ಜೀವನಶೈಲಿ

ನಿಮ್ಮ ಗಡ್ಡ ಚೆನ್ನಾಗಿ ಬೇಗ ಬೆಳೆಯಬೇಕಂದ್ರೆ, ಈ ಲೇಖನಿಯಲ್ಲಿ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ…

5914

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಗಡ್ಡ ಬಿಡುವುದು ಇಂದಿನ ಯುವಕರ ಫ್ಯಾಷನ್ ಆಗಿ ಹೋಗಿದೆ. ಹಿಗಂತೂ ಗಡ್ಡ ಬಿಡುವ ಸ್ಟೈಲ್ ಚೇಂಜ್ ಆಗಿದೆ.ವಿವಿದ ರೀತಿಯಲ್ಲಿ ಗಡ್ಡವನ್ನು ಬಿಡುತ್ತಾರೆ. ಅಂದ ಹಾಗೆ ಸಿನೆಮಾ ಸೆಲೆಬ್ರೆಟಿಗಳನ್ನು ಅನು ಕರಿಸುವುದು ಸಹ ಟ್ರೆಂಡ್ ಆಗಿದೆ.

ಯುವಕರು, ಕಾಲೇಜು ಹುಡುಗರು ವಿಭಿನ್ನ ರೀತಿಯ ಗೆಟಪ್’ಗಳನ್ನು ಬಿಡುತ್ತಾರೆ.ಹುಡುಗಿಯರು ಸಹ ವಿಭಿನ್ನ ರೀತಿಯ ಗಡ್ಡ ಬಿಡುವವರನ್ನು ತುಂಬಾ ಇಷ್ಟ ಪಡುವುದು ಉಂಟು.

ಇಷ್ಟೆಲ್ಲಾ ಮಾಡಬೇಕಂದ್ರೆ ಗಡ್ಡ ಚೆನ್ನಾಗಿ ಬೆಳೆಯಬೇಕಲ್ವಾ? ಹಾಗಾದ್ರೆ ಗಡ್ಡ ಚೆನ್ನಾಗಿ ಬೆಳೆಯಬೇಕಂದ್ರೆ ಏನು ಮಾಡ್ಬೇಕು ಗೊತ್ತಾ..?

*ಮೊದಲನಯದಾಗಿ ಗಡ್ಡವು ಚೆನ್ನಾಗಿ ಬೆಳೆಯಬೇಕೆಂದರೆ ನೀವು ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆ ಮಾಡುವುದರಿಂದ ಗಡ್ಡಕ್ಕೆ ಮಾತ್ರವಲ್ಲದೆ ನಿಮ್ಮ ದೇಹಕ್ಕೂ ಕೂಡ ಒಳ್ಳೆಯದು.

*ವಾರಕ್ಕೊಮ್ಮೆ ನಿಮ್ಮ ತ್ವಚೆಯನ್ನು ಎಕ್ಸ್ಫೋಲಿಯೇಟ್ ಮಾಡಿ. ಇದು ನಿಮ್ಮ ಮುಖದಲ್ಲಿರುವ ನಿರ್ಜೀವ ಕೋಶಗಳನ್ನು ತೆಗೆದುಹಾಕಿ, ಗಡ್ಡವು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

*ಗಡ್ಡವು ಎಂದಿಗೂ ಒಂದೇ ರೀತಿಯಲ್ಲಿ ಸುಂದರವಾಗಿ ಬೆಳೆಯುವುದಿಲ್ಲ. ಅದಕ್ಕಾಗಿ ಬೆಳೆಯುವ ಗಡ್ಡವನ್ನು ಸರಿಯಾದ ರೀತಿ ಬೆಳೆಯುತ್ತಿವೆ ಎಂದು ಪರಿಶೀಲಿಸಿ.

*ಪ್ರತಿದಿನ 2.5 ಮಿ.ಗ್ರಾಂ ಬಯೋಟೀನ್ ಅನ್ನ ಸೇವಿಸಿ. ಇದು ನಿಮ್ಮ ಗಡ್ಡವು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

*ಆದಷ್ಟೂ ಒತ್ತಡದಿಂದ ದೂರವಿರಿ. ಆಗ ಗಡ್ಡ ಬೇಗ ಬೆಳೆಯುತ್ತದೆ.

ಇಲ್ಲಿ ಓದಿ:- ಗಡ್ಡ ಬಿಟ್ರೆ ಏನೆಲ್ಲಾ ಉಪಯೋಗ ಇದೆ ಗೊತ್ತಾ..!ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ…

*ಯಾವಾಗಲೂ ಟ್ರಿಮ್ ಮಾಡುವುದು ಕಡಿಮೆ ಮಾಡಿ. ಆರು ವಾರಕ್ಕೊಮ್ಮೆ ನಿಮ್ಮ ಗಡ್ಡವನ್ನು ಟ್ರಿಮ್ ಮಾಡಿ ಸಾಕು. ಇದರಿಂದ ನಿಮ್ಮ ಗಡ್ಡ ಚೆನ್ನಾಗಿ ಬೆಳೆಯಲು ಸಮಯ ದೊರೆಯುತ್ತದೆ.

*ಮುಖಕ್ಕೆ ಮಾಡುವ ಮಸಾಜ್ ನಿಮ್ಮ ಮುಖದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹಾಗೂ ಇದರಿಂದ ನಿಮ್ಮ ಗಡ್ಡವು ಚೆನ್ನಾಗಿ ಮತ್ತು ಬೇಗ ಬೆಳೆಯುತ್ತದೆ.

ಒಮ್ಮೆ ಈ ಎಲ್ಲಾ ಕ್ರಮಗಳನ್ನು ಅನುಸರಿಸಿ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ