ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರ ಆತ್ಮಾಹುತಿ ದಾಳಿ ನಡೆದು 42 ಮಂದಿ ವೀರ ಯೋಧರು ಹುತಾತ್ಮರಾದ ಘಟನೆ ಬಳಿಕ ಉಗ್ರಗಾಮಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಭಾರತದಾದ್ಯಂತ ಕೇಳಿ ಬರುತ್ತಿದೆ.
ಕೇಂದ್ರ ಸರ್ಕಾರವು ಕೂಡ ಈಗಾಗಲೇ ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟಿದೆಯಲ್ಲದೆ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 200 ರಷ್ಟು ಸುಂಕ ವಿಧಿಸುವ ಮೂಲಕ ಆರ್ಥಿಕ ಹೊಡೆತವನ್ನು ನೀಡಲು ಮುಂದಾಗಿದೆ.
ಇದರ ಜೊತೆಗೆ ಪ್ರತ್ಯೇಕತಾವಾದಿಗಳಿಗೆ ನೀಡಿದ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ನಡುವೆ ತಮ್ಮ ವಿರುದ್ಧ ಯಾವುದೇ ಸಮಯದಲ್ಲಿ ಭಾರತೀಯ ಸೇನೆಯಿಂದ ದಾಳಿ ನಡೆಯಬಹುದೆಂಬ ಭೀತಿಯಲ್ಲಿರುವ ರಣಹೇಡಿ ಉಗ್ರಗಾಮಿಗಳು, ಪಾಕ್ ಗಡಿಯಿಂದ ಸುರಕ್ಷಿತ ಸ್ಥಳಗಳಿಗೆ ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಪಾಕಿಸ್ತಾನ ಸೇನೆಯು ಇವರುಗಳ ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…
ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.ಕೊಬ್ಬರಿ ಕಪ್ಪು ಭಾಗವನ್ನು…
ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…
wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…
ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ. ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…
ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.