ಸುದ್ದಿ

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಓರ್ವ ಆಸ್ಪತ್ರೆಗೆ ದಾಖಲು…….!

24

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ.

ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್‌ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು ಮಂದಿ ಚಿಕಿತ್ಸೆಗೆಂದು ಬಂದಿದ್ದರು ಆದರೆ ವರದಿಯಲ್ಲಿ ನಿಪಾಹ್ ವೈರಸ್ ಇಲ್ಲ ಎಂದು ಬಂದಿತ್ತು.

ಎರ್ನಾಕುಲ್ ವಿದ್ಯಾರ್ಥಿ ಇಡುಕಿಗೆ ತರಬೇತಿಗಾಗಿ ಬಂದಿದ್ದ, ಮನೆಗೆ ವಾಪಸಾದಾಗ ತೀವ್ರ ಜ್ವರ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೀಪಾವಳಿಯ ಹಬ್ಬಕ್ಕೆ-ಮನೆಯ ಮುಂಭಾಗ ಎಷ್ಟು ದೀಪಗಳಿರಬೇಕು ಗೊತ್ತಾ?

    ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ. ಪೂಜಾ ಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದುಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು. ನಿಮ್ಮ ಶಕ್ತಿಗನುಸಾರವಾಗಿ 12,…

  • ಸುದ್ದಿ

    ಪನ್ನೀರ್ ಪರೋಟಾದಲ್ಲಿ ಸಿಕ್ಕ ವಸ್ತು ನೋಡಿ ಮೂರ್ಚೆ ಬಿದ್ದ ವ್ಯಕ್ತಿ…!

    ಲಕ್ನೋಪರೋಟಾ ಆರ್ಡರ್ ಮಾಡಿದ್ದಾನೆ. ಪನ್ನೀರ್ ಪರೋಟಾ ತೆರೆಯುತ್ತಿದ್ದಂತೆ ಅದ್ರಲ್ಲಿ ಜಿರಳೆ ಕಂಡಿದೆ. ಜಿರಳೆ ನೋಡ್ತಿದ್ದಂತೆ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗಿದೆ. ಆತ ಮೂರ್ಚೆ ಹೋಗಿದ್ದಾನೆ. ಪರೋಟಾದಲ್ಲಿ ಜಿರಳೆ ಕಂಡ್ರೂ ಮಾಲೀಕ ಮಾತ್ರ ಮಾತು ಬದಲಿಸಿದ್ದಾನೆ. ಹೊರಗಿನಿಂದ ಬಂದಿದೆ ಎಂದಿದ್ದಾನೆ. ಗ್ರಾಹಕ ತಕ್ಷಣ ಎಫ್ ಎಸ್ ಡಿ ಎ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಪನ್ನೀರ್ ಪರೋಟಾವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಎಫ್ ಎಸ್ ಡಿ ಎ ಅಧಿಕಾರಿಗಳು ಡಾಬಾದ ಅಡುಗೆ ಮನೆ ಪರಿಶೀಲಿಸಿದ್ದಾರೆ. ಅಡುಗೆ ಮನೆಯಲ್ಲಿ ಸ್ವಚ್ಛತೆ…

  • ಕ್ರೀಡೆ

    ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಬಾಂಗ್ಲಾದೇಶದ ಕಿಡಿಗೇಡಿ ಕ್ರಿಕೆಟ್ ಅಭಿಮಾನಿಗಳು!ತಿಳಿಯಲು ಈ ಲೇಖನ ಓದಿ….

    ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

  • ಸುದ್ದಿ

    ಹಿಮಪಾತದ ನಡುವೆ ದೇಶ ಸೇವೆ ಸಲ್ಲಿಸುತ್ತಿರುವ ಈ ವೀರಯೋಧನಿಗೊಂದು ಸಲಾಂ. ಜಾಲತಾಣಗಳಲ್ಲಿ ಸಖತ್ ವೈರಲ್.

    ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು…

  • ಸುದ್ದಿ

    ಅಂಬೇಡ್ಕರ್ ಸಂಘಗಳಿಂದ ಚೈತ್ರ ಕೋಟೂರು ವಿರುದ್ಧ ಹೋರಾಟ..!ಯಾಕೆ ಗೊತ್ತಾ?

    ಕನ್ನಡ ನಟಿ, ಸಹಾಯಕ ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೋಟೂರು ಇಷ್ಟುದಿನ ‘ಬಿಗ್ ಬಾಸ್’ ಮನೆಯೊಳಗೆ ವಿವಾದಕ್ಕೀಡಾಗಿದ್ದರು. ನಾಮಿನೇಟ್ ಆದಾಗೆಲ್ಲಾ, ಡೇಂಜರ್ ಝೋನ್ ನಿಂದ ಸೇಫ್ ಆಗಲು ಚೈತ್ರ ಕೋಟೂರು ಕಟ್ಟಿದ ಕಥೆಗಳು, ಮಾಡಿದ ಅವಾಂತರಗಳು ಒಂದೆರಡಲ್ಲ. ಆದರೆ ಆ ಎಲ್ಲಾ ವಿವಾದಗಳು ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು. ಈಗ ನೋಡಿದ್ರೆ, ಚೈತ್ರಕೋಟೂರು ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಇಳಿದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು…

  • ಸುದ್ದಿ

    ಮದುವೆಯಾದ್ರು ಬಸ್​​​ನಲ್ಲೇ ಜೀವನ ನಡೆಸುತ್ತಿರುವ ಪ್ರೇಮಿಗಳು..!ಇದಕ್ಕೆ ಕಾರಣ ಏನು ಗೊತ್ತಾ..?

    ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಬೇರೆಬೇರೆ ಇದ್ದ ಕಾರಣ ಮನೆಯವರು ಧಮಕಿ ಹಾಕಿದ ಘಟನೆ ವಿಜಯಪುರ ದಲ್ಲಿ ನಡೆದಿದೆ. ನಾವು ಒಬ್ಬರಿಗೊಬ್ಬರು ಪ್ರೀತಿಸಿದ್ದೆವೆ, ಮದುವೆ ಕೂಡ ಆಗಿದ್ದೆವೆ ಆದರೆ ನಮಗೆ ಜೀವನ ನಡೆಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಬದಕಲು ಬಿಡಿ ಎಂದು ಪ್ರೇಮಿಗಳು ಅಂಗಲಾಚುತ್ತಿದ್ದಾರೆ. 5 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ನಾವದಗಿತ ಶೃತಿ ಹಾಗೂ ಆಲಮೇಲ ಪಟ್ಟಣದ ಗೌತಮ್​​​ ಪೋಷಕರ ವಿರೋಧದ ಮಧ್ಯೆಯೂ ಸೆಪ್ಟೆಂಬರ್ 25ರಂದು…