆಂಬರ್ 16ರಂದು ವಾರಕ್ಕೆ 150 ಡಾಲರ್ಗಳಿಗೆ ಸಿನಿಮಾ ವೃತ್ತಿ ಆರಂಭಿಸಿದರು. ಈ ಜಗದ್ವಿಖ್ಯಾತ ಕಾಮಿಡಿ ಸೂಪರ್ಸ್ಟಾರ್ ಬಗ್ಗೆ ಚುಟುಕು ಸುದ್ದಿ. ಇಂಗ್ಲಿಷ್ ಹಾಸ್ಯ ನಟ, ಸಿನಿಮಾ ನಿರ್ಮಾಪಕ ಮತ್ತು ಸಂಯೋಜಕ ಸರ್ ಚಾರ್ಲೆಸ್ ಸ್ಪೆನ್ಸರ್ ಚಾರ್ಲಿ ಚ್ಲಾಪಿನ್ ಜನಿಸಿದ್ದು 16ನೇ ಏಪ್ರಿಲ್ 1889ರಲ್ಲಿ.