ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದ್ರೌಪದಿ ಬಗ್ಗೆ ಎಲ್ಲರೂ ಕೇಳೆ ಇರುತ್ತೀರಾ.ಅದರಲ್ಲೂ ಮಹಾಭಾರತದಲ್ಲಿ ದ್ರೌಪದಿಯು ಪಂಚ ಪಾಂಡವವರನ್ನು ಮದುವೆಯಾದ ಬಗ್ಗೆ ನಾವು ಪುರಾಣಗಳಲ್ಲಿ ಓದಿರುತ್ತೇವೆ ಮತ್ತು ಹಲುವು ಚಿತ್ರಗಳ ಮುಖಾಂತರ ನೋಡಿರುತ್ತೇವೆ.
ಆದರೆ ಅಂತಹ ಘಟನೆ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಐದು ಮಂದಿಯನ್ನು ಮದುವೆಯಾಗುವುದು ಅಸಾಧ್ಯವೆನಿಸಿದರೂ ನಡೆದಿದೆ. ಆದರೆ ಇಲ್ಲೊಬ್ಬಳು ಮಹಿಳೆ ಈ ಅಸಂಭವವನ್ನು ಸಂಭವವಾಗಿಸಿದ್ದಾಳೆ.
ರಾಜೋ ಎಂಬ ಮಹಿಳೆ ಐದು ಮಂದಿ ಸಹೋದರರನ್ನು ಮದುವೆಯಾಗಿದ್ದಾಳೆ. ಎಲ್ಲಾ ಪತಿಯರು ತನ್ನನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ನಾನು ತುಂಬಾ ಅದೃಷ್ಟವಂತೆ ಎಂದು ಆಕೆ ಹೇಳಿದ್ದಾಳೆ. ನಿಮಗೆ ಇದು ಆಚ್ಚರಿ ಅನಿಸಿದರೂ ನಿಜ.
ಆಕೆ ಡೆಹ್ರಾಡೂನ್‌ನವಳು, ಆಕೆಯ ಹೆಸರು ರಾಜೋ. ಡೆಹ್ರಾಡೂನ್‌ಗೆ ಸಮೀಪದ ಹಳ್ಳಿಯೊಂದರಲ್ಲಿ ತನ್ನ ಐದು ಮಂದಿ ಪತಿಯರೊಂದಿಗೆ ವಾಸಿಸುತ್ತಾಳೆ. ಆಕೆ ಎಲ್ಲಾ ಪತಿಯರೊಂದಿಗೂ ತುಂಬಾ ಸಂತೋಷದಿಂದ ಇದ್ದಾಳೆಂದು ಹೇಳುತ್ತಾಳೆ.
ಆಕೆ ಹೇಳುವ ಪ್ರಕಾರ ಇದು ನಮ್ಮ ಕುಟುಂಬದ ಸಂಪ್ರದಾಯ ಹಲವಾರು ಶತಮಾನಗಳಿಂದಲೂ ಈ ಸಂಪ್ರದಾಯವನ್ನು ಕುಟುಂಬವು ಪಾಲಿಸಿಕೊಂಡು ಬರುತ್ತಾ ಇದೆ ಮತ್ತು ಕುಟುಂಬದ ಸದಸ್ಯರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆಕೆ ಹೇಳುತ್ತಾರೆ.
ಈ ಸಂಪ್ರದಾಯಕ್ಕೆ ಪಂಚಪಾಂಡವರು ಪ್ರೇರಣೆಯಂತೆ! ಹೌದು, ಮಹಾಭಾರತದಲ್ಲಿ ಐದು ಮಂದಿ ಪಾಂಡವರು ದ್ರೌಪದಿಯನ್ನು ಮದುವೆಯಾಗಿದ್ದರು.
ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣ ಗಂಡು ಹಾಗೂ ಹೆಣ್ಣಿನ ನಡುವಿನ ಸಂಖ್ಯಾನುಪಾತವು ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣವಾಗಿದೆ. ಈ ಪ್ರದೇಶದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ ಐದು ಮಂದಿ ಒಬ್ಬಳನ್ನೇ ಮದುವೆಯಾಗಿದ್ದಾರೆ.
ರಾಜೋಗೆ ಈಗ 18 ತಿಂಗಳ ಮಗುವಿದೆ. ಆದರೆ ಈ ಮಗುವಿಗೆ ತಂದೆ ಯಾರು ಎನ್ನುವ ಬಗ್ಗೆ ಇದುವರೆಗೆ ತಿಳಿದಿಲ್ಲ.
ಆಕೆಯ ಪತಿಯರ ವಯಸ್ಸು 18ರಿಂದ 34 ರಾಜೋ ಮದುವೆಯಾಗಿರುವ ಸಹೋದರರ ವಯಸ್ಸು 18ರಿಂದ 34ರ ನಡುವೆ ಇದೆ. ಯಾರಿಗೂ ಇದರ ಬಗ್ಗೆ ಹೊಟ್ಟೆಕಿಚ್ಚು ಇಲ್ಲ. ರಾಜೋ ಎಲ್ಲಾ ಪತಿಯರೊಂದಿಗೂ ಸಮಾನವಾಗಿ ಸಮಯ ಕಳೆಯುತ್ತಾಳೆ.
ಇನ್ನೂಇಂತಹ ಸಂಪ್ರದಾಯಗಳಿಗೆ ಕೊನೆ ಹಾಡಲು ಆಗಿಲ್ಲ ಎನ್ನುವುದೇ ಸೋಜಿಗ….
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….
ಪ್ರತಿ ವರ್ಷದಂತೆ ಈ ಬಾರಿಯೂ ಹೊಸತನದೊಂದಿಗೆ ಐತಿಹಾಸಿಕ ಕಡಲೆಕಾಯಿ ಪರಿಷೆಗಾಗಿ ಬಸವನಗುಡಿ ಸಜ್ಜಾಗುತ್ತಿದೆ. ಕಡೇ ಕಾರ್ತೀಕ ಸೋಮವಾರ(ನ.25)ದಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಪರಿಚಯಿಸಲು ಭಿನ್ನರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಪರಿಷೆಗೆ ರಾಮನಗರ, ಮಾಗಡಿ, ಕನಕಪುರ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಕಡ್ಲೆಕಾಯಿ ಬರುತ್ತದೆ. ಈ ಬಾರಿ ಈ ಭಾಗಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ…
ಇಂದು ಸೋಮವಾರ , 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು….
ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ. ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ.ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು…
ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…