ಜ್ಯೋತಿಷ್ಯ

ನಿಮ್ಮ ದಿನ ಭವಿಷ್ಯ ಶುಭವೋ ಅಶುಭವೋ ಹೇಗಿದೆ..?ನೋಡಿ ತಿಳಿಯಿರಿ…

341

ಶುಕ್ರವಾರ, 06/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ಇವರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ : 06:16
ಸೂರ್ಯಾಸ್ತ : 18:28
ಪಕ್ಷ : ಕೃಷ್ಣ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಜ್ಯೆಷ್ಟ್ಯ
ಯೋಗ : ವರಿಯಾನ್
ಪ್ರಥಮ ಕರಣ : ಗರಜ
ಸೂರ್ಯ ರಾಶಿ : ಮೀನ
ಅಭಿಜಿತ್ ಮುಹುರ್ತ : 11:57 – 12:46
ದುರ್ಮುಹೂರ್ತ : 08:42 – 09:31
ದುರ್ಮುಹೂರ್ತ : 12:46 – 13:35
ರಾಹು ಕಾಲ: 10:50 – 12:22
ಗುಳಿಕ ಕಾಲ: 07:47 – 09:19
ಯಮಗಂಡ: 15:25– 16:56

ಮೇಷ:

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಂಗಳ ಕಾರ್ಯದಲ್ಲಿ ಭಾಗವಹಿಸುವತ್ತಿರಿ. ನಿಮ್ಮ ಮಾತಿನ ವೈಖರಿಯಿಂದ ಎಲ್ಲರನ್ನು ಆಕರ್ಷಿಸುವಿರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗುವುದು.

ವೃಷಭ:-

ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಅಧಿಕ ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು.

ಮಿಥುನ:

ಶಿವನ ಕೃಪೆಯಿಂದ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗುವುದು. ಮನಸ್ಸಿನ ತುಮುಲಗಳನ್ನು ಭಗವಂತನ ಮುಂದೆ ಅಲ್ಲದೆ ಇತರರ ಮುಂದೆ ಹೇಳಿಕೊಳ್ಳದಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕಟಕ :-

ದೂರ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ವಾಹನ ಸುಖ, ಆಸ್ತಿಯ ಖರೀದಿಯ ಬಗ್ಗೆ ಮಾತುಕತೆ ಉಂಟಾಗುವುದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯುಂಟಾಗುವ ಸಾಧ್ಯತೆ ಇರುತ್ತದೆ.

 ಸಿಂಹ:

ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳ್ಳೆಯಾದಗುವುದು. ಯಾವುದೇ ಕಾರಣಕ್ಕೂ ಸ್ವಯಂ ಮಾತ್ರೆಗಳನ್ನು ನುಂಗದೆ ವೈದ್ಯರ ಶಿಫಾರಸಿನಂತೆ ನಡೆದುಕೊಂಡಲ್ಲಿ ಹೆಚ್ಚಿನ ಹಾನಿ ಆಗುವುದಿಲ್ಲ. ದೂರದ ಪ್ರಯಾಣ ಅನಿವಾರ್ಯವಾಗಲಿವೆ.

ಕನ್ಯಾ :-

ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ನಿಮ್ಮ ಮಾತಿನ ಮೂಲಕ ಎಲ್ಲರಲ್ಲು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ಆ ಮೂಲಕ ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

ತುಲಾ:

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಹಾಗೇಹೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

ವೃಶ್ಚಿಕ :-

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಪ್ರಯತ್ನದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

ಧನಸ್ಸು:

ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಬಹಳ ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

ಮಕರ :-

ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆಗಳು. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

ಕುಂಭ:-

ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವ ಸಂಭವ ಹೆಚ್ಚು. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

ಮೀನ:-

ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ ನಿರ್ಧಾರ ಮಾಡಿ . ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.

ಪಂಡಿತ್ ಸುದರ್ಶನ್ ಭಟ್

ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು  ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು : 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಪಾರ್ಲೆ’ ಉದ್ಯೋಗಿಗಳ ಕೆಲಸಕ್ಕೆ ಕುತ್ತು : 10 ಸಾವಿರ ಕಾರ್ಮಿಕರಿಗೆ ಸಂಕಷ್ಟ……!

     ಏಳೆಂಟು ದಶಕಗಳ ಇತಿಹಾಸ ಹೊಂದಿರುವ ದೇಶದ ಅತ್ಯಂತ ದೊಡ್ಡ ಬಿಸ್ಕತ್ ತಯಾರಿಕಾ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಉದ್ಯೋಗ ನಷ್ಟ ಉಂಟಾಗಿರುವ ವರದಿಯ ಬೆನ್ನಲ್ಲೇ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪಾರ್ಲೆ ಬಿಸ್ಕತ್ ಸಂಸ್ಧೆ ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ ಎಂದು ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ. ಜಿಎಸ್ ಟಿ ಕಡಿತಗೊಳಿಸುವಂತೆ ನಾವು…

  • ಸಿನಿಮಾ

    ನವರಸನಾಯಕನ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ರೋಶ!ಕಾರಣ ಏನು ಗೊತ್ತಾ?

    ಕನ್ನಡ ಚಿತ್ರ ರಂಗದ ನವರಸನಾಯಕ ನಟ ಮತ್ತು ರಾಜಕಾರಣಿ ಜಗ್ಗೇಶ್’ರವರು ಮಾಡಿದ ಒಂದು ಟ್ವೀಟ್ ಕಾರಣದಿಂದಾಗಿ ವಿವಾದದಲ್ಲಿ ಸಿಲುಕಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

  • ಸುದ್ದಿ

    ಪ್ರವಾಹದಿಂದ ಪಾರು ಮಾಡುವಂತೆ ಕೋರಿ 108 ಬಗೆಯ ಸಿಹಿ ಮಾಡಿ ದೇವಿಗೆ ವಿಶೇಷ ಪೂಜೆ…!

    ಉತ್ತರ ಕರ್ನಾಟಕ, ಕರಾವಳಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಪ್ರವಾಹಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಲ್ಲಿ ಅನಾಹುತದಿಂದ ಪಾರು ಮಾಡುವಂತೆ ಇಲ್ಲೊಂದು ದೇವಾಲಯದಲ್ಲಿ ವಿಭಿನ್ನ ರೀತಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಜಿಲ್ಲೆಯ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿಪರಾಶಕ್ತಿ ದೇವಾಲಯದಲ್ಲಿ ವಿಶೇಷ ರೀತಿಯ ತಿಂಡಿ ತಿನಿಸುಗಳು ಮಾಡಿ ಪೂಜೆ ಮಾಡಲಾಗಿದೆ. ವಿವಿಧ ಬಗೆಯ ಮೈಸೂರ್ ಪಾಕ್, ಲಾಡು, ಜಹಂಗೀರ್, ಜಿಲೇಬಿ, ಚಕ್ಕುಲಿ, ನಿಪ್ಪಟ್, ಪುರಿಉಂಡೆಯಂತಹ 108 ಬಗೆಯ ತಿಂಡಿಗಳನ್ನು ಮಾಡಲಾಗಿತ್ತು. ಅದನ್ನು ದೇವರಿಗೆ ಅರ್ಪಿಸಿ ನಂತರ ಭಕ್ತರಿಗೂ…

  • Sports

    ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ…!

    ಬೆಂಗಳೂರು: ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಗೆಲುವು ತಂದು ಕೊಟ್ಟ ಟೀಂ ಇಂಡಿಯಾಗೆ ಕೋಟಿ ಕೋಟಿ ಭಾರತೀಯರು ಭೇಷ್, ಇಂಡಿಯಾ ಭೇಷ್ ಎಂದು ಬೆನ್ನು ತಟ್ಟಿದರು. ಹೌದು. ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಏಳನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ. ಟೀಂ…

  • ಜ್ಯೋತಿಷ್ಯ

    ಯಶ್-ರಾಧಿಕಾ ಮುದ್ದು ಮಗಳಿಗೆ ನಾಮಕರಣ ಸಮಾರಂಬ….

    ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳ ಹೆಸರಿನ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಇತ್ತು. ಬೇಬಿ ವೈಆರ್ ಎಂದೇ ಎಲ್ಲರು ಕರೆಯುತ್ತಿದ್ದರು. ಅಭಿಮಾನಿಗಳು ಸಹ ಸಾಕಷ್ಟು ಹೆಸರುಗಿಳಿಂದ್ದ ಯಶ್-ರಾಧಿಕಾ ಮುದ್ದು ಮಗಳನ್ನು ಕರೆಯುತ್ತಿದ್ದರು. ಆದ್ರೀಗ ಬೇಬಿ ವೈಆರ್ ಗೆ ನಾಮಕರಣ ಮಾಡಲಾಗಿದೆ. ನಿನ್ನೆ(ಜೂನ್ 23) ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಲಾಗಿದೆ. ಈ ಸಮಾರಂಭಕ್ಕೆ ಕುಟುಂಬದವರು, ಆಪ್ತರಿಗೆ ಮಾತ್ರ…

  • ಆರೋಗ್ಯ

    ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ಈ ವಿಧಾನಗಳನ್ನು ಅನುಸರಿಸಿ…….

    ಕಾಲ ಕಾಲಕ್ಕೆ ಬದಲಾಗುವ ವಾತಾವರಣದ ಜೊತೆಗೆ ಆರೋಗ್ಯದ ಹೊಂದಾಣಿಕೆ ಮಾಡಿಕೊಳ್ಳುವುದು ಸಾಹಸವೇ ಸರಿ. ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಒಸರುವ ಬೆವರು ನೀಡುವ ಬಾಧೆಯಂತು ಹೇಳತೀರದು.